ಚಿನ್ನದ ಬೆಲೆ ಮತ್ತೆ ಭರ್ಜರಿ ಇಳಿಕೆ; ಗ್ರಾಮ್​ಗೆ 100 ರೂ ಕುಸಿತ
ಬೆಂಗಳೂರು, 28 ಜುಲೈ (ಹಿ.ಸ.): ಆ್ಯಂಕರ್ : ಚಿನ್ನದ ಬೆಲೆ ಕುಸಿಯುವುದು ಮುಂದುವರಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ ಅಗ್ಗವಾಗುತ್ತಿದೆ. ನಾಲ್ಕು ತಿಂಗಳ ಹಿಂದಿದ್ದ ಮಟ್ಟಕ್ಕೆ ಬೆಲೆ ಇಳಿದಿದೆ. ಮಾರ್ಚ್ 29ಕ್ಕೆ 22 ಗ್ರಾಮ್ ಚಿನ್ನದ ಬೆಲೆ 6,300 ರೂ ಇತ್ತು. ಇವತ್ತೂ ಕೂಡ ಅದೇ ಬೆಲೆಗೆ ಇಳ
Gold Price Today On 12th July 2024, Gold And Silver Rat


ಬೆಂಗಳೂರು, 28 ಜುಲೈ (ಹಿ.ಸ.):

ಆ್ಯಂಕರ್ : ಚಿನ್ನದ ಬೆಲೆ ಕುಸಿಯುವುದು ಮುಂದುವರಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ ಅಗ್ಗವಾಗುತ್ತಿದೆ. ನಾಲ್ಕು ತಿಂಗಳ ಹಿಂದಿದ್ದ ಮಟ್ಟಕ್ಕೆ ಬೆಲೆ ಇಳಿದಿದೆ. ಮಾರ್ಚ್ 29ಕ್ಕೆ 22 ಗ್ರಾಮ್ ಚಿನ್ನದ ಬೆಲೆ 6,300 ರೂ ಇತ್ತು. ಇವತ್ತೂ ಕೂಡ ಅದೇ ಬೆಲೆಗೆ ಇಳಿದಿದೆ. ಜುಲೈ 18ರಂದು 22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್​ಗೆ 6,860 ರೂ ಇತ್ತು. ಈಗ 6,300 ರೂಗೆ ಇಳಿದಿದೆ. ಹತ್ತು ದಿನದಲ್ಲಿ 560 ರೂನಷ್ಟು ಬೆಲೆ ಇಳಿಕೆ ಆಗಿರುವುದು ಗಮನಾರ್ಹ.

ಬಜೆಟ್ ಪೂರ್ವದಿಂದಲೇ ಚಿನ್ನದ ಬೆಲೆ ಇಳಿಯಲು ಆರಂಭಿಸಿತಾದರೂ ಬಜೆಟ್​ನಲ್ಲಿ ಚಿನ್ನ, ಬೆಳ್ಳಿ ಮೇಲಿನ ಆಮದು ಸುಂಕ ಇಳಿಸಿದ ಬಳಿಕ ತೀವ್ರ ಮಟ್ಟದಲ್ಲಿ ಭಾರತದಲ್ಲಿ ಬೆಲೆ ಕುಸಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 63,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 68,730 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,450 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 63,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,425 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 28ಕ್ಕೆ)

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 63,000 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 68,730 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 845 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 63,000 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 68,730 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 842.50 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

ಬೆಂಗಳೂರು: 63,000 ರೂ

ಚೆನ್ನೈ: 64,150 ರೂ

ಮುಂಬೈ: 63,000 ರೂ

ದೆಹಲಿ: 63,150 ರೂ

ಕೋಲ್ಕತಾ: 63,000 ರೂ

ಕೇರಳ: 63,000 ರೂ

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ


 rajesh pande