ಬಳ್ಳಾರಿ ವ್ಯಕ್ತಿ ಕಾಣೆ
ಬಳ್ಳಾರಿ, 25 ಜುಲೈ (ಹಿ.ಸ.) : ಆ್ಯಂಕರ್ : ನಗರದ ತಾಳೂರು ರಸ್ತೆಯ ರಾಮನಗರದ 2ನೇ ಕ್ರಾಸ್‍ನ ಹೂ ವ್ಯಾಪಾರ ಮಾಡುವ ಬಿ.ಗೋಪಿ (42) ಜೂ.07 ರಂದು ಕಾಣೆಯಾಗಿರುವ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ. ವ್ಯಕ್ತಿಯ ಚ
ಬಳ್ಳಾರಿ : ವ್ಯಕ್ತಿ ಕಾಣೆ


ಬಳ್ಳಾರಿ, 25 ಜುಲೈ (ಹಿ.ಸ.) :

ಆ್ಯಂಕರ್ : ನಗರದ ತಾಳೂರು ರಸ್ತೆಯ ರಾಮನಗರದ 2ನೇ ಕ್ರಾಸ್‍ನ ಹೂ ವ್ಯಾಪಾರ ಮಾಡುವ ಬಿ.ಗೋಪಿ (42) ಜೂ.07 ರಂದು ಕಾಣೆಯಾಗಿರುವ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ.

ವ್ಯಕ್ತಿಯ ಚಹರೆ ಗುರುತು: ಎತ್ತರ 5.6 ಅಡಿ, ಕೋಲು ಮುಖ, ತೆಳುವಾದ ಮೈಕಟ್ಟು, ಕಪ್ಪು ಮೈಬಣ್ಣ, ಕುತ್ತಿಗೆಗೆ ಮತ್ತು ಎಡ ಕೈಗೆ ದಪ್ಪನೆಯ ಕಪ್ಪು ಬಣ್ಣದ ದಾರ ಕಟ್ಟಿರುತ್ತಾನೆ. ಎದೆಯ ಮಧ್ಯಭಾಗದಲ್ಲಿ ಗಡ್ಡೆಯಂತಹ ಗಾಯ ಇರುತ್ತದೆ. ಎಡಕಿವಿಯ ಹಿಂದಿನ ಭಾಗದಲ್ಲಿ ಹಳೇ ಗಾಯದ ಗುರುತು ಇರುತ್ತದೆ.

ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಮತ್ತು ನೀಲಿ ಬಣ್ಣದ ಫುಲ್ ಶರ್ಟ್ ತೊಟ್ಟಿರುತ್ತಾನೆ. ಕನ್ನಡ, ತೆಲುಗು, ಹಿಂದಿ ಮಾತನಾಡುತ್ತಾನೆ.

ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಕಂಟ್ರೋಲ್ ರೂಂ ಸಂ.08392-258100, ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ದೂ.08392-276461, ಮೊ.9480803049 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್ / ಮನೋಹರ ಯಡವಟ್ಟಿ


 rajesh pande