ಹುಬ್ಬಳ್ಳಿ, 10 ಜನವರಿ (ಹಿ.ಸ.) :
ಆ್ಯಂಕರ್ : ಆಸ್ತಿಗಾಗಿ ಇಪ್ಪತೈದು ವರ್ಷದ ಯುವಕನೋರ್ವ ತಂದೆ ಹಾಗೂ ಮಲತಾಯಿಯನ್ನ ಮನೆಯಲ್ಲಿ ಕೊಚ್ಚಿ ಕೊಂದು ಪರಾರಿಯಾಗಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದೆ.
ಅಶೋಕ ಕೊದ್ದಣ್ಣನವರ ಮತ್ತು ಶಾರದಾ ಕೊದ್ದಣ್ಣನವರ ಎಂಬುವವರ ಹತ್ಯೆಯಾಗಿದ್ದು, ಅಶೋಕನ ಮೊದಲ ಪತ್ನಿಯ ಮಗ ಗಂಗಾಧರ ಅಲಿಯಾಸ್ ಗಂಗಪ್ಪ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಕಳೆದ ರಾತ್ರಿ ಮನೆಯಲ್ಲಿ ಹೆಚ್ಚು ಶಬ್ಧ ಬರುವಂತೆ ಸ್ಪೀಕರ್ ಹಚ್ಚಿ, ಪಕ್ಕದವರಿಗೆ ಗೊತ್ತಾಗದ ಹಾಗೇ ಕೊಲೆ ಮಾಡಲಾಗಿದೆ. ಪರಾರಿಯಾಗಿರುವ ಆರೋಪಿಯ ಪತ್ತೆಗಾಗಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಜಾಲ ಬೀಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa