ವಿಶ್ವ ಆಹಾರ ಮೇಳ,ಸಿದ್ಧತೆ ಪರಿಶೀಲಿಸಿದ ಸಚಿವ ಚಿರಾಗ್ ಪಾಸ್ವಾನ್
ನವದೆಹಲಿ, 04 ಸೆಪ್ಟೆಂಬರ್(ಹಿ.ಸ.) : ಆ್ಯಂಕರ್ : ಇದೇ ೧೯ ರಿಂದ ೨೨ ರವರೆಗೆ ವಿಶ್ವ ಆಹಾರ ಮೇಳ ಆಯೋಜನೆಗೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಚಿರಾಗ್ ಪಾಸ್ವಾನ್ ನವದೆಹಲಿಯಲ್ಲಿ ಭಾರತ ಮಂಟಪಮ್‌ನಲ್ಲಿ ಮೇಳದ ಸಿದ್ಧತೆ ಪರಿಶೀಲಿಸಿದರು. ಪ್ರದರ್ಶನ ನಡೆಯುವ ಸ್ಥಳ, ಸಮ್ಮೇ
Chirag Paswan visits Bharat Mandapam, New Delhi


ನವದೆಹಲಿ, 04 ಸೆಪ್ಟೆಂಬರ್(ಹಿ.ಸ.) :

ಆ್ಯಂಕರ್ : ಇದೇ ೧೯ ರಿಂದ ೨೨ ರವರೆಗೆ ವಿಶ್ವ ಆಹಾರ ಮೇಳ ಆಯೋಜನೆಗೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಚಿರಾಗ್ ಪಾಸ್ವಾನ್ ನವದೆಹಲಿಯಲ್ಲಿ ಭಾರತ ಮಂಟಪಮ್‌ನಲ್ಲಿ ಮೇಳದ ಸಿದ್ಧತೆ ಪರಿಶೀಲಿಸಿದರು.

ಪ್ರದರ್ಶನ ನಡೆಯುವ ಸ್ಥಳ, ಸಮ್ಮೇಳನ ಸಭಾಂಗಣ ಹಾಗೂ ಇನ್ನಿತರ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು. ಇದೇ ವೇಳೆ ಆಯೋಜಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಉನ್ನತ ಮಟ್ಟದಲ್ಲಿ ನಡೆಸುವಂತೆ ಸೂಚಿಸಿದರು.

ವಿಶ್ವ ಆಹಾರ ಮೇಳ, ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ಪ್ರಮುಖ ಕಾರ್ಯಕ್ರಮವಾಗಿದ್ದು ಆಹಾರ ಸಂಸ್ಕರಣೆಯಲ್ಲಿ ಜಾಗತಿಕವಾಗಿ ನೂತನ ತಂತ್ರಜ್ಞಾನ ಹಾಗೂ ನಾವೀನ್ಯತೆ ಕಂಡುಕೊಳ್ಳಲು ಉತ್ತಮ ಅವಕಾಶ ಲಭ್ಯವಾಗಲಿದೆ. ಭವಿಷ್ಯದಲ್ಲಿ ಆಹಾರ ಸಂಸ್ಕರಣೆ ವಿಧಾನದಲ್ಲಿ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳಲು ಬೇಕಾದ ಸಹಕಾರ, ಸಂಪರ್ಕ ಜಾಲ ಕುರಿತಂತೆ ಸರಣಿ ಚರ್ಚೆಗಳು ಈ ಮೇಳದಲ್ಲಿ ನಡೆಯಲಿವೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande