ಚಿಕ್ಕಬಳ್ಳಾಪುರ: ತರಕಾರಿ ಬದಲು ದಾಳಿಂಬೆ ಬೆಳೆದು ಶ್ರೀಮಂತನಾದ ರೈತ
ಚಿಕ್ಕಬಳ್ಳಾಪುರ, 29 ಜುಲೈ (ಹಿ.ಸ.) : ಆ್ಯಂಕರ್ : ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಮರಸನಪಲ್ಲಿ ಗ್ರಾಮದ ರೈತ ಬೈರಪ್ಪ ಎಂಬುವವರು ತಮ್ಮ ಆರು ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆದು ಯಶಸ್ಸು ಕಂಡಿದ್ದಾರೆ. ದ್ರಾಕ್ಷಿಯ ಗೊಂಚಲನ್ನೇ ಮೀರಿಸುವ ಹಾಗೆ ದಾಳಿಂಬೆ ಗಿಡದಲ್ಲಿ ಹುಲುಸಾಗಿ ದಾಳಿಂಬ
In Bagepalli A farmer grew pomegranates


ಚಿಕ್ಕಬಳ್ಳಾಪುರ, 29 ಜುಲೈ (ಹಿ.ಸ.) :

ಆ್ಯಂಕರ್ : ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಮರಸನಪಲ್ಲಿ ಗ್ರಾಮದ ರೈತ ಬೈರಪ್ಪ ಎಂಬುವವರು ತಮ್ಮ ಆರು ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆದು ಯಶಸ್ಸು ಕಂಡಿದ್ದಾರೆ.

ದ್ರಾಕ್ಷಿಯ ಗೊಂಚಲನ್ನೇ ಮೀರಿಸುವ ಹಾಗೆ ದಾಳಿಂಬೆ ಗಿಡದಲ್ಲಿ ಹುಲುಸಾಗಿ ದಾಳಿಂಬೆ ಹಣ್ಣುಗಳು ಬೆಳೆದಿವೆ. ಈ ಮೊದಲು ಜಮೀನಿನಲ್ಲಿ ಈರುಳ್ಳಿ, ಟೊಮ್ಯಾಟೋ, ಬದನೇಕಾಯಿ ಸೇರಿದಂತೆ ತರಕಾರಿ ಬೆಳೆದು ಬೆಲೆ ಇಲ್ಲದೆ ಕಂಗಾಲಾಗಿದ್ದರು. ಆದ್ರೆ, ತೋಟಗಾರಿಕಾ ಪದವೀಧರ ಶ್ರೀಕಾಂತ್ ಎನ್ನುವವರ ಮಾತು ಕೇಳಿ ಇದೇ ಪ್ರಥಮ ಬಾರಿಗೆ ವಿನೂತನ ತಳಿಯ ದಾಳಿಂಬೆ ತೋಟ ಮಾಡಿದ್ದಾರೆ.

ಕೈ ಕೆಸರಾದರೆ ಬಾಯಿ ಮೊಸರು ಎನ್ನುವ ಹಾಗೆ, ದಾಳಿಂಬೆ ದ್ರಾಕ್ಷಿ ಗೋಂಚಲನ್ನೇ ಮೀರಿಸುವಷ್ಟು ಫಸಲು ಬಂದಿದ್ದು, ಸ್ಥಳದಲ್ಲೇ ವರ್ತಕರು ಕೆಜಿ ದಾಳಿಂಬೆಗೆ 150 ರೂಪಾಯಿ ಬೆಲೆ ನೀಡುವುದಾಗಿ ಮಾತುಕತೆ ನಡೆಸಿದ್ದಾರೆ. ಇನ್ನು 6 ಎಕರೆ ದಾಳಿಂಬೆ ತೋಟ ಮಾಡಲು, 12 ಲಕ್ಷ ರೂಪಾಯಿ ಖರ್ಚಾಗಿದೆ. ಸದ್ಯ ಇರುವ ಫಸಲು 60 ಟನ್​ಗೂ ಹೆಚ್ಚು ತೂಕ ಇದೆ. ಒಂದು ದಾಳಿಂಬೆ ಗಿಡದಲ್ಲಿ ಸರಿ ಸುಮಾರು 30 ಕೆ.ಜಿ.ಯಷ್ಟು ಹಣ್ಣುಗಳಿವೆ.

ಇದರಿಂದ ಆಂಧ್ರ, ಕರ್ನಾಟಕ, ಮಹಾರಾಷ್ಟ್ರ ವರ್ತಕರು ಖರೀದಿಗೆ ಮುಗಿಬಿದ್ದಿದ್ದಾರೆ. ಇನ್ನು ರೈತನಿಗೆ ಸಕಾಲಕ್ಕೆ ಔಷಧಿ, ಗೊಬ್ಬರ, ಸಲಹೆಯನ್ನ ತೋಟಗಾರಿಕೆ ವಿಜ್ಞಾನದಲ್ಲಿ ಎಂ.ಎಎಸ್ಸಿ ಪದವಿಧರ ಶ್ರೀಕಾಂತ್ ಎನ್ನುವವರು ನೀಡಿ ಸೈ ಎನಿಸಿಕೊಂಡಿದ್ದಾರೆ. ಯಾವಾಗಲೂ ಸಾಂಪ್ರದಾಯಿಕ ಬೆಳೆಗಳು ಸೇರಿದಂತೆ ಈರುಳ್ಳಿ, ಟೊಮ್ಯಾಟೋ ಸೇರಿದಂತೆ ಹಲವು ತರಕಾರಿ ಬೆಳೆಗಳನ್ನ ಬೆಳೆದು ಕೈಸುಟ್ಟುಕೊಂಡಿದ್ದ ರೈತ ಬೈರಪ್ಪ, ಪ್ರಥಮ ಪ್ರಯತ್ನದಲ್ಲಿ ಭರಪೂರ ದಾಳಿಂಬೆ ಫಸಲು ಬೆಳೆದು ಕೋಟಿ ರೂಪಾಯಿ ನಿರೀಕ್ಷೆಯಲ್ಲಿದ್ದಾನೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ


 rajesh pande