ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನ
ನವದೆಹಲಿ, 29 ಜುಲೈ (ಹಿ.ಸ.): ಆ್ಯಂಕರ್ : ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31ರವರೆಗೆ ಕಾಲಾವಕಾಶ ಕೊಡಲಾಗಿದೆ. ಈ ನಿಗದಿ ಮಾಡಿದ ಕಾಲಮಿತಿ ವಿಸ್ತರಿಸಬಹುದು ಎಂದು ನೀವು ಇನ್ನೂ ಐಟಿಆರ್ ಸಲ್ಲಿಸದೇ ಹೋಗಿದ್ದರೆ ಕಷ್ಟವಾದೀತು. ಕಳೆದ ವರ್ಷದಂತೆ ಈ ಬಾರಿಯೂ ನಿಗದಿ ಮಾಡಿದ ಕಾಲಮಿತಿ ವಿಸ್ತರಿಸುವ
IT Returns filing July 31st deadline unlikely


ನವದೆಹಲಿ, 29 ಜುಲೈ (ಹಿ.ಸ.):

ಆ್ಯಂಕರ್ : ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31ರವರೆಗೆ ಕಾಲಾವಕಾಶ ಕೊಡಲಾಗಿದೆ. ಈ ನಿಗದಿ ಮಾಡಿದ ಕಾಲಮಿತಿ ವಿಸ್ತರಿಸಬಹುದು ಎಂದು ನೀವು ಇನ್ನೂ ಐಟಿಆರ್ ಸಲ್ಲಿಸದೇ ಹೋಗಿದ್ದರೆ ಕಷ್ಟವಾದೀತು. ಕಳೆದ ವರ್ಷದಂತೆ ಈ ಬಾರಿಯೂ ನಿಗದಿ ಮಾಡಿದ ಕಾಲಮಿತಿ ವಿಸ್ತರಿಸುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.

ಈ ಬಗ್ಗೆ ಹಣಕಾಸು ಸಚಿವಾಲಯವಾಗಲೀ, ಅಥವಾ ಆದಾಯ ತೆರಿಗೆ ಇಲಾಖೆಯಾಗಲೀ ಅಧಿಕೃತವಾಗಿ ಏನನ್ನೂ ತಿಳಿಸಿಲ್ಲ. ಒಂದು ವೇಳೆ ಐಟಿಆರ್ ಸಲ್ಲಿಕೆಗೆ ಗಡುವನ್ನು ಹೆಚ್ಚಿಸುವುದೇ ಆದಲ್ಲಿ ಸಾಮಾನ್ಯವಾಗಿ ಜುಲೈ 30 ಅಥವಾ 31ರಂದು ಘೋಷಿಸಲಾಗುತ್ತದೆ.

ಕಳೆದ ವರ್ಷ ಜುಲೈ 25ಕ್ಕೆ ಐಟಿಆರ್ ಸಲ್ಲಿಸಿದವರ ಸಂಖ್ಯೆ 4 ಕೋಟಿ ದಾಟಿತ್ತು. ಈ ವರ್ಷ ಜುಲೈ 22ಕ್ಕೆಯೇ ಆ ಸಂಖ್ಯೆ ದಾಟಿದೆ.

ಕಳೆದ ವರ್ಷ ಜುಲೈ 31ರ ನಿಗದಿ ಮಾಡಿದ ಕಾಲಮಿತಿ ನೊಳಗೆ 6.77 ತೆರಿಗೆ ಪಾವತಿದಾರರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದರು. ಈ ವರ್ಷ ಐದು ಕೋಟಿ ಜನರು ಈಗಾಗಲೇ ರಿಟರ್ನ್ಸ್ ಫೈಲ್ ಮಾಡಿದ್ದಾರೆ. ಜುಲೈ ಅಂತ್ಯದೊಳಗೆ ಐಟಿಆರ್​​ಗಳ ಸಂಖ್ಯೆ 7 ಕೋಟಿ ದಾಟುವ ನಿರೀಕ್ಷೆ ಇದೆ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31ರವರೆಗೆ ಕಾಲಾವಕಾಶ ಕೊಡಲಾಗಿದೆ. ಅದಾದ ಬಳಿಕವೂ ಸಲ್ಲಿಸಬಹುದು, ಆದರೆ, ದಂಡ ತೆರಬೇಕಾಗುತ್ತದೆ. ವಿಳಂಬ ಶುಲ್ಕ ಎಂದು ನಿರ್ದಿಷ್ಟ ಮೊತ್ತದ ಶುಲ್ಕ ಕಟ್ಟಿಸಿಕೊಳ್ಳಲಾಗುತ್ತದೆ.ಈ ರೀತಿ ತಡವಾಗಿ ಕಟ್ಟಲೂ ಡಿಸೆಂಬರ್ 31ರವರೆಗೆ ಅವಕಾಶ ಇದೆ. ಈ ಡಿಸೆಂಬರ್ 31ರ ಗಡುವು ಮೀರಿ ಹೋದರೆ ಆದಾಯ ತೆರಿಗೆ ಸೆಕ್ಷನ್ 234ಎ ಮತ್ತು 234ಬಿ ಅಡಿಯಲ್ಲಿ ತಡ ಪಾವತಿ ಶುಲ್ಕದ ಜೊತೆಗೆ ಬಾಕಿ ಮೊತ್ತವನ್ನು ಬಡ್ಡಿ ಸಮೇತ ಕಟ್ಟಬೇಕಾಗುತ್ತದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ


 rajesh pande