ಬೆಂಗಳೂರು, 02 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಆಗಸ್ಟ್ ತಿಂಗಳು ಕಳೆದು ಸೆಪ್ಟೆಂಬರ್ ತಿಂಗಳು ಬಂತು. ಈ ತಿಂಗಳಿನಲ್ಲಿ ಕೆಲವು ಮೋಟಾರು ವಾಹನ ತಯಾರಿಕ ಕಂಪನಿಗಳು ನೂತನ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಅದರಂತೆಯೇ ಹಬ್ಬದ ಸುಸಮಯದಲ್ಲಿ ಯಾವೆಲ್ಲಾ ಕಾರುಗಳನ್ನು ಮಾರುಕಟ್ಟೆಗೆ ಬರಲಿವೆ ಎಂದು ನೋಡೋಣ.
ಟಾಟಾ ಕರ್ವ್ ಐ ಸಿ ಇ
ಟಾಟಾ ಕಳೆದ ತಿಂಗಳು ಟಾಟಾ ಕರ್ವ್ ಹೆಸರಿನಲ್ಲಿ ಎಲೆಕ್ಟ್ರಿಕ್ ಆವೃತ್ತಿಯನ್ನು ಪರಿಚಯಿಸಿತ್ತು. ಆದರೆ ಟಾಟಾ ಕರ್ವ್ ಐ ಸಿ ಇ ಹೆಸರಿನ ಇಂಧನ ಚಾಲಿತ ರೂಪಾಂತರವನ್ನು ಪರಿಚಯಿಸುತ್ತಿದೆ. ಅಂದಹಾಗೆಯೇ ಈ ನೂತನ ಕಾರು ಇಂದು ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿದೆ.ನೂತನ ಕಾರಿನ ಬೆಲೆ 12-18 ಲಕ್ಷ ರೂಪಾಯಿ ಎಂದು ನಿರೀಕ್ಷಿಸಲಾಗಿದೆ. ಖರೀದಿದಾರರಿಗೆ ಈ ಕಾರಿನ ಮೇಲೆ ಹಲವು ಆಯ್ಕೆಗಳಿವೆ. ಅಟ್ಲಾಸ್ ವೇದಿಕೆಯಲ್ಲಿ ಕಾರನ್ನು ತಯಾರಿಸಲಾಗಿದೆ. ಮೊದಲು ಎಲೆಕ್ಟ್ರಿಕ್ ರೂಪಾಂತರದಲ್ಲಿ ಪರಿಚಯಿಸಲಾಯಿತು. ಇದೀಗ ಎರಡು ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ ಮತ್ತು ಡೀಸೆಲ್ ಆಯ್ಕೆಯೊಂದಿಗೆ ಬರುತ್ತಿದೆ.
2024 ಹುಂಡೈ ಅಲ್ಕಾಜರ್
ಹುಂಡೈ ಅಲ್ಕಾಜರ್ 2024ನೇ ವರ್ಷದಲ್ಲಿ ಹಲವು ನವೀಕರಣವನ್ನು ತರುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಯಶಸ್ವಿ ಮಾದರಿಯಾಗಿ ಗುರುತಿಸಿಕೊಂಡ ಈ ಕಾರು ಸೆಪ್ಟೆಂಬರ್ 9ರಂದು ಬಿಡುಗಡೆಯಾಗುತ್ತಿದೆ. ಸುಧಾರಿತ ತಂತ್ರಜ್ಞಾನ ಮತ್ತು ಆಧುನಿಕ ಸೌಕರ್ಯವನ್ನು ನೂತನ ಕಾರು ಹೊಂದಿದೆ. ಅಂದಹಾಗೆಯೇ ಇದು ಎಸ್ಯುವಿಯ ಫೇಸ್ಲಿಫ್ಟ್ ಮಾದರಿಯಾಗಿದೆ.
ಹುಂಡೈ ಅಲ್ಕಾಜರ್ 1.5 ಲೀಅರ್ ಟರ್ಬೋ ಎಂಜಿನ್ನೊಂದಿಗೆ ಬರುತ್ತಿದೆ. 157.8ಬಿಹೆಚ್ಪಿ ಮತ್ತು 23ಎನ್ಎಮ್ ಟಾರ್ಕ್ ಉತ್ಪಾದಿಸುತ್ತದೆ. 6 ಸ್ಪೀಡ್ ಮ್ಯಾನುವೆಲ್ 7 ಸ್ಟೀಡ್ ಡ್ಯುಯೆಲ್ ಕ್ಲಚ್ ಅಟೋಮ್ಯಾಟಿಕ್ ಟ್ರಾನ್ಸ್ಮಿಷನ್ನೊಂದಿಗೆ ಬರುತ್ತಿದೆ.
ಎಂಜಿ ವಿಂಡ್ಸರ್ ಇವಿ
ಸೆಪ್ಟೆಂಬರ್ನಲ್ಲಿ ಮಾರುಕಟ್ಟೆಗೆ ಕಾಲಿಡುತ್ತಿರುವ ಮತ್ತೊಂದು ಕಾರು ಇದಾಗಿದೆ. ಇಂಡೋನೇಷ್ಯಾದಲ್ಲಿ ಕ್ಲೌಡ್ ಇವಿ ಎಂದು ಪರಿಚಯಗೊಂಡಿರುವ ಈ ಕಾರು ಭಾರತದಲ್ಲಿ ಎಂಜಿ ವಿಂಡರ್ಸ್ ಇವಿ ಎಂದು ಪರಿಚಯಗೊಳ್ಳಲಿದೆ. ಇಂದೇ ತಿಂಗಳು 11ನೇ ತಾರೀಖು ಮಾರುಕಟ್ಟೆಗೆ ಬರಲಿದೆ.
ನೂತನ ಕಾರು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಬರುತ್ತಿದೆ. ಇದರಲ್ಲಿ ಸುರಕ್ಷತೆಗಾಗಿ 360 ಡಿಗ್ರಿ ಕ್ಯಾಮೆರಾ, ಇಬಿಡಿ ಮತ್ತು ಎ ಬಿ ಎಸ್ , ಪಾರ್ಕಿಂಗ್ ಸಂವೇದಕ ಒಳಗೊಂಡಿದೆ. ಮಾತ್ರವಲ್ಲದೆ, ಪ್ರಯಾಣಿಕರಿಗೆ ಸಂಪೂರ್ಣ ವಿಶಾಲವಾದ ಹಿಂಬದಿಯ ಆಸನ ವ್ಯವಸ್ಥೆ, 15.6 ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸೇರಿ ಹಲವು ವೈಶಿಷ್ಟ್ಯಗಳು ಇದರಲ್ಲಿವೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್