ಮೀಟರ ಬಡ್ಡಿ  ದಂಧೆಕೋರರ ಬಂಧನ
ಹುಬ್ಬಳ್ಳಿ, 01 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಸಾರ್ವಜನಿಕರಿಂದ ಬಂದ ದೂರಿನ ಆಧಾರದ ಮೇರೆಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುವ 23 ದಂಧೆಕೋರರನ್ನು ಬಂಧಿಸಿ, 16 ಪ್ರಕರಣವನ್ನು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂ
Arrest


ಹುಬ್ಬಳ್ಳಿ, 01 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಸಾರ್ವಜನಿಕರಿಂದ ಬಂದ ದೂರಿನ ಆಧಾರದ ಮೇರೆಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುವ 23 ದಂಧೆಕೋರರನ್ನು ಬಂಧಿಸಿ, 16 ಪ್ರಕರಣವನ್ನು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ತಿಳಿಸಿದರು.

ಈ ಕುರಿತು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ 4 ಜನ ಆರೋಪಿಗಳಾದ ರಾಜೇಶ್ ಮೆಹರವಾಡೆ, ಮೋಹಿತ್ ಮೆಹರವಾಡೆ, ಅನೀತಾ ಹಬೀಬ್, ದೀಪಾ ಶೆಲವಡಿ ಇವರ ಮೇಲೆ 2 ಪ್ರಕರಣ, ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸತೀಶ್ ದೊಡ್ಡಮನಿ ವಿರುದ್ಧ 1 ಪ್ರಕರಣ, ಕಮರಿಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಧನಲಕ್ಷ್ಮೀ ಮದ್ರಾಸಿ ಎಂಬವಳ ವಿರುದ್ಧ 1 ಪ್ರಕರಣ, ಗೋಕುಲ್ ರೋಡ್ ಪೊಲೀಸ್ ಠಾಣೆ ಯಲ್ಲಿ ಸೋಲೋಮನ್ ಬಬ್ಬಾ, ಆನಂದ ರಾಯಚೂರು ವಿರುದ್ಧ 1 ಪ್ರಕರಣ, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ನವೀನ್ ಭಾಂಡಗೆ, ದತ್ತು ಪಟ್ಟನ್ ವಿರುದ್ಧ 2 ಪ್ರಕರಣ, ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಸ್ಟೀಫನ್ ಕ್ಷೀರಸಾಗರ ವಿರುದ್ಧ 1 ಪ್ರಕರಣ ದಾಖಲಾಗಿದೆ.

ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಸಮೀರ್, ಸೈಯದಲಿ, ಬಿ.ಕೆ.ಬಾಯಿ, ಹ್ಯಾರಿಶ್ ಪಠಾಣ ವಿರುದ್ಧ 2 ಪ್ರಕರಣ, ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಜಾವೇದ್ ಘೋಡೆಸವಾರ ವಿರುದ್ಧ 1 ಪ್ರಕರಣ, ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಶಾಕೀರ ಕರಡಿಗುಡ್ಡ ವಿರುದ್ಧ 1 ಪ್ರಕರಣ, ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಗಿರಿಯಪ್ಪ ಬಳ್ಳಾರಿ, ಬಾಲು ಬಳ್ಳಾರಿ, ಅಭಿಲೇಖಾ ತೋಖಾ ವಿರುದ್ಧ 1 ಪ್ರಕರಣ, ಕಸಬಾ ಪೊಲೀಸ್ ಠಾಣೆಯಲ್ಲಿ ತನ್ವೀರ್ ಜಂಗ್ಲಿವಾಲೆ ವಿರುದ್ಧ 1 ಪ್ರಕರಣ, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ನಾರಾಯಣ ಕಾಟಗಾರ ವಿರುದ್ಧ 1 ಪ್ರಕರಣ ದಾಖಲಾಗಿದೆಂದರು.

ಒಟ್ಟು ಆರೋಪಿತರಿಂದ ಅಂದಾಜು 4 ಲಕ್ಷ ರೂ. ಮೌಲ್ಯದ ಬೆಳ್ಳಿ ಚೈನ್, ಬೈಕ್ ಗಳು, ಖಾಲಿ ಚೆಕ್, ಬಾಂಡ್ ಪೇಪರ್, ಮೊಬೈಲ್ ಫೋನ್ ಗಳು, ವಾಹನದ ಮೂಲ ದಾಖಲಾತಿಗಳು ಸೇರಿದಂತೆ ಮೊದಲಾದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದರು.

ಇನ್ನೂ ಈ ಹಿಂದೆ 7 ಪ್ರಕರಣದಲ್ಲಿ 25 ಬಡ್ಡಿ ದಂಧೆಕೋರರ ಬಂಧಿಸಲಾಗಿತ್ತು, ಸಾರ್ವಜನಿಕರಿಗೆ ಬಡ್ಡಿ ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಬಡ್ಡಿಕುಳಗಳ ಮೇಲೆ ನೊಂದವರು ದೂರು ನೀಡಿದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande