ಬಾಗಲಕೋಟೆಯ ಅಂಕಿತಾ ಬಸಪ್ಪ ಕೊನ್ನೂರು ರಾಜ್ಯಕ್ಕೆ ಪ್ರಥಮ
ಬೆಂಗಳೂರು, 9 ಮೇ (ಹಿ.ಸ):ಆ್ಯಂಕರ್: 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ.
Ankita Basappa Konnuru Ranks With 625


ಬೆಂಗಳೂರು, 9 ಮೇ (ಹಿ.ಸ):ಆ್ಯಂಕರ್:

2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ 8 ಲಕ್ಷ 59 ಸಾವಿರದ 967 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 6 ಲಕ್ಷ 31 ಸಾವಿರ 204 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಎಸ್ ಎಸ್ ಎಲ್ ಸಿ ಫಲಿತಾಂಶ ಶೇಕಡಾ 10ರಷ್ಟು ಕುಸಿತ ಕಂಡಿದ್ದು, ಸುಮಾರು 2 ಲಕ್ಷ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಈ ಬಾರಿ ಅನುತೀರ್ಣರಾಗಿದ್ದಾರೆ.

ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದಲ್ಲಿ ಬಾಗಲಕೋಟೆ ಜಿಲ್ಲೆಯ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ ಬಂದಿದ್ದಾರೆ. ಮುಧೋಳ ತಾಲ್ಲೂಕಿನ ವಜ್ಜರಮಟ್ಟಿ ಗ್ರಾಮದ ಅಂಕಿತಾ ಬಸಪ್ಪ ಕಣ್ಣೂರ 625ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಅಂಕಿತಾ ಬಸಪ್ಪ ಕಣ್ಣೂರ ಅವರು ಮೆಳ್ಳಿಗೇರಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ. ಅಂಕಿತಾ 625ಕ್ಕೆ 625 ಅಂಕ ಪಡೆದಿರುವುದರಿಂದ ವಜ್ಜರಮಟ್ಟಿ ಗ್ರಾಮದಲ್ಲಿ ಸಂತಸ ಮನೆ ಮಾಡಿದೆ.

7 ಜನರಿಗೆ ದ್ವಿತೀಯ ಸ್ಥಾನ

ಮೇದಾ ಪಿ ಶೆಟ್ಟಿ ( ಬೆಂಗಳೂರು) 624/625

ಹರ್ಷಿತಾ ಡಿಎಂ (ಮಧುಗಿರಿ)

ಚಿನ್ಮಯ್ ಜಿ.ಕೆ (ದಕ್ಷಿಣ ಕನ್ನಡ)

ಸಿದ್ದಾಂತ್ (ಚಿಕ್ಕೊಡಿ )

ದರ್ಶನ್ (ಶಿರಸಿ)

ಚಿನ್ಮಯ್ (ಶಿರಸಿ)

ಶ್ರೀರಾಮ್ (ಶಿರಸಿ)

ತೃತೀಯ ಸ್ಥಾನ

ಹಿಂದೂಸ್ತಾನ್ ಸಮಾಚಾರ್


 rajesh pande