ವಯನಾಡ್ ನಲ್ಲಿಂದು ಸರ್ವಪಕ್ಷಗಳ ಸಭೆ
ವಯನಾಡ್ , 1 ಆಗಸ್ಟ್ (ಹಿ.ಸ.) : ಆ್ಯಂಕರ್ : ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ೨೫೦ ದಾಟಿದೆ. ಭಾರತೀಯ ಸೇನೆ ನಿನ್ನೆ ಭೂಕುಸಿತ ಸಂಭವಿಸಿದ ಪ್ರದೇಶದಿಂದ ೧೭೯ ಜನರನ್ನು ರಕ್ಷಿಸಿದ್ದು, ೪ ಮೃತದೇಹಗಳನ್ನು ಹೊರತೆಗೆದಿದೆ. ರಕ್ಷಣಾ ಕಾರ್ಯಾಚರಣೆ ಅಟ್ಟಮಲ, ಮ
pinarayi-vijayan-said-93-dead-bodies-have-bee


ವಯನಾಡ್ , 1 ಆಗಸ್ಟ್ (ಹಿ.ಸ.) :

ಆ್ಯಂಕರ್ : ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ೨೫೦ ದಾಟಿದೆ. ಭಾರತೀಯ ಸೇನೆ ನಿನ್ನೆ ಭೂಕುಸಿತ ಸಂಭವಿಸಿದ ಪ್ರದೇಶದಿಂದ ೧೭೯ ಜನರನ್ನು ರಕ್ಷಿಸಿದ್ದು, ೪ ಮೃತದೇಹಗಳನ್ನು ಹೊರತೆಗೆದಿದೆ. ರಕ್ಷಣಾ ಕಾರ್ಯಾಚರಣೆ ಅಟ್ಟಮಲ, ಮುಂಡಕೈ ಮತ್ತು ಚೂರಲ್‌ಮಲ ಪ್ರದೇಶದಲ್ಲಿ ಇಂದು ಬೆಳಿಗ್ಗೆಯಿಂದ ಪುನರಾರಂಭವಾಗಿದೆ. ಶೋಧ ಕಾರ್ಯದಲ್ಲಿ ತೊಡಗಿರುವ ತಂಡಗಳ ಜೊತೆಗೆ ಒಂದು ಶ್ವಾನದಳವನ್ನು ಸೇರ್ಪಡೆ ಮಾಡಲಾಗಿದೆ. ೫ ಜೆಸಿಬಿಗಳನ್ನು ಮತ್ತೊಂದು ಭಾಗಕ್ಕೆ ವರ್ಗಾಯಿಸಿ ಅಲ್ಲಿ ಅವಶೇಷಗಳನ್ನು ತೆಗೆಯುವ ಕಾರ್ಯದಲ್ಲಿ ತೊಡಗಿಸಲಾಗಿದೆ. ಚೂರಲ್‌ಮಲದಲ್ಲಿ ೧೯೦ ಅಡಿ ಉದ್ದನೆಯ ತಾತ್ಕಾಲಿಕ ಸೇತುವೆ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಅದು ಇಂದು ಪೂರ್ಣಗೊಳ್ಳಲಿದೆ. ಈ ನಿರ್ಣಾಯಕ ಸೇತುವೆ ಭೂಕುಸಿತದಿಂದ ಹಾನಿಗೊಳಗಾದ ಪ್ರದೇಶಗಳಿಂದ ಜನರನ್ನು ಸಾಗಿಸಲು ಮತ್ತು ಭಾರೀ ಯಂತ್ರೋಪಕರಣಗಳು ಹಾಗೂ ಇನ್ನಿತರೆ ಸಾಮಗ್ರಿಗಳನ್ನು ಸಾಗಾಣೆಮಾಡಲು ಸೇತುವೆ ನೆರವಾಗಲಿದೆ. ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು, ಇಂದು ಬೆಳಿಗ್ಗೆ ವಯನಾಡು ಜಿಲ್ಲೆಯಲ್ಲಿ ಸರ್ವಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕದ ಕೆಲ ಸಚಿವರು, ಹಿರಿಯ ಅಧಿಕಾರಿಗಳು ಸಹ ಭಾಗಿಯಾಗಲಿದ್ದಾರೆ. ಅಲ್ಲದೇ ಅವರು, ಅಧಿಕಾರಿಗಳ ಸಭೆಯನ್ನೂ ಸಹ ನಡೆಸಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ


 rajesh pande