ವಿಶೇಷ ಮತಗಟ್ಟೆಗಳಿಗೆ ಜಿಪಂ ಸಿಇಓ ಭೇಟಿ, ಮೆಚ್ಚುಗೆ
ಹರಪನಹಳ್ಳಿ, 06 ಮೇ (ಹಿ.ಸ): ಆ್ಯಂಕರ್ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮತದಾನದ ಬಗ್ಗೆ ಪ್ರೇರಣೆ ನ
ವಿಶೇಷ ಮತಗಟ್ಟೆಗಳಿಗೆ ಜಿಪಂ ಸಿಇಓ ಭೇಟಿ: ಮೆಚ್ಚುಗೆ


ವಿಶೇಷ ಮತಗಟ್ಟೆಗಳಿಗೆ ಜಿಪಂ ಸಿಇಓ ಭೇಟಿ: ಮೆಚ್ಚುಗೆ


ವಿಶೇಷ ಮತಗಟ್ಟೆಗಳಿಗೆ ಜಿಪಂ ಸಿಇಓ ಭೇಟಿ: ಮೆಚ್ಚುಗೆ


ವಿಶೇಷ ಮತಗಟ್ಟೆಗಳಿಗೆ ಜಿಪಂ ಸಿಇಓ ಭೇಟಿ: ಮೆಚ್ಚುಗೆ


ಹರಪನಹಳ್ಳಿ, 06 ಮೇ (ಹಿ.ಸ):

ಆ್ಯಂಕರ್ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮತದಾನದ ಬಗ್ಗೆ ಪ್ರೇರಣೆ ನೀಡಲು ವಿಜಯನಗರ ಜಿಲ್ಲಾದ್ಯಂತ ವಿವಿಧೆಡೆ ವಿಶೇಷವಾಗಿ ರೂಪಿಸಿರುವ ಕೆಲವು ಮತಗಟ್ಟೆಗಳಿಗೆ ಜಿಲ್ಲಾ ಪಂಚಾಯತ್ ಸಿಇಓ ಸದಾಶಿವ ಪ್ರಭು ಬಿ ಅವರು ಮೇ 6ರಂದು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹರಪನಹಳ್ಳಿ ತಾಲ್ಲೂಕು ಪಂಚಾಯತಿ ಹಾಗೂ ಅರಣ್ಯ ಇಲಾಖೆ ಸಹಕಾರದೊಂದಿಗೆ ಹರಪನಹಳ್ಳಿ ತಾಲ್ಲೂಕು ಪಂಚಾಯಿತಿ ಕಚೇರಿಯ ಸಾಮಥ್ರ್ಯ ಸೌಧದ ತರಬೇತಿ ಕೇಂದ್ರದಲ್ಲಿ ಸ್ಥಾಪನೆ ಮಾಡಲಾಗಿರುವ ಅರಣ್ಯ ವಿಷಯಾಧರಿತ ಮತಗಟ್ಟೆ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಅರಣ್ಯ ವಿಷಯಾಧರಿತ ಮತಗಟ್ಟೆ ಸ್ಥಾಪನೆ ಮಾಡಿ ಹಲವು ವಿಷಯಗಳ ಕುರಿತು ಮಾಹಿತಿ ಹಾಗೂ ಆಕರ್ಷಕ ಬಣ್ಣಬಣ್ಣದ ತೋರಣಗಳಿಂದ ಶೃಂಗಾರ ಮಾಡಿರುವುದು ಮತದಾರರ ಹಾಗೂ ನೋಡುಗರ ಮನಸೂರೆಗೊಳಿಸುತ್ತಿದೆ. ಮೇ 07ರಂದು ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದು ಸಾರ್ವಜನಿಕರಲ್ಲಿ ಇದೆ ವೇಳೆ ಸಿಇಓ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹರಪನಹಳ್ಳಿ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ವೈ.ಎಚ್., ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು. ಸಖಿ ಮತಗಟ್ಟೆಗಳಿಗೂ ಭೇಟಿ: ಹರಪನಹಳ್ಳಿ ತಾಲೂಕಿನ ಬೆಣ್ಣಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 131 ಮತ್ತು 132 ಸಖಿ ಮತಗಟ್ಟೆಗಳಿಗೆ ಸಹ ಸಿಇಓ ಅವರು ಭೇಟಿ ನೀಡಿ ಮತಗಟ್ಟೆಗಳಲ್ಲಿನ ಮೂಲಭೂತ ಸೌಕರ್ಯಗಳ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿದರು. ಇದೆ ವೇಳೆ ಸಖಿ ಮತಗಟ್ಟೆಯಲ್ಲಿನ ಅಲಂಕಾರ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಅಚ್ಚುಕಟ್ಟಾದ ಶೌಚಾಲಯದ ವ್ಯವಸ್ಥೆಯನ್ನು ವೀಕ್ಷಿಸಿ ಸ್ಥಳದಲ್ಲಿ ಹಾಜರಿದ್ದ ಪಿಡಿಓ ಅವರ ಕಾರ್ಯವೈಖರಿಯ ಬಗ್ಗೆ ಪ್ರಶಂಶೆ ವ್ಯಕ್ತಪಡಿಸಿದರು.


 rajesh pande