ಗಣರಾಜ್ಯೋತ್ಸವ ಪಥ ಸಂಚಲನ ವೀಕ್ಷಣೆಗೆ ಹತ್ತು ಸಾವಿರ ಅತಿಥಿಗಳ ಆಹ್ವಾನ
 
:


ನವದೆಹಲಿ,10 ಜನವರಿ (ಹಿ.ಸ.) :

ಆ್ಯಂಕರ್ :ಈ ವರ್ಷದ ಗಣರಾಜ್ಯೋತ್ಸವದ ಪಥ ಸಂಚಲನ ವೀಕ್ಷಿಸಲು ಸುಮಾರು ಹತ್ತು ಸಾವಿರ ವಿಶೇಷ ಅತಿಥಿಗಳನ್ನು ಆಹ್ವಾನಿಸಲಾಗಿದೆ.

ಈ ವಿಶೇಷ ಅತಿಥಿಗಳಲ್ಲಿ ಪಂಚಾಯಿತಿಗಳ ಮುಖ್ಯಸ್ಥರು, ವಿಪತ್ತು ನಿರ್ವಹಣಾ ತಂಡದ ಕಾರ್ಯಕರ್ತರು, ಜಲ ಯೋಧರು, ಕೈಮಗ್ಗ ಮತ್ತು ಕರಕುಶಲ ಕುಶಲಕರ್ಮಿಗಳು, ಮನ್ ಕಿ ಬಾತ್‌ನಲ್ಲಿ ಭಾಗವಹಿಸಿದವರು. ಮೈ ಭಾರತ್ ಸ್ವಯಂಸೇವಕರು, ಈಶಾನ್ಯ ರಾಜ್ಯಗಳ ಅತಿಥಿಗಳು ಮತ್ತು ಅತ್ಯುತ್ತಮ ನವೋದ್ಯಮಿಗಳು ಸೇರಿದ್ದಾರೆ.

ಆಹ್ವಾನಿತ ಅತಿಥಿಗಳಲ್ಲಿ ಕೆಲವರು ಸ್ವ-ಸಹಾಯ ಗುಂಪುಗಳ ಮೂಲಕ ಆದಾಯ ಮತ್ತು ಉದ್ಯೋಗ ಸೃಷ್ಟಿಯನ್ನು ಖಚಿತಪಡಿಸಿಕೊಳ್ಳಲು ಅತ್ಯುತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ರಕ್ಷಣಾ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ಯಾರಾ-ಒಲಿಂಪಿಕ್ ತಂಡದ ಸದಸ್ಯರು, ಚೆಸ್ ಒಲಿಂಪಿಯಾಡ್‌ನ ಪದಕ ವಿಜೇತರು, ಬ್ರಿಡ್ಜ್ ವರ್ಲ್ಡ್ ಗೇಮ್ಸ್‌ನ ಬೆಳ್ಳಿ ಪದಕ ವಿಜೇತರು ಮತ್ತು ಸ್ನೂಕರ್ ವರ್ಲ್ಡ್ ಚಾಂಪಿಯನ್‌ಶಿಪ್ ಚಿನ್ನದ ಪದಕ ವಿಜೇತರನ್ನು ಸಹ ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿದೆ.

ಈ ಅತಿಥಿಗಳು ರಾಷ್ಟ್ರೀಯ ಯುದ್ಧ ಸ್ಮಾರಕ, ಪ್ರಧಾನಮಂತ್ರಿ ವಸ್ತು ಸಂಗ್ರಹಾಲಯ ಮತ್ತು ದೆಹಲಿಯ ಇತರೆ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ


 rajesh pande