ಬಳ್ಳಾರಿ, 30 ಆಗಸ್ಟ್ (ಹಿ.ಸ.):
ಆ್ಯಂಕರ್ : ನಟ ದರ್ಶನ್ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟ ಚಲನಚಿತ್ರ ‘ಕರಿಯ’. ಈ ಚಿತ್ರ ಬಿಡುಗಡೆ ಆಗಿದ್ದು 2003ರ ಜನವರಿ 3ರಂದು. ಈ ಚಲನ ಚಿತ್ರ ಬಿಡುಗಡೆ ಆಗುವ ಹಿಂದಿನ ದಿನ ಬಹುಶಃ ಅವರಿಗೆ ಉತ್ಸಾಹಕತೆ ನಿದ್ದೆ ಬಂದಿರಲಿಕ್ಕಿಲ್ಲ. ಇದೇ ಚಲನಚಿತ್ರ ಇಂದು ಮರು ಬಿಡುಗಡೆ ಆಗುತ್ತಿದೆ. ಇದರ ಹಿಂದಿನ ದಿನವೂ ಅವರಿಗೆ ಸರಿಯಾಗಿ ನಿದ್ದೆ ಬಂದಿಲ್ಲ. ಇದಕ್ಕೆ ಕಾರಣ ಉತ್ಸಾಹಕತೆ ಅಲ್ಲ, ಕಾರಾಗೃಹ.
ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್ಗೆ ರಾಜಾತಿಥ್ಯ ನೀಡಲಾಗುತ್ತಿತ್ತು. ಹೀಗಾಗಿ, ಅವರು ಹಾಯಾಗಿ ನಿದ್ದೆ ಮಾಡುತ್ತಿದ್ದರು. ಆದರೆ, ಬಳ್ಳಾರಿ ಕಾರಾಗೃಹದಲ್ಲಿ ವಿಶೇಷ ಆತಿಥ್ಯಕ್ಕೆ ಕಡಿವಾಣ ಹಾಕಲಾಗಿದೆ. ಇದು ದರ್ಶನ್ಗೆ ನುಂಗಲಾರದ ತುತ್ತಾಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ನಂತರ ಬಂಧನಕ್ಕೆ ಒಳಗಾಗಿ ಹಾಯಾಗಿದ್ದ ಅವರು ಈಗ ನಿಜವಾದ ಸಂಕಷ್ಟ ಅನುಭವಿಸುತ್ತಿದ್ದಾರೆ.
ಸದ್ಯ ಕುಟುಂಬದವರಿಗೆ ಮಾತ್ರ ಭೇಟಿಗೆ ಅವಕಾಶ ಇದೆ. ಅವರು ರಾತ್ರಿ ನಿದ್ದೆ ಇಲ್ಲದೆ ಒದ್ದಾಡಿದ್ದಾರೆ.
ಬಳ್ಳಾರಿ ಕಾರಾಗೃಹದಲ್ಲಿ ನಟ ದರ್ಶನ್ ಮೊದಲ ದಿನ ಕಳೆದಿದ್ದಾರೆ. ರಾತ್ರಿ 1 ಗಂಟೆವರೆಗೆ ನಿದ್ದೆ ಮಾಡದೆ ಒದ್ದಾಡಿದ್ದಾರೆ. ಕಾರಾಗೃಕ್ಕೆ ಇನ್ನೂ ಅವರು ಹೊಂದಿಕೊಂಡಿಲ್ಲ. ಜೈಲಿನಲ್ಲಿ ಬೆಳಗಿನ ಉಪಾಹಾರಕ್ಕೆ ಉಪ್ಪಿಟ್ಟು ತಿಂದಿದ್ದಾರೆ. ಅವರಿಗೆ ಜೈಲಿನ ನಿಯಮದಂತೆ 355 ಗ್ರಾಮ್ ಉಪ್ಪಿಟ್ಟು ನೀಡಲಾಗಿದೆ. ಬಳ್ಳಾರಿ ಕಾರಾಗೃಹಕ್ಕೆ ದರ್ಶನ್ ಅವರನ್ನು ನಿನ್ನೆ ಸ್ಥಳಾಂತರ ಮಾಡಿದ್ದರು. ಅವರು ಬೆಳ್ಳಿಗೆ ತಿಂಡಿ, ಮಧ್ಯಾಹ್ನದ ಊಟವನ್ನು ಬಿಟ್ಟಿದ್ದರು.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್