ಮುಂಬೈ, 20 ಜುಲೈ (ಹಿ.ಸ.) :
ಆ್ಯಂಕರ್ : 2025ರ ಹಣಕಾಸು ವರ್ಷದ ಮೊದಲ ಕ್ವಾರ್ಟರ್ ಆಗಿರುವ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ಪೇಟಿಎಂನ ಆದಾಯ ಕುಸಿದಿದೆ. ನಷ್ಟ ಹೆಚ್ಚಿದೆ.
ಒನ್97 ಕಮ್ಯೂನಿಕೇಶನ್ಸ್ ಮಾಲಕತ್ವದ ಪೇಟಿಎಂ ಸಂಸ್ಥೆಯ 2024ರ ಏಪ್ರಿಲ್ನಿಂದ ಜೂನ್ವರೆಗಿನ ತ್ರೈಮಾಸಿಕ ಆದಾಯ ವರದಿ ಬಿಡುಗಡೆ ಆಗಿದೆ. ಈ ಮೂರು ತಿಂಗಳಲ್ಲಿ ಅದರ ಆದಾಯ 1,502 ಕೋಟಿ ರೂ ಇದೆ. ಕಳೆದ ವರ್ಷ ಇದೇ ಕ್ವಾರ್ಟರ್ನಲ್ಲಿ ಅದು 2,342 ಕೋಟಿ ರೂ ಆದಾಯ ಪಡೆದಿತ್ತು. ಆ ಅವಧಿಗೆ ಹೋಲಿಸಿದರೆ ಪೇಟಿಎಂ ಆದಾಯ ಶೇ. 36ರಷ್ಟು ಕಡಿಮೆ ಆಗಿದೆ. ಹಾಗೆಯೇ, ಪೇಟಿಎಂನ ನಿವ್ವಳ ನಷ್ಟ 839 ಕೋಟಿ ರೂಗೆ ಏರಿದೆ. ಹಿಂದಿನ ಅವಧಿಯಲ್ಲಿ 357 ಕೋಟಿ ರೂ ನಷ್ಟ ಹೊಂದಿತ್ತು. ಈ ಬಾರಿ ನಷ್ಟ ಇನ್ನೂ ಅಗಾಧವಾಗಿದೆ. ಇದರ ನಡುವೆ ಪೇಟಿಎಂ ವರದಿಯಲ್ಲಿ ಸಕಾರಾತ್ಮಕ ಸಂಗತಿಗಳೂ ಕೆಲವಿವೆ.
ಪೇಟಿಎಂನ ನೇರ ವೆಚ್ಚದಲ್ಲಿ ಇಳಿಕೆ:
ಪೇಟಿಎಂ ಸಂಸ್ಥೆಯ ನೇರ ವೆಚ್ಚಗಳು ವರ್ಷದ ಹಿಂದೆ 1,037 ಕೋಟಿ ರೂ ಇತ್ತು. ಈ ಕ್ವಾರ್ಟರ್ನಲ್ಲಿ ಅದು 746 ರೂಗೆ ಇಳಿದೆ. ಆದರೆ, ಪರೋಕ್ಷ ವೆಚ್ಚ 1,220 ಕೋಟಿ ರೂನಿಂದ 1,301 ಕೋಟಿ ರೂಗೆ ಏರಿದೆ.
ಇಲ್ಲಿ ನೇರ ವೆಚ್ಚಗಳೆಂದರೆ ಬ್ಯಾಂಕುಗಳ ಪೇಮೆಂಟ್ ಪ್ರೋಸಸಿಂಗ್ ಶುಲ್ಕ, ಕ್ಯಾಷ್ಬ್ಯಾಕ್ ಇನ್ಸೆಂಟಿವ್ಗಳ ವೆಚ್ಚ, ವಿವಿಧ ಕಾಂಟೆಸ್ಟ್ಗಳು, ಫಾಸ್ಟ್ಯಾಗ್, ಲಾಜಿಸ್ಟಿಕ್ಸ್, ಸಿಮ್ ವೆಚ್ಚ ಇತ್ಯಾದಿಗಳು ಸೇರುತ್ತವೆ.
ಆಕ್ಸ್ಫ್ಯಾಮ್, ಪಿಕೆಟ್ಟಿ ವಿರುದ್ಧ ಸಂಜೀವ್ ಸಾನ್ಯಾಲ್ ಗುಡುಗು
ಇನ್ಡೈರೆಕ್ಟ್ ಎಕ್ಸ್ಪೆನ್ಸ್ ಅಥವಾ ಪರೋಕ್ಷ ವೆಚ್ಚದಲ್ಲಿ ಮಾರ್ಕೆಟಿಂಗ್, ಉದ್ಯೋಗಿಗಳ ವೆಚ್ಚ, ಸಾಫ್ಟ್ವೇರ್, ಕ್ಲೌಡ್, ಡಾಟಾ ಸೆಂಟರ್ ಇತ್ಯಾದಿ ತಂತ್ರಜ್ಞಾನ ವೆಚ್ಚಗಳು ಸೇರುತ್ತವೆ.
ಪೇಟಿಎಂಗೆ ಪ್ರಮುಖ ಆದಾಯ ಮೂಲವಾಗಿರುವುದು ವರ್ತಕರು. ಈ ವರ್ತಕರಿಗೆ ವಿತರಿಸಲಾಗಿರುವ ಸಾಲ ಈ ತ್ರೈಮಾಸಿಕ ಅವಧಿಯಲ್ಲಿ 2,508 ಕೋಟಿ ರೂ. ಉನ್ನತ ಗುಣಮಟ್ಟದ ವರ್ತಕರನ್ನು ಗುರುತಿಸಿ ಅವರಿಗೆ ಸಾಲ ನೀಡಲು ತಮ್ಮ ಪಾರ್ಟ್ನರ್ ಸಂಸ್ಥೆಗಳು ಗಮನ ಕೊಡುತ್ತಿವೆ.
ಹಿಂದೂಸ್ತಾನ್ ಸಮಾಚಾರ್
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ