ಸೇಡಂ ಮಾಜಿ ಶಾಸಕ, ಕಾಂಗ್ರೆಸ್ ನಾಯಕ ನಾಗರೆಡ್ಡಿ ಪಾಟೀಲ್ ನಿಧನ
ಕಲಬುರಗಿ, 6 ಮೇ (ಹಿ.ಸ):ಆ್ಯಂಕರ್: ಸೇಡಂ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಡಾ ನಾಗರೆಡ್ಡಿ ಪಾಟೀಲ್ (7
ormer-sedam-congress-mla-dr-nagareddy-patil-pass


ಕಲಬುರಗಿ, 6 ಮೇ (ಹಿ.ಸ):ಆ್ಯಂಕರ್: ಸೇಡಂ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಡಾ ನಾಗರೆಡ್ಡಿ ಪಾಟೀಲ್ (79) ಇಂದು ನಿಧನರಾಗಿದ್ದಾರೆ.

ಇಂದು ಬೆಳಗಿನ ಜಾವ 3 ಗಂಟೆಗೆ ಸೇಡಂ ಪಟ್ಟಣದಲ್ಲಿ ತಮ್ಮ ನಿವಾಸದಲ್ಲಿ ನಾಗರೆಡ್ಡಿ ಪಾಟೀಲ್ ವಿಧಿವಶರಾದರು.

ನಾಗರೆಡ್ಡಿ ಸೇಡಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ್ ರ ತಂದೆಯಾಗಿದ್ದಾರೆ. ಇಂದು ಮಧ್ಯಾಹ್ನ 3:30ಕ್ಕೆ ಸೇಡಂ ಪಟ್ಟಣದಲ್ಲಿರುವ ಸ್ವತಃ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. 1983 ರಿಂದ 85 ರ ಅವಧಿಯಲ್ಲಿ ಎರಡೂವರೆ ವರ್ಷ ನಾಗರೆಡ್ಡಿ ಪಾಟೀಲ್ ಶಾಸಕರಾಗಿದ್ದರು.

ಹಿಂದೂಸ್ತಾನ್ ಸಮಾಚಾರ್


 rajesh pande