ಬೆಂಗಳೂರು, 10 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ನಟಿ ರಾಗಿಣಿ ಅವರಿಗೂ ರೇಣುಕಾಸ್ವಾಮಿ ಸಂದೇಶ ಕಳುಹಿಸಿದ್ದ ಎಂಬ ವಿಚಾರ ಜಾರ್ಜ್‌ಶೀಟ್ ನಲ್ಲಿ ಉಲ್ಲೇಖವಾಗಿತ್ತು. ಇದಕ್ಕೆ ರಾಗಿಣಿ ಪ್ರತಿಕ್ರಿಯಿಸಿ, ಅಶ್ಲೀಲ ಸಂದೇಶಗಳು ನನಗೆ ಬಂದಿರುವ ಮಾಹಿತಿ ಇಲ್ಲ ಎಂದಿದ್ದಾರೆ.
ನನ್ನ ಪ್ರೊಫೈಲ್ ಅನ್ನು ಏಜೆನ್ಸಿ ಹ್ಯಾಂಡಲ್ ಮಾಡುತ್ತದೆ. ಹೀಗಾಗಿ ಅಶ್ಲೀಲ ಸಂದೇಶಗಳು ನನಗೆ ಬಂದಿರುವ ಮಾಹಿತಿ ಇಲ್ಲ. ಬಂದಿದ್ದರೂ ನಾನು ಓದುವುದಿಲ್ಲ ಎಂದಿದ್ದಾರೆ. ನನ್ನ ಗಮನಕ್ಕೆ ಬಂದಂತೆ ಯಾವುದೇ ಕೆಟ್ಟ ಸಂದೇಶ ಬಂದಿಲ್ಲ ಎಂದು ರಾಗಿಣಿ ಸ್ಪಷ್ಟನೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್