ಕಚ್ಚಾತೈಲ ಬೆಲೆ ಇಳಿಕೆ, ಬಹುತೇಕ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರಗಳಲ್ಲಿ ಸ್ಥಿರ
ನವದೆಹಲಿ, 24 ಜುಲೈ (ಹಿ.ಸ.) : ಆ್ಯಂಕರ್ : ಸರ್ಕಾರಿ ತೈಲ ಕಂಪನಿಗಳು ಜುಲೈ 24, ಬುಧವಾರದ ಪೆಟ್ರೋಲ್, ಡೀಸೆಲ್ ದರಗಳನ್ನು ಬಿಡುಗಡೆ ಮಾಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಕಚ್ಚಾತೈಲದ ಬೆಲೆ ಪ್ರತಿ ಬ್ಯಾರೆಲ್​ಗೆ 82 ಡಾಲರ್​ಗಿಂತ ಕಡಿಮೆಯಾಗಿದೆ,
Petrol


ನವದೆಹಲಿ, 24 ಜುಲೈ (ಹಿ.ಸ.) :

ಆ್ಯಂಕರ್ : ಸರ್ಕಾರಿ ತೈಲ ಕಂಪನಿಗಳು ಜುಲೈ 24, ಬುಧವಾರದ ಪೆಟ್ರೋಲ್, ಡೀಸೆಲ್ ದರಗಳನ್ನು ಬಿಡುಗಡೆ ಮಾಡಿವೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಕಚ್ಚಾತೈಲದ ಬೆಲೆ ಪ್ರತಿ ಬ್ಯಾರೆಲ್​ಗೆ 82 ಡಾಲರ್​ಗಿಂತ ಕಡಿಮೆಯಾಗಿದೆ,ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾತೈಲವು ಪ್ರತಿ ಬ್ಯಾರೆಲ್​ಗೆ 82.50 ಡಾಲರ್​ನಲ್ಲಿಷ್ಟಿದ್ದರೆ, ಡಬ್ಲ್ಯೂಟಿಐ ಕಚ್ಚಾತೈಲ ಪ್ರತಿ ಬ್ಯಾರೆಲ್​ಗೆ 79.78 ಡಾಲರ್​ನಷ್ಟಿದೆ. ಆದರೆ, ಎಲ್ಲಾ ಮಹಾನಗರಗಳಲ್ಲಿ ಇಂಧನ ಬೆಲೆ ಸ್ಥಿರವಾಗಿದೆ.

ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆಗಳನ್ನು ಆಧರಿಸಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯನ್ನು ಪರಿಶೀಲಿಸಿದ ನಂತರ ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ನಿರ್ಧರಿಸುತ್ತವೆ.

ರಾಜ್ಯಮಟ್ಟದಲ್ಲಿ ಪೆಟ್ರೋಲ್​ಗೆ ವಿಧಿಸಲಾದ ತೆರಿಗೆಯಿಂದಾಗಿ ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ವಿಭಿನ್ನವಾಗಿವೆ. ನಿಮ್ಮ ಫೋನ್​ನಿಂದ ಎಸ್​ಎಂಎಸ್​ ಮೂಲಕ ನೀವು ಪ್ರತಿದಿನ ಭಾರತದ ಪ್ರಮುಖ ನಗರಗಳಲ್ಲಿರುವ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ತಿಳಿಯಬಹುದು.

ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು: ನವದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 94.72 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 87.62 ರೂ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 103.44 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 89.97 ರೂ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 104.95 ರೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 91.76 ರೂ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100.75 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 92.34 ರೂ.

ಹಿಂದೂಸ್ತಾನ್ ಸಮಾಚಾರ್

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ


 rajesh pande