ಪ್ಯಾರಿಸ್ ಒಲಿಂಪಿಕ್ಸ್ - ಶೂಟಿಂಗ್ ಸ್ಪರ್ಧೆಯ ಫೈನಲ್ ನಲ್ಲಿಂದು ರಮಿತಾ, ಅರ್ಜುನಾ ಬಬುಟಾ ಕಣಕ್ಕೆ
ಪ್ಯಾರಿಸ್, 29 ಜುಲೈ (ಹಿ.ಸ.) : ಆ್ಯಂಕರ್ : ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಮೂರನೇ ಸ್ಪರ್ಧಾ ದಿನವಾದ ಇಂದು ಮಧ್ಯಾಹ್ನ ೧ ಗಂಟೆಗೆ ರಮಿತಾ ಜಿಂದಾಲ್, ೧೦ ಮೀಟರ್ ಏರ್ ರೈಫಲ್ ಮಹಿಳಾ ಫೈನಲ್ ನಲ್ಲಿ ಸ್ಪರ್ಧಿಸಲಿದ್ದಾರೆ. ಅರ್ಜುನ್ ಬಬುಟಾ ಇದೇ ಸ್ಪರ್ಧೆಯ ಪುರುಷರ ಫೈನಲ್ ಸ್ಪರ್ಧೆಯಲ್ಲಿ ಮಧ್ಯಾಹ
On the third day of the Paris Olymp


ಪ್ಯಾರಿಸ್, 29 ಜುಲೈ (ಹಿ.ಸ.) :

ಆ್ಯಂಕರ್ : ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಮೂರನೇ ಸ್ಪರ್ಧಾ ದಿನವಾದ ಇಂದು ಮಧ್ಯಾಹ್ನ ೧ ಗಂಟೆಗೆ ರಮಿತಾ ಜಿಂದಾಲ್, ೧೦ ಮೀಟರ್ ಏರ್ ರೈಫಲ್ ಮಹಿಳಾ ಫೈನಲ್ ನಲ್ಲಿ ಸ್ಪರ್ಧಿಸಲಿದ್ದಾರೆ.

ಅರ್ಜುನ್ ಬಬುಟಾ ಇದೇ ಸ್ಪರ್ಧೆಯ ಪುರುಷರ ಫೈನಲ್ ಸ್ಪರ್ಧೆಯಲ್ಲಿ ಮಧ್ಯಾಹ್ನ ೩:೩೦ ಕ್ಕೆ ಸ್ಪರ್ಧಿಸಲಿದ್ದಾರೆ. ಮತ್ತೊಂದೆಡೆ, ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಮನು ಭಾಕರ್, ಸರಬ್ಜೋತ್ ಸಿಂಗ್ ಮತ್ತು ಅರ್ಜುನ್ ಸಿಂಗ್ ಚೀಮಾ ಮತ್ತು ರಿದಮ್ ಸಾಂಗ್ವಾನ್ ಅವರನ್ನೊಳಗೊಂಡ ತಂಡ ೧೦ ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಅರ್ಹತಾ ಸುತ್ತಿನಲ್ಲಿ ಇಂದು ಪಾಲ್ಗೊಳ್ಳಲಿದೆ.

ಮಧ್ಯಾಹ್ನ ೧೨:೪೫ ಕ್ಕೆ ಈ ಸ್ಪರ್ಧೆ ಆರಂಭವಾಗಲಿದೆ. ಮತ್ತೊಂದು ಶೂಟಿಂಗ್ ಸ್ಪರ್ಧೆಯಲ್ಲಿ ಪೃಥ್ವಿರಾಜ್ ತೊಂಡೈಮನ್ ಟ್ರ್ಯಾಪ್ ಪುರುಷರ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ. ಪುರುಷರ ಹಾಕಿಯಲ್ಲಿ ಭಾರತ ಬಿ ಗುಂಪಿನ ತನ್ನ ದ್ವಿತೀಯ ಪಂದ್ಯದಲ್ಲಿ ಅರ್ಜೆಂಟೀನಾವನ್ನು ಎದುರಿಸಲಿದೆ. ಪಂದ್ಯ ಸಂಜೆ ೪:೧೫ ಕ್ಕೆ ಆರಂಭವಾಗಲಿದೆ.

ನ್ಯೂಜಿಲೆಂಡ್ ವಿರುದ್ಧ ಪ್ರಮುಖ ಗೆಲುವು ದಾಖಲಿಸಿದ ನಂತರ ಪುರುಷರು ತಮ್ಮ ಗೆಲುವಿನ ಓಟವನ್ನು ಮುಂದುವರಿಸುವ ನಿರೀಕ್ಷೆಯಲ್ಲಿದ್ದಾರೆ. ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಲ್ ಗುಂಪಿನಲ್ಲಿ ಭಾರತದ ಸ್ಟಾರ್ ಷಟ್ಲರ್ ಲಕ್ಷ್ಯ ಸೇನ್, ಬೆಲ್ಜಿಯಂನ ಜೂಲಿಯನ್ ಕ್ಯಾರಾಗಿ ಅವರನ್ನು ಸಂಜೆ ೫:೩೦ ಕ್ಕೆ ಎದುರಿಸಲಿದ್ದಾರೆ.

ಇದಕ್ಕೂ ಮುನ್ನ ಪುರುಷರ ಡಬಲ್ಸ್ ಗುಂಪು ಹಂತದಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಜರ್ಮನಿಯ ಮಾರ್ಕ್ ಮತ್ತು ಮಾರ್ವಿನ್ ಜೋಡಿಯನ್ನು ಎದುರಿಸಲಿದ್ದಾರೆ.

ಮಹಿಳಾ ಡಬಲ್ಸ್ ಗ್ರೂಪ್ ಹಂತದಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ಅವರು ಜಪಾನಿನ ಚಿಹಾರು ಶಿಡಾ ಮತ್ತು ನಮಿ ಮತ್ಸುಯಾಮಾ ಅವರನ್ನು ಎದುರಿಸಲಿದ್ದಾರೆ. ಧೀರಜ್ ಬೊಮ್ಮದೇವರ, ತರುಣ್ ದೀಪ್ ಮತ್ತು ಪ್ರವೀಣ್ ರಮೇಶ್ ಜಾಧವ್ ಅವರನ್ನೊಳಗೊಂಡ ಭಾರತ ತಂಡ ಆರ್ಚರಿ ಪುರುಷರ ತಂಡ ಕ್ವಾರ್ಟರ್ ಫೈನಲ್ ನಲ್ಲಿಂದು ಸೆಣಸಲಿದೆ.

ಟೇಬಲ್ ಟೆನಿಸ್ ಮಹಿಳಾ ಸಿಂಗಲ್ಸ್ ರೌಂಡ್ ೩೨ರಲ್ಲಿ ಭಾರತದ ಮಣಿಕಾ ಬಾತ್ರಾ ಅವರು ಫ್ರೆಂಚ್ ಆಟಗಾರ್ತಿ ಪೃಥ್ವಿಕಾ ಪವಾಡೆ ಅವರನ್ನು ಎದುರಿಸಲಿದ್ದಾರೆ.

ಪ್ಯಾರಿಸ್ ಕೂಟದಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಶೂಟರ್ ಮನು ಭಾಕರ್‌ಗೆ ರಾಷ್ಟ್ರಪತಿ, ಪ್ರಧಾನಿ ಸೇರಿ ಹಲವು ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಕಳೆದ ರಾತ್ರಿ ನಡೆದ ಟೆನಿಸ್ ಡಬಲ್ಸ್ ವಿಭಾಗದ ಪುರುಷರ ಆರಂಭಿಕ ಸುತ್ತಿನಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಶ್ರೀರಾಮ್ ಬಾಲಾಜಿ ಪರಾಭವಗೊಂಡು ಹೋರಾಟ ಮುಗಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ


 rajesh pande