ಹುಬ್ಬಳ್ಳಿ, 31 ಜುಲೈ (ಹಿ.ಸ.) :
ಆ್ಯಂಕರ್ : ಅಂತಾರಾಜ್ಯ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಪೋಲಿಸರು ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ನಗರದ ರೇಲ್ವೆ ನಿಲ್ದಾಣದ ಬಳಿ ಇರುವ ಹೊಟೇಲ್ ಹತ್ತಿರ ರಾಜಸ್ಥಾನ ಮೂಲದ ವ್ಯಕ್ತಿಯನ್ನು ಮಾದಕ ವಸ್ತು ಸಮೇತ ಬಂಧಿಸಿದ್ದಾರೆ.
ದಕ್ಷಿಣ ವಲಯ ಎಸಿಪಿ ಎಂ.ಎಂ.ತಹಶೀಲ್ದಾರ ಅವರ ನೇತೃತ್ವದಲ್ಲಿ ಶಹರ ಠಾಣೆ ಇನ್ಸ್ಪೆಕ್ಟರ್ ಮಾರುತಿ ಅವರ ತಂಡ ಮಾಹಿತಿ ಸಿಕ್ಕ ಸ್ಥಳದ ಮೇಲೆ ದಾಳಿ ಮಾಡಿ ರಾಜಸ್ಥಾನ ಮೂಲದ ಓಂಪ್ರಕಾಶ ತಂದೆ ವೀರಮಾರಾಮ ಬಾರಮೇರ ಜಿಲ್ಲೆ ರಾಜಸ್ಥಾನ ಈತನನ್ನು ವಶಕ್ಕೆ ಪಡದು ಆತನಿಂದ ಸ್ಥಳದಲ್ಲಿ ಹಾಗೂ ಮನೆಯಲ್ಲಿ ಸೇರಿದಂತೆ ಒಟ್ಟೂ 85,000 ರೂ ಬೆಲೆಯ ಗಾಂಜಾವನ್ನು ಹಾಗೂ ಕೃತ್ಯಕ್ಕೆ ಬಳಿಸಿದ 9 ಲಕ್ಷರೂ ಮೌಲ್ಯದ ವಾಹನ ಸಂಖ್ಯೆ: RJ-39 CA-6198 ವಶಪಡಿಸಿಕೊಂಡಿರುತ್ತಾರೆ, ಅಲ್ಲದೆ ಮನೆಯಲ್ಲಿ ಪರಿಶೀಲಿಸುವ ಕಾಲಕ್ಕೆ 96,50,000/-ರೂ ನಗದು ಹಣ, 50,000/-ರೂ ಮೌಲ್ಯದ ಒಂದು ಐಪೋನ, ನಾನಾ ಬ್ಯಾಂಕಿನ 30 ಎ.ಟಿ.ಎಮ್. ಕಾರ್ಡ ನಾನಾ ಬ್ಯಾಂಕಿನ 36 ಚೆಕ್ ಬುಕ್, 4 ಪಾಸಬುಕ್, 9 ಪ್ಯಾನ್ ಕಾರ್ಡ್, 7 ರಬ್ಬರಸ್ಟಾಂಪ, 6 ಸ್ವಾಪಿಂಗ ಮಶೀನಗಳನ್ನು ಸಿಕ್ಕಿದ್ದು ಅವುಗಳನ್ನು ಜಪ್ತಿ ಮಾಡಿರುತ್ತಾರೆ.
ಸದರಿ ಗಾಂಜಾವನ್ನು ಒಂದು ವಾರದ ಹಿಂದೆ ಆತನ ಗೆಳೆಯನಾದ ರಾಜಸ್ಥಾನದ ಮೂಲದ ಅಶೋಕಕುಮಾರ ಎಂಬುವವನು ತಂದಿರುವುದಾಗಿಯೂ ತಿಳಿಸಿರುತ್ತಾನೆ. ಈ ವ್ಯವಹಾರ ಮಾಡಲು ನಕಲಿ ದಾಖಲಾತಿಗಳನ್ನು ಬಳಸಿ ಬ್ಯಾಂಕಗಳಲ್ಲಿ ಉಳಿತಾಯ ಖಾತೆ ಹಾಗೂ ಚಾಲ್ತಿ ಖಾತೆ ತೆರೆಯುವುದು ತಿಳಿದು ಬಂದಿದೆ.
ಈ ಪ್ರಕರಣದಲ್ಲಿ 85,000/-ರೂ ಮೌಲ್ಯದ 888 ಗ್ರಾಂ ಗಾಂಜಾ, 9 ಲಕ್ಷರೂ ಮೌಲ್ಯದ ಒಂದು ಕಿಯಾ ಸೋನೆಟ್ ಕಾರು, 50,000/-ರೂ ಮೌಲ್ಯದ ಒಂದು ಐಪೋನ, ವಿವಿಧ ಬ್ಯಾಂಕಿನ 30 ಎ.ಟಿ.ಎಮ್. ಕಾರ್ಡ ವಿವಿಧ ಬ್ಯಾಂಕಿನ 36 ಚೆಕ್ ಬುಕ್, 4 ಪಾಸಬುಕ್, 9 ಪಾನಕಾರ್ಡ, 7 ರಬ್ಬರಸ್ವಾಂಪ, 6 ಸ್ವಾಪಿಂಗ ಮಶೀನಗಳನ್ನು ಹಾಗೂ 96,50,000/-ರೂ ವಶಪಡಿಸಿಕೊಳ್ಳಲಾಗಿದೆ ಇವುಗಳ ಒಟ್ಟಾರೆ 1,06,85,000/-ರೂ ಮೌಲ್ಯದ ಹಣ ಹಾಗೂ ವಸ್ತುಗಳನ್ನು ಜಪ್ತು ಪಡಿಸಿಕೊಳ್ಳಲಾಗಿದೆ. ಈ ದಾಳಿಯಲ್ಲಿ ಹುಬ್ಬಳ್ಳಿ ಠಾಣೆ ಶಹರ ಪೊಲೀಸ ಠಾಣೆಯ ಸಿಬ್ಬಂದಿ ಭಾಗಿಯಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa / ಮನೋಹರ ಯಡವಟ್ಟಿ