ತೆಕ್ಕಲಕೋಟೆ, 01 ಆಗಸ್ಟ್ (ಹಿ.ಸ.) :
ಆ್ಯಂಕರ್ : ತಾಯಿಯ ಆರೋಗ್ಯ ಚಿಕಿತ್ಸೆಗಾಗಿ 2020ರಲ್ಲಿ ಹದಿನೈದು ದಿನಗಳ ಪೆರೋಲ್ ರಜೆ ಪಡೆದು ಜೈಲಿನಿಂದ ಬಿಡುಗಡೆ ಆಗಿ ತಲೆಮರೆಸಿಕೊಂಡಿದ್ದ ಜೀವಾವಧಿ ಶಿಕ್ಷೆಯ ಕೈದಿಯನ್ನು ಪೊಲೀಸರು ಬುಧವಾರ ರಾತ್ರಿ ಪುನಃ ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಬಂಧಿತನು ಕೊರಚರ ನಾಗೇಶ ಅಲಿಯಾಸ್ ನಾಗಪ್ಪ ಅಲಿಯಾಸ್ ನಾಗರಾಜ ಕುಮಾರ್, ತಾಯಿ ನರಸಮ್ಮಳ ಆರೋಗ್ಯ ಚಿಕಿತ್ಸೆಗಾಗಿ ಜನವರಿ 20, 2020 ರಂದು ಹದಿನೈದು ದಿನಗಳ ಪೆರೋಲ್ ರಜೆಯನ್ನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದನು. ಆದರೆ, ಪೆರೋಲ್ ಅವಧಿ ಪೂರ್ಣಗೊಂಡ ನಂತರ ಜೈಲಿಗೆ ಹಿಂದಿರುಗಿರಲಿಲ್ಲ.
ಆರೋಪಿಯ ವಿರುದ್ಧ ಜೈಲಿನ ಅಧಿಕಾರಿಗಳು ನಾನಾ ಕಾಯ್ದೆಗಳ ಅಡಿಯಲ್ಲಿ ದೂರು ದಾಖಲಿಸಿ, ಹುಡುಕಾಟ ನಡೆಸಿದ್ದರು. ಗುರುವಾರ ಆರೋಪಿ ಬಂಧಿನಸಲಾಗಿದೆ. ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಆರೋಪಿಯು ಹೆಂಡತಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಪಟ್ಟಿದ್ದನು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್ / ಮನೋಹರ ಯಡವಟ್ಟಿ