ನವದೆಹಲಿ, 12 ಜನವರಿ (ಹಿ.ಸ.) :
ಆ್ಯಂಕರ್ : ಭಾನುವಾರ ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ ಕಂಡಿದ್ದು ,ಬೆಳ್ಳಿ ಬೆಲೆಯಲ್ಲಿ ಇಳಿಕೆ ಆಗಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 7,286 ರೂನಿಂದ 7,300 ರೂ ಗಡಿ ಮುಟ್ಟಿದೆ.
ಅಪರಂಜಿ ಚಿನ್ನದ ಬೆಲೆ 7,964 ರೂ ಆಗಿದೆ. ವಿದೇಶಗಳಲ್ಲಿ ಚಿನ್ನದ ಬೆಲೆಯಲ್ಲಿ ಏರುಪೇರುಗಳಾಗಿವೆ. ದುಬೈ ಮೊದಲಾದ ಕಡೆ ಬೆಲೆ ಇಳಿಕೆಯಾಗಿದೆ. ಇತರ ಹಲವೆಡೆ ಬೆಲೆಯಲ್ಲಿ ಅಲ್ಪ ಹೆಚ್ಚಳ ಆಗಿದೆ.
ಬೆಳ್ಳಿ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ಸದ್ಯ ಬೆಳ್ಳಿ ಬೆಲೆ 93.50 ರೂನಲ್ಲಿದೆ. ಕಳೆದ 10 ದಿನಗಳಿಂದ ಬೆಳ್ಳಿ ಬೆಲೆಯಲ್ಲಿ 3 ರೂಗಳಷ್ಟು ಹೆಚ್ಚಳವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa