ಪ್ಯಾರಿಸ್ ಒಲಿಂಪಿಕ್ಸ್: ಭಾರತೀಯ ಕ್ರೀಡಾಪಟುಗಳ ಅಭಿಯಾನ ಮುಂದುವರಿಕೆ ನಿರೀಕ್ಷೆ
ಪ್ಯಾರಿಸ್, 31 ಜುಲೈ (ಹಿ.ಸ.): ಆ್ಯಂಕರ್ : ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇಂದು ಭಾರತೀಯ ಕ್ರೀಡಾಪಟುಗಳು ತಮ್ಮ ಅಭಿಯಾನ ಮುಂದುವರಿಸಲಿದ್ದಾರೆ. ಕ್ರೀಡಾಕೂಟದ ಐದನೇ ದಿನದಂದು ಬಾಕ್ಸರ್‌ಗಳು, ಬಿಲ್ಲುಗಾರರು, ಷಟ್ಲರ್‌ಗಳು ಮತ್ತು ಶೂಟರ್‌ಗಳು ಪದಕ ಬೇಟೆ ಆರಂಭಿಸಲಿದ್ದಾರೆ. ಟೋಕಿಯೊದಲ್ಲಿ ಕಂಚು ಪದಕ ಗೆದ್ದ
Boxers, archers, shuttlers and shooters


ಪ್ಯಾರಿಸ್, 31 ಜುಲೈ (ಹಿ.ಸ.):

ಆ್ಯಂಕರ್ : ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇಂದು ಭಾರತೀಯ ಕ್ರೀಡಾಪಟುಗಳು ತಮ್ಮ ಅಭಿಯಾನ ಮುಂದುವರಿಸಲಿದ್ದಾರೆ. ಕ್ರೀಡಾಕೂಟದ ಐದನೇ ದಿನದಂದು ಬಾಕ್ಸರ್‌ಗಳು, ಬಿಲ್ಲುಗಾರರು, ಷಟ್ಲರ್‌ಗಳು ಮತ್ತು ಶೂಟರ್‌ಗಳು ಪದಕ ಬೇಟೆ ಆರಂಭಿಸಲಿದ್ದಾರೆ.

ಟೋಕಿಯೊದಲ್ಲಿ ಕಂಚು ಪದಕ ಗೆದ್ದಿರುವ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ನಾರ್ವೆಯ ಸುನ್ನಿವಾ ಹಾಫ್‌ಸ್ಟಾಡ್ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ.

ಶೂಟಿಂಗ್‌ನಲ್ಲಿ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಪುರುಷರ ೫೦ ಮೀಟರ್ ರೈಫಲ್ ೩ ಪೊಸಿಷನ್ಸ್ ಅರ್ಹತಾ ಸ್ಪರ್ಧೆಯಲ್ಲಿ ಸ್ಪರ್ಧಿಸಲಿದ್ದಾರೆ. ಮಹಿಳೆಯರ ಟ್ರ್ಯಾಪ್ ಶೂಟಿಂಗ್ ಅರ್ಹತೆಯ ಮೊದಲ ದಿನ ೬೮ ಅಂಕ ಗಳಿಸಿದ ಶ್ರೇಯಸಿ ಸಿಂಗ್ ಮತ್ತು ರಾಜೇಶ್ವರಿ ಕುಮಾರಿ, ಅರ್ಹತಾ ಸುತ್ತಿನ ಎರಡನೇ ದಿನ ತಮ್ಮ ಹೋರಾಟ ಮುಂದುವರಿಸಲಿದ್ದಾರೆ.

ಅನುಷ್ ಅಗರ್‌ವಾಲಾ ಈಕ್ವೆಸ್ಟ್ರಿಯನ್ ಡ್ರೆಸ್ಸೇಜ್ ವೈಯಕ್ತಿಕ ಸುತ್ತಿನಲ್ಲಿ ಭಾಗವಹಿಸಲಿದ್ದಾರೆ. ಬ್ಯಾಡ್ಮಿಂಟನ್‌ನ ಪುರುಷರ ಸಿಂಗಲ್ಸ್ ಗುಂಪಿನ ಹಂತದಲ್ಲಿ, ಲಕ್ಷ್ಯ ಸೇನ್ ಇಂಡೋನೇಷ್ಯಾದ ಜೊನಾಟನ್ ಕ್ರಿಸ್ಟಿ ಅವರನ್ನು ಎದುರಿಸಲಿದ್ದಾರೆ. ಎಚ್.ಎಸ್. ಪ್ರಣಯ್ ವಿಯೆಟ್ನಾಂನ ಡಚ್ ಫಟ್ ಲೀ ಅವರನ್ನು ಎದುರಿಸಲಿದ್ದಾರೆ.

ಮಹಿಳಾ ಸಿಂಗಲ್ಸ್ ಗುಂಪು ಹಂತದಲ್ಲಿ ಪಿವಿ ಸಿಂಧು ಇಂದು ಎಸ್ಟೋನಿಯಾದ ಕ್ರಿಸ್ಟಿನ್ ಕುಬಾ ಅವರನ್ನು ಎದುರಿಸಲಿದ್ದಾರೆ. ಟೇಬಲ್ ಟೆನಿಸ್‌ನಲ್ಲಿ ಶ್ರೀಜಾ ಅಕುಲಾ ಅವರು ಮಹಿಳೆಯರ ಸಿಂಗಲ್ಸ್‌ನಲ್ಲಿ ಸಿಂಗಾಪುರದ ಜಿಯಾನ್ ಜೆಂಗ್ ಅವರನ್ನು ಎದುರಿಸಲಿದ್ದಾರೆ. ಬಿಲ್ಲುಗಾರಿಕೆಯಲ್ಲಿ ತರುಣ್‌ದೀಪ್ ರೈ ಮತ್ತು ದೀಪಿಕಾ ಕುಮಾರಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಎಲಿಮಿನೇಷನ್ ಸುತ್ತಿನಲ್ಲಿ ಭಾಗವಹಿಸಲಿದ್ದಾರೆ.

ಮಹಿಳೆಯರ ೫೪ ಕೆಜಿ ಬಾಕ್ಸಿಂಗ್ ಪಂದ್ಯದಲ್ಲಿ, ಪ್ರೀತಿ ಪವಾರ್ ಕೊಲಂಬಿಯಾದ ಯೆನಿ ಅರಿಯಾಸ್ ವಿರುದ್ಧ ಪರಾಭವಗೊಂಡರು. ಇಲ್ಲಿಯವರೆಗೆ, ಭಾರತ ಎರಡು ಪದಕಗಳನ್ನು ಗೆದ್ದಿದೆ, ಮನು ಭಾಕರ್ ಅವರು ಮಹಿಳೆಯರ ೧೦ ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಐತಿಹಾಸಿಕ ಕಂಚು ಗೆದ್ದರು ಮತ್ತು ನಂತರ ಮಿಶ್ರ ತಂಡ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಕಂಚಿನ ಪದಕ ಗಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ


 rajesh pande