ನಾನು ಇಸ್ಲಾಂ ವಿರೋಧಿಯಲ್ಲ, ಮತದಾನಕ್ಕೂ ಮುನ್ನ ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿ-ಮೋದಿ
ನವದೆಹಲಿ, 7 ಮೇ (ಹಿ.ಸ):ಆ್ಯಂಕರ್: ನಾನು ಇಸ್ಲಾಂ ವಿರೋಧಿಸುವುದಿಲ್ಲ, ನೀವು ಮತದಾನ ಮಾಡುವ ಮುನ್ನ ನಿಮ್ಮ ಮಕ್ಕ
ನಾನು ಇಸ್ಲಾಂ ವಿರೋಧಿಯಲ್ಲ, ಮತದಾನಕ್ಕೂ ಮುನ್ನ ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿ-ಮೋದಿ


ನವದೆಹಲಿ, 7 ಮೇ (ಹಿ.ಸ):ಆ್ಯಂಕರ್:

ನಾನು ಇಸ್ಲಾಂ ವಿರೋಧಿಸುವುದಿಲ್ಲ, ನೀವು ಮತದಾನ ಮಾಡುವ ಮುನ್ನ ನಿಮ್ಮ ಮಕ್ಕಳ ಉಜ್ವಲ ಭವಿಷ್ಯದ ಬಗ್ಗೆ ಒಮ್ಮೆ ಯೋಚಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಖಾಸಗಿ ಸುದ್ದಿವಾಹಿನಿ ನೀಡಿದ ಸಂದರ್ಶನಲ್ಲಿ ಪ್ರಧಾನಿ ಮೋದಿ ಮಾತನಾಡಿ, ಗ್ರೆಸ್ ಅವಧಿಯಲ್ಲಿ ಸರ್ಕಾರದ ಯೋಜನೆಗಳ ಲಾಭವನ್ನು ನೀವು ಏಕೆ ಪಡೆಯಲಿಲ್ಲ ಎಂಬುದನ್ನು ನೀವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು. ಗುಜರಾತ್ನಲ್ಲಿ 10 ವರ್ಷಗಳಲ್ಲಿ 7 ಗಲಭೆಗಳು ನಡೆದಿವೆ ಆದರೆ 2002 ರ ನಂತರ ಗುಜರಾತ್ನಲ್ಲಿ ಒಂದೇ ಒಂದು ಗಲಭೆ ನಡೆದಿಲ್ಲ ಎಂದರು.

ದೇಶವು ತುಂಬಾ ಪ್ರಗತಿಯಲ್ಲಿದೆ, ನಿಮ್ಮ ಸಮಾಜದಲ್ಲಿ ಕೊರತೆಯನ್ನು ಅನುಭವಿಸಿದರೆ ಅದಕ್ಕೆ ಕಾರಣವೇನು? ಕಾಂಗ್ರೆಸ್ ಕಾಲದಲ್ಲಿ ಸರ್ಕಾರದ ವ್ಯವಸ್ಥೆಗಳ ಲಾಭ ಏಕೆ ಸಿಗಲಿಲ್ಲ? ಕಾಂಗ್ರೆಸ್ ಅವಧಿಯಲ್ಲಿ ನೀವು ಈ ದುಸ್ಥಿತಿಗೆ ಬಲಿಯಾಗಿದ್ದೀರಾ? ಒಮ್ಮೆ ಆತ್ಮಾವಲೋಕನ ಮಾಡಿ ನಿರ್ಧರಿಸಿ ಎಂದರು.

ಜಗತ್ತಿನಲ್ಲಿ ಮುಸ್ಲಿಂ ಸಮಾಜ ಬದಲಾಗುತ್ತಿದೆ, ಇಂದು ನಾನು ಗಲ್ಫ್ ದೇಶಗಳಿಗೆ ಹೋಗುತ್ತೇನೆ, ನನಗೆ ವೈಯಕ್ತಿಕವಾಗಿ ತುಂಬಾ ಗೌರವ ಸಿಗುತ್ತದೆ ಮತ್ತು ಭಾರತವೂ ಅದನ್ನು ಪಡೆಯುತ್ತಿದೆ. ಇಲ್ಲಿ ವಿರೋಧವಿದೆ ಎಂದು ಅವರೆಲ್ಲ ಭಾವಿಸುತ್ತಾರೆ, ಯೋಗವು ಸೌದಿ ಅರೇಬಿಯಾದಲ್ಲಿ ಅಧಿಕೃತ ಪಠ್ಯಕ್ರಮದ ವಿಷಯವಾಗಿದೆ. ನಾನು ಇಲ್ಲಿ ಯೋಗದ ಬಗ್ಗೆ ಮಾತನಾಡಿದರೆ ಅದು ಮುಸ್ಲಿಂ ವಿರೋಧಿ ಎಂದು ಹೇಳುತ್ತೀರಿ.

ಮುಸ್ಲಿಂ ಸಮುದಾಯವು ಕನಿಷ್ಠ ತಮ್ಮ ಮಕ್ಕಳ ಜೀವನದ ಬಗ್ಗೆ ಯೋಚಿಸಿ, ಅವರ ಭವಿಷ್ಯದ ಬಗ್ಗೆ ಯೋಚಿಸಿ ಎಂದು ನಾನು ಒತ್ತಾಯಿಸುತ್ತೇನೆ ಎಂದು ಹೇಳಿದರು. ಯಾವ ಸಮಾಜವೂ ಜೀತದಾಳುಗಳಂತೆ ಬದುಕುವುದು ನನಗೆ ಇಷ್ಟವಿಲ್ಲ. ನಾನು ಮುಸ್ಲಿಮರ ವಿರೋಧಿಯಲ್ಲ, ತ್ರಿವಳಿ ತಲಾಖ್ ರದ್ದುಗೊಳಿಸಿದಾಗ ಎಲ್ಲರೂ ನನ್ನನ್ನು ಹರಸಿದ್ದಾರೆ.

ಆಯುಷ್ಮಾನ್ ಕಾರ್ಡ್ ಎಲ್ಲರಿಗೂ ನೀಡಿದ್ದೇನೆ, ಕೋವಿಡ್ ಲಸಿಕೆ ಎಲ್ಲರಿಗೂ ಸಿಗುವಂತೆ ಮಾಡಿದ್ದೇನೆ ಎಲ್ಲೂ ತಾರತಮ್ಯ ಮಾಡಿಲ್ಲ ಎಂದು ಹೇಳಿದರು. ಇಂದು ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಆರಂಭವಾಗಿದ್ದು, ಪ್ರಧಾನಿ ಮೋದಿ ಅಹಮದಾಬಾದ್ನಲ್ಲಿ ಮತ ಚಲಾಯಿಸಿದರು. ಏಪ್ರಿಲ್ 19 ರಂದು ಪ್ರಾರಂಭವಾಗಿ ಜೂನ್ 1 ಕ್ಕೆ ಕೊನೆಗೊಳ್ಳಲಿದ್ದು ಜೂನ್ 4ಕ್ಕೆ ಫಲಿತಾಂಶ ಹೊರಬರಲಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande