ಇಂದು ೨೦೨೩-೨೦೨೪ ರ ಆರ್ಥಿಕ ಸಮೀಕ್ಷೆ ಮಂಡನೆ
ನವದೆಹಲಿ, 22 ಜುಲೈ (ಹಿ.ಸ.) : ಆ್ಯಂಕರ್ : ಸಂಸತ್ತಿನಲ್ಲಿ ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ೨೦೨೩-೨೦೨೪ ರ ಆರ್ಥಿಕ ಸಮೀಕ್ಷೆ ಮಂಡಿಸಲಿದ್ದಾರೆ. ಮುಖ್ಯ ಆರ್ಥಿಕ ಸಲಹೆಗಾರ ಡಾ.ವಿ.ಅನಂತ ನಾಗೇಶ್ವರನ್ ಅವರ ಮೇಲ್ವಿಚಾರಣೆಯಲ್ಲಿ ಈ ದಾಖಲೆಯನ್ನು ಸಿದ್ಧಪಡಿಸಲಾಗಿದೆ. ಆರ್ಥಿಕ ಸಮೀಕ್ಷೆಯನ್ನು ಲ
Presentation of Economic Survey


ನವದೆಹಲಿ, 22 ಜುಲೈ (ಹಿ.ಸ.) :

ಆ್ಯಂಕರ್ : ಸಂಸತ್ತಿನಲ್ಲಿ ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ೨೦೨೩-೨೦೨೪ ರ ಆರ್ಥಿಕ ಸಮೀಕ್ಷೆ ಮಂಡಿಸಲಿದ್ದಾರೆ.

ಮುಖ್ಯ ಆರ್ಥಿಕ ಸಲಹೆಗಾರ ಡಾ.ವಿ.ಅನಂತ ನಾಗೇಶ್ವರನ್ ಅವರ ಮೇಲ್ವಿಚಾರಣೆಯಲ್ಲಿ ಈ ದಾಖಲೆಯನ್ನು ಸಿದ್ಧಪಡಿಸಲಾಗಿದೆ. ಆರ್ಥಿಕ ಸಮೀಕ್ಷೆಯನ್ನು ಲೋಕಸಭೆಯಲ್ಲಿ ಮಂಡಿಸಿದ ನಂತರ ಮುಖ್ಯ ಆರ್ಥಿಕ ಸಲಹೆಗಾರರು ಇಂದು ಮಧ್ಯಾಹ್ನ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಆರ್ಥಿಕ ಸಮೀಕ್ಷೆಯು, ಆರ್ಥಿಕತೆಯ ವರದಿ ಮತ್ತು ಮುಂದಿನ ಬೆಳವಣಿಗೆಯ ದೃಷ್ಟಿಕೋನ, ಆರ್ಥಿಕತೆಯ ಸ್ಥಿತಿ, ಭವಿಷ್ಯ ಮತ್ತು ನೀತಿ ಸವಾಲುಗಳ ಕುರಿತ ವಿವರವನ್ನು ನೀಡುತ್ತದೆ. ಆರ್ಥಿಕತೆಯ ವಿವಿಧ ವಲಯಗಳ ಅಂಕಿ-ಅಂಶಗಳ ಮಾಹಿತಿ ಮತ್ತು ವಿಶ್ಲೇಷಣೆಯನ್ನು ಸಮೀಕ್ಷೆ ಒದಗಿಸುತ್ತದೆ. ಅಲ್ಲದೇ, ಉದ್ಯೋಗ, ಜಿಡಿಪಿ ಬೆಳವಣಿಗೆ, ಹಣದುಬ್ಬರ ಮತ್ತು ಬಜೆಟ್ ಕೊರತೆಯ ಮಾಹಿತಿಯನ್ನು ನೀಡುತ್ತದೆ. ಐಎಂಎಫ್, ೨೦೨೪-೨೫ ರ ಹಣಕಾಸು ವರ್ಷದ ಭಾರತದ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯನ್ನು ಏಪ್ರಿಲ್‌ನಲ್ಲಿ ಶೇಕಡ ೬.೮ ರಿಂದ ಶೇಕಡ ೭ಕ್ಕೆ ಏರಿಸಿದ ಸಮಯದಲ್ಲಿ ಆರ್ಥಿಕ ಸಮೀಕ್ಷೆಯನ್ನು ಪ್ರಸ್ತುತಪಡಿಸಲಾಗುತ್ತಿದೆ. ಜೂನ್‌ನಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್, ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ ೭ ರಿಂದ ೭.೨ ಕ್ಕೆ ಪರಿಷ್ಕರಿಸಿತ್ತು.

ಹಿಂದೂಸ್ತಾನ್ ಸಮಾಚಾರ್

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ


 rajesh pande