ಬಳ್ಳಾರಿ, 01 ಆಗಸ್ಟ್ (ಹಿ.ಸ.) :
ಆ್ಯಂಕರ್ : ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಂಶೋಧನಾ ವಿಧ್ಯಾರ್ಥಿ ರಾಜಗುರು ಎಸ್.ಹೆಚ್.ಎಮ್ ಅವರಿಗೆ ಪಿಎಚ್.ಡಿ ಪದವಿ ನೀಡಲಾಗಿದೆ. ಶಿಕ್ಷಣಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಗೋಪಾಲ್.ಎನ್ ಇವರ ಮಾರ್ಗದರ್ಶನದಲ್ಲಿ “ಎಫೆಕ್ಟಿವ್ ನೆಸ್ ಆಫ್ ಇನ್ಫಾರ್ಮೆಶನ್ ಪ್ರೊಸೆಸಿಂಗ್ ಅಪ್ರೊಚ್ ಆನ್ ಸೆಲ್ಫ್ ಕಾನ್ಸೆಪ್ಟ್, ಸ್ಟೈಲ್ ಆಫ್ ಲರ್ನಿಂಗ್ ಅಂಡ್ ಥಿಂಕಿಂಗ್ ಅಂಡ್ ಅಕಾಡೆಮಿಕ್ ಅಚೀವ್‍ಮೆಂಟ್ ಇನ್ ಫಿಸಿಕ್ಸ್ ಅಮಾಂಗ್ ಪ್ರೀ ಯೂನಿವರ್ಸಿಟಿ ಕಾಲೇಜ್ ಸ್ಟೂಡೆಂಟ್ಸ್” ಎಂಬ ಮಹಾಪ್ರಬಂಧ ಸಲ್ಲಿಸಿದ್ದಕ್ಕಾಗಿ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗಿದೆ ಎಂದು ವಿವಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್ / ಮನೋಹರ ಯಡವಟ್ಟಿ