ಕಲಬುರಗಿ, 08 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಮಾರಕಾಸ್ತ್ರಗಳಿಂದ ಹೊಡೆದು ವ್ಯಕ್ತಿಯೊರ್ವನ ಭೀಕರ ಹತ್ಯೆ ಮಾಡಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.
ನಗರದ ಹೊರವಲಯದ ಕೆಸರಟಗಿ ಬಳಿ 38 ವರ್ಷದ ಕಪಿಲ್ ಗಾಯಕ್ವಾಡ ಎಂಬಾತನ ಕೊಲೆಯಾಗಿದ್ದು ಪತ್ನಿಯ ಸಮ್ಮುಖದಲ್ಲಿಯೇ ಕಪಿಲನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಸೆಂಟ್ರಿಂಗ್ ಕೆಲಸ ಮುಗಿಸಿಕೊಂಡು ಕೆಸರಟಗಿಗೆ ಹೊಗುವಾಗ
ಕೆಸರಟಗಿ ಬಳಿಯ ರೈಲ್ವೆ ಅಂಡರ್ ಬ್ರೀಡ್ಜ್ ಬಳಿ ಹತ್ಯೆ ಮಾಡಲಾಗಿದೆ. ಕಪಿಲ್ ಕುಟುಂಬಸ್ಥರಿಂದ ಕಪಿಲ್ ಪತ್ನಿ ಭಾಗ್ಯ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲಿಸರು ತನಿಖೆ ಕೈಗೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa