ವಿಶೇಷ ಮತಗಟ್ಟೆಗಳ ಸ್ಥಾಪನೆ
ಹೊಸಪೇಟೆ, 6 ಮೇ (ಹಿ.ಸ): ಆ್ಯಂಕರ್: ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಮತದಾನವು ಮೇ 7ರಂದು ನಡೆಯಲಿದ್ದು,
Establishment of residual polling booths


Establishment of residual polling booths


Establishment of residual polling booths


ಹೊಸಪೇಟೆ, 6 ಮೇ (ಹಿ.ಸ):

ಆ್ಯಂಕರ್: ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಮತದಾನವು ಮೇ 7ರಂದು ನಡೆಯಲಿದ್ದು, ಮತದಾನ ಕೇಂದ್ರಗಳಿಗೆ ಆಗಮಿಸಿ ಮತದಾನ ಮಾಡುವುದಕ್ಕೆ ಸಾರ್ವಜನಿಕರಿಗೆ ಪ್ರೇರೇಪಣೆ ನೀಡಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 5ರಂತೆ 25 ಸಖಿ ಮತಗಟ್ಟೆಗಳು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1ರಂತೆ 5 ವಿಶೇಷಚೇತನರ ಮತಗಟ್ಟೆಗಳು, 5 ಯುವ ಮತದಾರರ ಮತಗಟ್ಟೆಗಳು, 5 ಮಾದರಿ ಮತಗಟ್ಟೆಗಳು, 5 ಧ್ಯೇಯ ಆಧಾರಿತ ಮತಗಟ್ಟೆಗಳು ಮತ್ತು 5 ಸಾಂಪ್ರದಾಯಿಕ ಮತಗಟ್ಟೆಗಳನ್ನಾಗಿ ಸಿದ್ಧಪಡಿಸಲಾಗಿದೆ. 25 ಸಖಿ ಮತಗಟ್ಟೆಗಳು ವಿಶೇಷ ಅಲಂಕಾರದಿಂದ ಗಮನ ಸೆಳೆಯುತ್ತಿವೆ.

ಹಡಗಲಿ ಕ್ಷೇತ್ರದಲ್ಲಿನ ಎಸ್ವಿಜಿ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ ಸಂಖ್ಯೆ 95, ಹಗರಿಬೊಮ್ಮನಹಳ್ಳಿ ತಾಲೂಕಿನ ಮರಿಯಮ್ಮನಹಳ್ಳಿಯ ಟೌನ್ ಪಂಚಾಯತ್ ಕಚೇರಿಯಲ್ಲಿನ ಮತಗಟ್ಟೆ ಸಂಖ್ಯೆ 61, ಹೊಸಪೇಟೆಯ ವಿದ್ಯುತ್ ನಗರದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ ಸಂಖ್ಯೆ 147ಗಳನ್ನು ಜೀವಜಲ ಸಂರಕ್ಷಣೆಗೆ ಸಂಬಂಧಿಸಿದಂತೆ ಪೆಂಟಿಂಗ್ ಚಿತ್ರಗಳ ಮೂಲಕ ಸಿದ್ಧಪಡಿಸಲಾಗಿದೆ. ಕೂಡ್ಲಿಗಿ ಪಟ್ಟಣದ ಮತಗಟ್ಟೆ ಸಂಖ್ಯೆ 35ರಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಾಲ ವಿದ್ಯಾರ್ಥಿಗಳ ಕನಸು, ಡಾಕ್ಟರ್, ಎಂಜಿನಿಯರಿಂಗ್ ಇನ್ನೀತರ ಉನ್ನತ ಶಿಕ್ಷಣ ಕಲ್ಪನೆ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಚಿತ್ರಕಲೆಯಿಂದ ಗಮನ ಸೆಳೆಯುತ್ತಿದೆ. ಅರಣ್ಯ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಸಾಮಾಜಿಕ ಹಾಗೂ ಪ್ರಾದೇಶಿಕ ಅರಣ್ಯ ಇಲಾಖೆ ಸಹಯೋಗದೊಂದಿಗೆ ಚಿತ್ರಕಲೆ ಹಾಗೂ ಸಸಿಗಳನ್ನು ಮತಗಟ್ಟೆ ಆವರಣದಲ್ಲಿ ಆಕರ್ಷಣೀಯವಾಗಿ ಇರಿಸಿರುವುದರಿಂದ ಹರಪನಹಳ್ಳಿ ಪಟ್ಟಣದಲ್ಲಿನ ಸಂಖ್ಯೆ 93ರ ಮತಗಟ್ಟೆಯು ಜನಮನ ಸೆಳೆಯುತ್ತಿದೆ.

ಶಿಕ್ಷಣ ಹಾಗೂ ಕ್ರೀಡೆಗೆ ಸಂಬಂಧಿಸಿದಂತೆ ಚಿತ್ರಕಲೆಯ ಸೌಲಭ್ಯದ ವ್ಯವಸ್ಥೆಯನ್ನು ಹಡಗಲಿ ತಾಲೂಕಿನ ಮತಗಟ್ಟೆ ಸಂಖ್ಯೆ 80ರಲ್ಲಿ, ಹಗರಿಬೊಮ್ಮನಹಳ್ಳಿ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿನ ಮತಗಟ್ಟೆ ಸಂಖ್ಯೆ 53ರಲ್ಲಿ, ವಿಜಯನಗರ ಕ್ಷೇತ್ರದಲ್ಲಿ ಹೊಸಪೇಟೆ ನಗರದಲ್ಲಿನ ಮತಗಟ್ಟೆ ಸಂಖ್ಯೆ 95ರಲ್ಲಿ, ಕೂಡ್ಲಿಗಿ ಕ್ಷೇತ್ರದಲ್ಲಿ ಮತಗಟ್ಟೆ ಸಂಖ್ಯೆ 45ರಲ್ಲಿ ಮತ್ತು ಹರಪನಹಳ್ಳಿ ಕ್ಷೇತ್ರದಲ್ಲಿ ಮತಗಟ್ಟೆ ಸಂಖ್ಯೆ 103ರಲ್ಲಿ ಮಾಡಲಾಗಿದೆ.

ಹಂಪಿ ವಿಶ್ವಪರಂಪರೆಗೆ ಸಂಬಂಧಿಸಿದಂತೆ ಕಲ್ಲಿನ ರಥ ವಿರೂಪಾಕ್ಷೇಶ್ವರ ದೇವಸ್ಥಾನ ಮತ್ತು ಇನ್ನೀತರ ಚಿತ್ರಕಲೆಯಿಂದ ಹಡಗಲಿ ಪಟ್ಟಣದ ಸಂಖ್ಯೆ 96ರ ಮತಗಟ್ಟೆಯು, ಹಗಲುವೇಷ, ಬಯಲಾಟ, ತೊಗಲುಗೊಂಬೆಯಾಟ ಗ್ರಾಮೀಣ ಜಾನಪದ ಕಲೆಯಿಂದ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿನ ಸಂಖ್ಯೆ 126ರ ಮತಗಟ್ಟೆಯು, ಡೊಳ್ಳುಕುಣಿತ ಚಿತ್ರಕಲೆ ಮತ್ತು ಭೌತಿಕವಾಗಿ ಮತಗಟ್ಟೆ ಪ್ರವೇಶದ್ವಾರದ 2 ಬದಿ ಆಕರ್ಷಿಣೀಯವಾಗಿ ಡೊಳ್ಳುಗಳನ್ನಿರಿಸಿ ಸಂಖ್ಯೆ 160ರ ಹೊಸಪೇಟೆ ಪಟ್ಟಣದಲ್ಲಿನ ತಳವಾರ ಕೇರಿಯ ಮತಗಟ್ಟೆಯು, ಬಂಜಾರ ಸಮುದಾಯದ ಕಲೆಯನ್ನು ಬಿಂಬಿಸುವ ಬಂಜಾರ ಕಲೆಯಿಂದ ಕೂಡ್ಲಿಗಿ ಪಟ್ಟಣದ ಸಂಖ್ಯೆ 59ರ ಮತಗಟ್ಟೆಯು ಮತ್ತು ಬಂಜಾರ ಸಮುದಾಯದ ಹಾಗೂ ಗ್ರಾಮೀಣ ಸೊಗಡು ಚಿತ್ರ ಕಲಾಕೃತಿಯಿಂದಾಗಿ ಹರಪನಹಳ್ಳಿ ಪಟ್ಟಣದಲ್ಲಿನ ಸಂಖ್ಯೆ 88ರ ಮತಗಟ್ಟೆಗಳು ಗಮನ ಸೆಳೆಯುತ್ತಿವೆ.

ಹಡಗಲಿಯ ಪಟ್ಟಣದಲ್ಲಿನ ಮತಗಟ್ಟೆ ಸಂಖ್ಯೆ 97, ಹಗರಿಬೊಮ್ಮನಹಳ್ಳಿಯ ಪಟ್ಟಣದಲ್ಲಿನ ಮತಗಟ್ಟೆ ಸಂಖ್ಯೆ 252, ಹೊಸಪೇಟೆ ಪಟ್ಟಣದಲ್ಲಿನ ವಾರ್ಡ ನಂಬರ್ 19ರಲ್ಲಿನ ಮತಗಟ್ಟೆ ಸಂಖ್ಯೆ 83, ಕೂಡ್ಲಿಗಿ ಪಟ್ಟಣದಲ್ಲಿನ ಮತಗಟ್ಟೆ ಸಂಖ್ಯೆ 34 ಮತ್ತು ಹರಪನಹಳ್ಳಿ ಪಟ್ಟಣದಲ್ಲಿನ ಮತಗಟ್ಟೆ ಸಂಖ್ಯೆ 116 ಈ ಮತಗಟ್ಟೆಗಳು ಎಲ್ಲಾ ಮೂಲಭೂತ ಸೌಕರ್ಯಗಳ ಬಗ್ಗೆ ತಿಳಿಸುತ್ತವೆ.

ವಿಶೇಷ ವ್ಯವಸ್ಥೆ: ಹಡಗಲಿಯ 8ನೇ ವಾರ್ಡನಲ್ಲಿನ ಹರಿಜನ ಕೇರಿಯಲ್ಲಿರುವ ಮತಗಟ್ಟೆ ಸಂಖ್ಯೆ 94, ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿನ ರಾಮನಗರದಲ್ಲಿನ ಎಪಿಎಂಸಿ ಕಚೇರಿಯಲ್ಲಿನ ಮತಗಟ್ಟೆ ಸಂಖ್ಯೆ 134, ಹೊಸಪೇಟೆ ನಗರದಲ್ಲಿನ ಟಿಬಿ ಡ್ಯಾಮ್ ರಸ್ತೆಯಲ್ಲಿನ ವಂಕಾ ಕ್ಯಾಂಪ್ದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕಚೇರಿಯಲ್ಲಿನ ಮತಗಟ್ಟೆ ಸಂಖ್ಯೆ 151, ಕೂಡ್ಲಿಗಿ ಕ್ಷೇತ್ರದಲ್ಲಿನ ಗುಡ್ಡ ತಾಂಡಾದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ ಸಂಖ್ಯೆ 57 ಮತ್ತು ಹರಪನಹಳ್ಳಿ ಪಟ್ಟಣದಲ್ಲಿನ ಮುನ್ಸಿಫಲ್ ಕಚೇರಿಯಲ್ಲಿನ ಮತಗಟ್ಟೆ ಸಂಖ್ಯೆ 105 ಗಳು ವಿಶೇಷಚೇತನರ ಮತಗಟ್ಟೆಗಳಾಗಿದ್ದು ಇಲ್ಲಿ ರ್ಯಾಂಪ್, ವ್ಹೀಲ್ ಚೇರ್, ಮ್ಯಾಗ್ನಿಫೈಡ್ ಗ್ಲಾಸ್, ಶೌಚಾಲಯ ಮತ್ತು ಇನ್ನೀತರ ಮೂಲಭೂತ ಸೌಕರ್ಯಗನ್ನು ಕಲ್ಪಿಸಲಾಗಿದೆ.

25 ಸಖಿ ಮತಗಟ್ಟೆಗಳು: ಹಡಗಲಿ ಕ್ಷೇತ್ರದಲ್ಲಿ ಮತಗಟ್ಟೆ ಸಂಖ್ಯೆ 218, 162, 184, 87, 82 ಸಖಿ ಮತಗಟ್ಟೆಗಳಾಗಿವೆ. ಅದೇ ರೀತಿ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಮತಗಟ್ಟೆ ಸಂಖ್ಯೆ 28, 247, 234, 111 128 ಸಖಿ ಮತಗಟ್ಟೆಗಳಾಗಿವೆ. ಅದೇ ರೀತಿ ವಿಜಯನಗರ ಕ್ಷೇತ್ರದಲ್ಲಿ ಮತಗಟ್ಟೆ ಸಂಖ್ಯೆ 229, 56, 11, 179, 194 ಸಖಿ ಮತಗಟ್ಟೆಗಳಾಗಿವೆ. ಅದೇ ರೀತಿ ಕೂಡ್ಲಿಗಿ ಕ್ಷೇತ್ರದಲ್ಲಿ ಮತಗಟ್ಟೆ ಸಂಖ್ಯೆ 74, 187, 109, 53, 52 ಸಖಿ ಮತಗಟ್ಟೆಗಳಾಗಿವೆ. ಅದೇ ರೀತಿ ಹರಪನಹಳ್ಳಿ ಕ್ಷೇತ್ರದಲ್ಲಿ ಮತಗಟ್ಟೆ ಸಂಖ್ಯೆ ಸಂಖ್ಯೆ 68, 204, 132, 87, 104 ಸಖಿ ಮತಗಟ್ಟೆಗಳಾಗಿವೆ.

ಮತದಾನಕ್ಕೆ ಪ್ರೇರಣೆ: ವಿಜಯನಗರ ಜಿಲ್ಲೆಯಲ್ಲಿ ಮಹಿಳೆಯರು, ವಿಶೇಷಚೇತನರು, ಹಿರಿಯ ನಾಗರಿಕರು, ಯುವ ಮತದಾರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಹಲವಾರು ಬಗೆಯ ಲಕ್ಷಾಂತರ ಸಂಖ್ಯೆಯ ಮತದಾರರಿಗೆ ಇಲ್ಲಿಯವರೆಗೆ ನೈತಿಕ ಹಾಗೂ ಕಡ್ಡಾಯ ಮತದಾನದ ಕುರಿತು ಜಾಗೃತಿ ಮೂಡಿಸಲಾಗಿದೆ. ಡಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಹರಪನಹಳ್ಳಿ ಸೇರಿದಂತೆ ಬಳ್ಳಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿಜಯನಗರ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿನ ಮತದಾರರನ್ನು ಆಕರ್ಷಿಸಲು 25 ಸಖಿ ಮತಗಟ್ಟೆಗಳನ್ನು ಹಾಗೂ ತಲಾ 05 ವಿಶೇಷಚೇತನರ ಮತಗಟ್ಟೆಗಳು, ಯುವ ಮತದಾರರ ಮತಗಟ್ಟೆಗಳು, ಮಾದರಿ ಮತಗಟ್ಟೆಗಳು, ವಿಷಯಾಧಾರಿತ ಹಾಗೂ ಸಾಂಪ್ರದಾಯಿಕ ಮತಗಟ್ಟೆಗಳನ್ನು ಮೇ 7ರಂದು ನಡೆಯಲಿರುವ ಮತದಾನದ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ವಿಶೇಷವಾಗಿ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು ಎಂಬುದಾಗಿ ಪ್ರೇರೇಪಣೆ ನೀಡಲು ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಸದಾಶಿವ ಪ್ರಭು ಬಿ ಅವರು ತಿಳಿಸಿದ್ದಾರೆ.


 rajesh pande