ಭಾರತದ ಮೊದಲ ಎಸ್‌ಯುವಿ ಕೂಪ್ ಟಾಟಾ ಕರ್ವ್ ಕಾರು ಅನಾವರಣ
ಬೆಂಗಳೂರು, 20 ಜುಲೈ (ಹಿ.ಸ.) : ಆ್ಯಂಕರ್ : ಭಾರತದಲ್ಲಿ ಅತ್ಯಾಕರ್ಷಕ ಹಾಗೂ ಅತ್ಯಂತ ಸುರಕ್ಷಿತ ಕಾರಿನ ಮೂಲಕ ಭಾರಿ ಬೇಡಿಕೆ ಪಡೆದುಕೊಂಡಿರುವ ಟಾಟಾ ಮೋಟಾರ್ಸ್ ಇದೀಗ ಮತ್ತೊಂದು ಅತ್ಯಾಕರ್ಷಕ ಕಾರು ಅನಾವರಣ ಮಾಡಿದೆ.ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಎಸ್‌ಯುವಿ ಕೂಪ್ ಕಾರನ್ನು ಟಾಟಾ ಬಿಡುಗಡೆ ಮಾಡುತ್
tata-motors-unveils-most-expected-f


ಬೆಂಗಳೂರು, 20 ಜುಲೈ (ಹಿ.ಸ.) :

ಆ್ಯಂಕರ್ : ಭಾರತದಲ್ಲಿ ಅತ್ಯಾಕರ್ಷಕ ಹಾಗೂ ಅತ್ಯಂತ ಸುರಕ್ಷಿತ ಕಾರಿನ ಮೂಲಕ ಭಾರಿ ಬೇಡಿಕೆ ಪಡೆದುಕೊಂಡಿರುವ ಟಾಟಾ ಮೋಟಾರ್ಸ್ ಇದೀಗ ಮತ್ತೊಂದು ಅತ್ಯಾಕರ್ಷಕ ಕಾರು ಅನಾವರಣ ಮಾಡಿದೆ.ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಎಸ್‌ಯುವಿ ಕೂಪ್ ಕಾರನ್ನು ಟಾಟಾ ಬಿಡುಗಡೆ ಮಾಡುತ್ತಿದೆ. ಟಾಟಾ ಕರ್ವ್ ಹೊಸ ಕಾರು ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಟಾಟಾ ಕರ್ವ್ ಐಸಿಇ ಮತ್ತು ಇವಿ ಕಾರು ಅನಾವರಣಗೊಂಡಿದೆ.

ಕರ್ವ್ ನಲ್ಲಿ ಎಸ್‌ಯುವಿಯ ಸುಂದರ ನೋಟ ಹಾಗೂ ಸಾಮರ್ಥ್ಯದ ಜೊತೆ ಕೂಪ್ ನ ಸೌಂದರ್ಯ ಈ ಕಾರಿನಲ್ಲಿದೆ. ಆಗಸ್ಟ್ 7ರಂದು ಈ ಹೊಚ್ಚ ಹೊಸ ಟಾಟಾ ಕರ್ವ್ ಬಿಡುಗಡೆ ಆಗಲಿದೆ.

ಟಾಟಾ ಮೋಟಾರ್ಸ್‌ನ ಮಲ್ಟಿ- ಪವರ್‌ಟ್ರೇನ್ ತಂತ್ರಕ್ಕೆ ಅನುಗುಣವಾಗಿ ಅನಾವರಣಗೊಳ್ಳಲಿದೆ. ವಿಶೇಷವೆಂದರೆ ಮೊದಲು ಟಾಟಾ ಕರ್ವ್ ನ ಇವಿ ಆವೃತ್ತಿ ಬಿಡುಗಡೆಯಾಗಲಿದ್ದು, ಅದರ ಬೆನ್ನಲ್ಲಿ ಶೀಘ್ರದಲ್ಲಿಯೇ ಐಸಿಐ ಆವೃತ್ತಿಗಳು ಬಿಡುಗಡೆಯಾಗಲಿವೆ.

ಭರ್ಜರಿ ರಿಯಾತಿ ಘೋಷಿಸಿದ ಟಾಟಾ, ಎಸ್‌ಯುವಿ ಕಾರುಗಳಿಗೆ 1.4 ಲಕ್ಷ ರೂ ವರೆಗೆ ರಿಯಾಯಿತಿ!

ಹೊಸ ಟಾಟಾ ಕರ್ವ್ ಕಾರು ಆಕರ್ಷಕ ವಿನ್ಯಾಸ ಹೊಂದಿದೆ. ಅತ್ಯುತ್ತಮ ಪರ್ಫಾಮೆನ್ಸ್ ಹೊಂದಿದ ಕಾರು ಇದಾಗಿದೆ. ಏರೋ ಡೈನಾಮಿಕ್ಸ್ ಥೀಮ್‌ನಲ್ಲಿ ಕಾರು ನಿರ್ಮಾಣ ಮಾಡಲಾಗಿದೆ. ಹೀಗಾಗಿ ಮುಂಭಾಗ, ಹಿಂಭಾಗ ಹಾಗೂ ಎರಡೂ ಬದಿಗಳಿಂದ ಕಾರು ಅತ್ಯಂತ ಆಕರ್ಷಕವಾಗಿ ಕಾಣಲಿದೆ. ಐಷಾರಾಮಿ ಕಾರುಳಲ್ಲಿ ಮಾತ್ರವಿದ್ದ ಕೂಪ್ ಸೌಂದರ್ಯ ಇದೀಗ ಟಾಟಾ ಕೈಗೆಟುಕುವ ದರದಲ್ಲಿ ನೀಡುತ್ತಿದೆ.

ಗ್ರೌಂಡ್ ಕ್ಲೀಯರೆನ್ಸ್, ಡಿಪಾರ್ಚರ್ ಆ್ಯಂಗಲ್ ಸೇರಿದಂತೆ ಹಲುವ ವಿಶೇಷತೆಗಳು ಈ ಕಾರಿನಲ್ಲಿದೆ.

ವರ್ಚುವಲ್ ಸನ್ ರೈಸ್ ಹಾಗೂ ಗೋಲ್ಡ್ ಎಸೆನ್ಸ್ ಬಣ್ಣದಲ್ಲಿ ಈ ಕಾರು ಲಭ್ಯವಿದೆ. ದೂರ ಪ್ರಯಾಣ , ನಗರ ಪ್ರಯಾಣ, ಆಫ್ ರೋಡ್ ಸೇರಿದಂತೆ ಎಲ್ಲಾ ರಸ್ತೆಗಳಿಗೂ ಈ ಕಾರು ಸೂಕ್ತವಾಗಿದೆ. ಅತ್ಯಾಧುನಿಕ ಇಂಟಿರೀಯರ್ ಹೊಂದಿದೆ. ಕ್ಯಾಬಿನ್ ಸ್ಪೇಸ್, ಹೆಚ್ಚಿನ ಸ್ಟೋರೇಜ್ ಸೌಲಭ್ಯ ಸೇರಿದಂತೆ ಎಲ್ಲವೂ ಅತ್ಯುತ್ತಮವಾಗಿ ವಿನ್ಯಾಸಗೊಳಿಸಲಾಗಿದೆ.

ಇಂಧನ ಕಾರಿನ ಪೈಕಿ ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್ ಲಭ್ಯವಿದೆ. ಇದರ ಬೆನ್ನಲ್ಲೇ ಎಲೆಕ್ಟ್ರಿಕ್ ವೇರಿಯೆಂಟ್ ಕೂಡ ಲಭ್ಯವಾಗಲಿದೆ. ಸ್ಪೋರ್ಟೀವ್ ಡ್ರೈವಿಂಗ್ ಅನಭವ ಜೊತೆ ಆರಾಮದಾಯಕ ಪ್ರಯಾಣ ಅನುಭವ ನೀಡಲಿದೆ. ಇನ್ಫೊಟೈನ್ಮೆಂಟ್ ಸಿಸ್ಟಮ್, ಕನೆಕ್ಟೆಡ್ ಫೀಚರ್ ಜೊತೆ ಹೊಸದಾಗಿ ಹಲವು ಫೀಚರ್ ಪರಿಚಯಿಸಲಾಗಿದೆ. ಆ್ಯಕ್ಟೀವ್ ಹಾಗೂ ಪ್ಯಾಸೀವ್ ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲಿದೆ. ಈ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಆಗಸ್ಟ್ 7ರಂದು ಕಾರು ಬಿಡುಗಡೆ ವೇಳೆ ಬಹಿರಂಗವಾಗಲಿದೆ.

ಹಿಂದೂಸ್ತಾನ್ ಸಮಾಚಾರ್

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ


 rajesh pande