ಕೊಪ್ಪಳ, 12 ಜನವರಿ (ಹಿ.ಸ.) :
ಆ್ಯಂಕರ್ : ಹೆಂಡತಿಯು ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ ಪತಿಯು ಪತ್ನಿಯನ್ನು ಕೊಲೆ ಮಾಡಿದ ಘಟನೆ ಗವಿಮಠದ ಆವರಣದಲ್ಲಿ ಭಾನುವಾರ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೃತಳು ಗೀತಾ ರಾಜೇಶ (24) ಎಂದು ಪೊಲೀಸರು ತಿಳಿಸಿದ್ದಾರೆ.
ತುಮಕೂರು ಜಿಲ್ಲೆಯ ತುರ್ವಿಕೆರೆಯ ಭೂವನಹಳ್ಳಿಯ ರಾಜೇಶ ಕೊಲೆ ಆರೋಪಿ. ದಂಪತಿಗಳಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿದೆ. ಆರು ವರ್ಷಗಳ ಹಿಂದೆಯೇ ಪ್ರೀತಿಸಿ ಇವರು ವಿವಾಹವಾಗಿದ್ದರು.
ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಸಾಮಾನು ಮಾರಾಟಕ್ಕೆ ಬಂದಿದ್ದ ದಂಪತಿ ನಾಲ್ಕು ದಿನಗಳಿಂದಲೂ ಜಗಳವಾಡುತ್ತಲೇ ಇದ್ದರು. ಗಂಡ - ಹೆಂಡತಿ ನಡುವಿನ ಜಗಳಕ್ಕೆ ಬೇಸತ್ತ ಗೀತಾ ಊರಿಗೆ ಹಿಂದಿರುಗಲು ಮುಂದಾಗಿದ್ದಾಗ, ಚಾಕುವಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್