ಮೋದಿ, ವಿಯೆಟ್ನಾಂ ಪ್ರಧಾನಿ ಜೊತೆ ಸಮಾಲೋಚನೆ ; ಹಲವು ಒಪ್ಪಂದಗಳಿಗೆ ಸಹಿ
ನವದೆಹಲಿ, 01 ಆಗಸ್ಟ್ (ಹಿ.ಸ.) : ಆ್ಯಂಕರ್ : ಭಾರತ ಪ್ರವಾಸ ಕೈಗೊಂಡಿರುವ ವಿಯೆಟ್ನಾಂ ಪ್ರಧಾನಿ ಫಾಮ್ ಮಿನ್ ಚಿನ್ಹ್ ಅವರಿಗೆ ಇಂದು ಬೆಳಿಗ್ಗೆ ರಾಷ್ಟ್ರಪತಿ ಭವನದಲ್ಲಿ ಸಂಪ್ರದಾಯಿಕ ಸ್ವಾಗತ ನೀಡಲಾಯಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ರಾಷ್ಟ್ರಪತಿ ಭವನದಲ್ಲಿ ವಿಯೆಟ್ನಾಂ ಪ್ರಧಾನಿಯನ್ನು ಸ್ವ
Vietnamese counterpart Pham Minh Chinh


ನವದೆಹಲಿ, 01 ಆಗಸ್ಟ್ (ಹಿ.ಸ.) :

ಆ್ಯಂಕರ್ : ಭಾರತ ಪ್ರವಾಸ ಕೈಗೊಂಡಿರುವ ವಿಯೆಟ್ನಾಂ ಪ್ರಧಾನಿ ಫಾಮ್ ಮಿನ್ ಚಿನ್ಹ್ ಅವರಿಗೆ ಇಂದು ಬೆಳಿಗ್ಗೆ ರಾಷ್ಟ್ರಪತಿ ಭವನದಲ್ಲಿ ಸಂಪ್ರದಾಯಿಕ ಸ್ವಾಗತ ನೀಡಲಾಯಿತು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ರಾಷ್ಟ್ರಪತಿ ಭವನದಲ್ಲಿ ವಿಯೆಟ್ನಾಂ ಪ್ರಧಾನಿಯನ್ನು ಸ್ವಾಗತಿಸಿದರು. ಚಿನ್ಹ್ ಅವರು, ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದು, ಅವರೊಂದಿಗೆ ಉನ್ನತಮಟ್ಟದ ನಿಯೋಗವೂ ಆಗಮಿಸಿದೆ. ಬಳಿಕ ಅವರು, ರಾಜಘಾಟ್‌ನಲ್ಲಿರುವ ರಾಷ್ಟ್ರಪಿತ ಮಹಾತ್ಮಾಗಾಂಧೀಜಿ ಅವರ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು.

ಪ್ರಧಾಮಂತ್ರಿ ನರೇಂದ್ರ ಮೋದಿ ಅವರು, ವಿಯೆಟ್ನಾಂ ಪ್ರಧಾನಿ ಅವರೊಂದಿಗೆ ದ್ವಿಪಕ್ಷೀಯ ಸಮಾಲೋಚನೆ ಪ್ರಗತಿಯಲ್ಲಿದೆ. ಮಾತುಕತೆಯ ನಂತರ ಉಭಯ ದೇಶಗಳು ಹಲವು ಒಪ್ಪಂದಗಳಿಗೆ ಸಹಿ ಹಾಕಿಲಿವೆ. ಆನಂತರ ಪ್ರಧಾನಿ ಚಿನ್ಹ್ ಅವರು, ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುವ ಕಾರ್ಯಕ್ರಮ ನಿಗದಿಯಾಗಿದೆ.

ಭಾರತ ಮತ್ತು ವಿಯೆಟ್ನಾಂ ನಡುವೆ ಹಲವು ದಶಕಗಳ ಐತಿಹಾಸಿಕ ಮತ್ತು ನಾಗರಿಕ ಸಂಬಂಧವಿದೆ. ೨೦೧೬ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ವಿಯೆಟ್ನಾಂಗೆ ಭೇಟಿ ನೀಡಿದ್ದಾಗ ಈ ಸಂಬಂಧಗಳಿಗೆ ಸಮಗ್ರ ಕಾರ್ಯತಾಂತ್ರಿಕ ಪಾಲುದಾರಿಕೆ ಒಪ್ಪಂದದ ಸ್ವರೂಪ ನೀಡಲಾಯಿತು. ಭಾರತ ತನ್ನ ಪೂರ್ವಕ್ರಿಯಾ ನೀತಿಯಲ್ಲಿ ವಿಯೆಟ್ನಾಂ ಪ್ರಮುಖ ಪಾಲುದಾರ ರಾಷ್ಟ್ರ ಮತ್ತು ಇಂಡೋ-ಫೆಸಿಪಿಕ್ ಮುನ್ನೋಟದಲ್ಲಿ ಪ್ರಮುಖ ಸಹವರ್ತಿಯೆಂದು ಪರಿಗಣಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ


 rajesh pande