ಬಂಗಾಳದ ‘ಅಪರಾಜಿತಾ’ ಅತ್ಯಾಚಾರ ವಿರೋಧಿ ಮಸೂದೆ ,ಅಪರಾಧವನ್ನು ತಡೆಯಲ ವಿಫಲ-ಕಿರಣ್ ರಿಜಿಜು
ನವದೆಹಲಿ, 04 ಸೆಪ್ಟೆಂಬರ್(ಹಿ.ಸ.) : ಆ್ಯಂಕರ್ : ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ತರಬೇತಿ ನಿರತ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ರಾಜಕೀಯ ಚರ್ಚೆ ಮುಂದುವರೆದಿದೆ. ನಿನ್ನೆ ಮಂಗಳವಾರ ಪಶ್ಚಿಮ ಬಂಗಾಳ ಶಾಸಕಾಂಗ ಸಭೆಯು ‘ಅಪರಾಜಿತಾ’ ಅತ್ಯಾಚಾರ
Kiren Rijiju


ನವದೆಹಲಿ, 04 ಸೆಪ್ಟೆಂಬರ್(ಹಿ.ಸ.) :

ಆ್ಯಂಕರ್ : ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ತರಬೇತಿ ನಿರತ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ರಾಜಕೀಯ ಚರ್ಚೆ ಮುಂದುವರೆದಿದೆ. ನಿನ್ನೆ ಮಂಗಳವಾರ ಪಶ್ಚಿಮ ಬಂಗಾಳ ಶಾಸಕಾಂಗ ಸಭೆಯು ‘ಅಪರಾಜಿತಾ’ ಅತ್ಯಾಚಾರ ವಿರೋಧಿ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿತ್ತು. ಇದೀಗ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಪ್ರಸ್ತುತ ಮಸೂದೆ ಬಗ್ಗೆ ಇಂದು ಪ್ರತಿಕ್ರಿಯಿಸಿದ್ದಾರೆ.

ನವೆಂಬರ್ 11, 2018 ರ ಪತ್ರದ ಪ್ರತಿಯನ್ನು ಸಾಮಾಜಿಕ ಮಾಧ್ಯಮ ವೇದಿಕಯ ಎಕ್ಸ್‌ನಲ್ಲಿ ಹಂಚಿಕೊಂಡ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ‘ಅಪರಾಜಿತಾ ಮಹಿಳೆ ಮತ್ತು ಮಕ್ಕಳ ಮಸೂದೆ (ಪಶ್ಚಿಮ ಬಂಗಾಳದ ಅಪರಾಧ ಕಾನೂನುಗಳು ಮತ್ತು ತಿದ್ದುಪಡಿ) 2024 ಮಸೂದೆಯನ್ನು ಪರಿಚಯಿಸುವ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವೈದ್ಯೆಯ ಸಾವನ್ನು ರಾಜಕೀಯಗೊಳಿಸಿದ್ದಾರೆ. ಅವರು ಆರಂಭದಲ್ಲಿ ಅಪರಾಧವನ್ನು ತಡೆಯಲು ವಿಫಲರಾಗಿದ್ದಾರೆ ಎಂದಿದ್ದಾರೆ.

2018 ರಲ್ಲಿ, ಸಂಸತ್ತು “ಅತ್ಯಾಚಾರದಂತಹ ಘೋರ ಅಪರಾಧಗಳಿಗೆ ಕಠಿಣ ಕಾನೂನನ್ನು” ಅಂಗೀಕರಿಸಿದೆ. ಇದು ತ್ವರಿತ ವಿಚಾರಣೆ ಮತ್ತು ಬಾಕಿ ಉಳಿದಿರುವ ಅತ್ಯಾಚಾರ ಮತ್ತು ಪೋಕ್ಸೊ ಕಾಯಿದೆಯ ಪ್ರಕರಣಗಳ ಪರಿಹಾರಕ್ಕಾಗಿ ತ್ವರಿತ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.2019, 2020 ಮತ್ತು 2021 ರಲ್ಲಿ ಬಹು ಸಂವಹನಗಳ ಹೊರತಾಗಿಯೂ, 2018 ರ ಕ್ರಿಮಿನಲ್ ಕಾನೂನು (ತಿದ್ದುಪಡಿ) ಕಾಯ್ದೆಯಡಿಯಲ್ಲಿ ತೃಣಮೂಲ ಕಾಂಗ್ರೆಸ್ ಸರ್ಕಾರವು ಈ ಕೇಂದ್ರ ಪ್ರಾಯೋಜಿತ ಯೋಜನೆಗೆ ಒಪ್ಪಿಗೆ ನೀಡಲಿಲ್ಲ ಎಂದಿದ್ದಾರೆ ರಿಜಿಜು. ಪತ್ರದಲ್ಲಿ ಪಶ್ಚಿಮ ಬಂಗಾಳದಲ್ಲಿ ಬಾಕಿ ಉಳಿದಿರುವ ಅತ್ಯಾಚಾರ ಮತ್ತು ಪೋಕ್ಸೊ ಕಾಯ್ದೆ ಪ್ರಕರಣಗಳ ತ್ವರಿತ ವಿಚಾರಣೆ ಮತ್ತು ವಿಲೇವಾರಿಗಾಗಿ ಎಫ್‌ಟಿಎಸ್‌ಸಿ ಸ್ಥಾಪನೆಯಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ಮಧ್ಯಸ್ಥಿಕೆಯನ್ನು ಕೋರಿದ್ದಾರೆ ರಿಜಿಜು.ಮಹಿಳೆಯರು ಮತ್ತು ಮಕ್ಕಳಿಗೆ ತ್ವರಿತ ನ್ಯಾಯ ಒದಗಿಸುವ ತನ್ನ “ಅತ್ಯಂತ ಪವಿತ್ರ ಕರ್ತವ್ಯ”ವನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ನಿರ್ಲಕ್ಷಿಸಿದ್ದಾರೆ ಎಂಬುದಕ್ಕೆ ಬೇಜಾರಾಗಿದೆ ಎಂದು ರಿಜಿಜು ಹೇಳಿದ್ದಾರೆ.

“ಇದು ಅತ್ಯಂತ ಗಂಭೀರವಾದ ವಿಷಯ. ದಯವಿಟ್ಟು ಇದನ್ನು ರಾಜಕೀಯ ವಿಷಯವನ್ನಾಗಿ ಮಾಡಬೇಡಿ. ಬಲವಾದ ಕಾನೂನುಗಳು ಅಗತ್ಯ ಆದರೆ ಬಲವಾದ ಕ್ರಮಗಳು ಹೆಚ್ಚು ಮುಖ್ಯ. ಪತ್ರ ಬರೆದಾಗ, ಮಾಧ್ಯಮಗಳು ಈ ಸುದ್ದಿಯನ್ನು ವ್ಯಾಪಕವಾಗಿ ಪ್ರಸಾರ ಮಾಡಿದ್ದವು, ಆದರೆ ಪಶ್ಚಿಮ ಬಂಗಾಳ ಸರ್ಕಾರವು ಕಾರ್ಯನಿರ್ವಹಿಸಲು ವಿಫಲವಾಗಿದೆ! ಎಂದು ರಿಜಿಜು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande