ಕಿಡ್ನ್ಯಾಪ್ ಗೂ ನನಗೂ ಸಂಬಂಧವಿಲ್ಲ: ಎಸ್ ಐ ಟಿ ಅಧಿಕಾರಿಗಳಿಗೆ ರೇವಣ್ಣ ಹೇಳಿಕೆ
ಬೆಂಗಳೂರು, 6 ಮೇ (ಹಿ.ಸ):ಆ್ಯಂಕರ್: ಲೈಂಗಿಕ ದೌರ್ಜನ್ಯ ಮತ್ತು ಕಿಡ್ನ್ಯಾಪ್ ಪ್ರಕರಣದಲ್ಲಿ ಎಸ್ಐಟಿ ಬಂಧನದಲ್
ಕಿಡ್ನ್ಯಾಪ್ ಗೂ ನನಗೂ ಸಂಬಂಧವಿಲ್ಲ: ಎಸ್ ಐ ಟಿ ಅಧಿಕಾರಿಗಳಿಗೆ ರೇವಣ್ಣ ಹೇಳಿಕೆ


ಬೆಂಗಳೂರು, 6 ಮೇ (ಹಿ.ಸ):ಆ್ಯಂಕರ್: ಲೈಂಗಿಕ ದೌರ್ಜನ್ಯ ಮತ್ತು ಕಿಡ್ನ್ಯಾಪ್ ಪ್ರಕರಣದಲ್ಲಿ ಎಸ್ಐಟಿ ಬಂಧನದಲ್ಲಿರುವ ಜೆಡಿಎಸ್ ಶಾಸಕ ಹೆಚ್ಡಿ ರೇವಣ್ಣ ವಿಚಾರಣೆ ತೀವ್ರಗೊಂಡಿದೆ. ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಮನೆಯಿಂದ ರೇವಣ್ಣರನ್ನು ಬಂಧಿಸಿದ್ದ ಎಸ್ ಐಟಿ ನಿನ್ನೆ ಸಂಜೆ ಜಡ್ಜ್ ಎದುರು ಹಾಜರುಪಡಿಸಿತ್ತು. ಈ ವೇಳೆ ರಾಜಕೀಯ ಭವಿಷ್ಯವನ್ನು ನೆನಪಿಸಿಕೊಂಡು ರೇವಣ್ಣ ಕೈ ಮುಗಿದು ಕಣ್ಣೀರು ಹಾಕಿದ್ದರು. ರಾಜಕೀಯ ಷಡ್ಯಂತ್ರ ನಡೆಸಿ ನನ್ನ ಬಂಧನವಾಗಿದೆ ಅಂತ ಅಳಲು ತೋಡಿಕೊಂಡಿದ್ದರು. ಸದ್ಯ 4 ದಿನಗಳ ಕಾಲ ಎಸ್ಐಟಿ ಕಸ್ಟಡಿಯಲ್ಲಿರುವ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ.

ಮಹಿಳೆಯನ್ನು ಬಲವಂತವಾಗಿ ದೈಹಿಕವಾಗಿ ಬಳಸಿಕೊಂಡಿದ್ದರು ಎಂದು ಎಸ್ಐಟಿ ಹೇಳಿಕೆ ದಾಖಲಿಸಿಕೊಂಡಿದೆ. ಆದ್ರೆ, ಎಸ್ಐಟಿ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡದ ರೇವಣ್ಣ, ಕಿಡ್ನ್ಯಾಪ್ಗೂ ನನಗೂ ಸಂಬಂಧವಿಲ್ಲ. ಕಿಡ್ನ್ಯಾಪ್ ಮಾಡಿ ಅಂತಾ ಯಾರಿಗೂ ಹೇಳಿಲ್ಲ ಅಂತಾ ಒಂದೇ ಉತ್ತರ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande