ಕೊನೆಯ ಹಂತದ ಲೋಕಸಭಾ ಚುನಾವಣೆ ಇಂದು ಅಧಿಸೂಚನೆ
ನವದೆಹಲಿ , 6 ಮೇ (ಹಿ.ಸ):ಆ್ಯಂಕರ್:ಲೋಕಸಭಾ ಚುನಾವಣೆಯ ಏಳನೇ ಹಾಗೂ ಕೊನೆಯ ಹಂತಕ್ಕಾಗಿ ಇಂದು ಅಧಿಸೂಚನೆ ಹೊರಬೀಳ
Campaigning has intensified for


ನವದೆಹಲಿ , 6 ಮೇ (ಹಿ.ಸ):ಆ್ಯಂಕರ್:ಲೋಕಸಭಾ ಚುನಾವಣೆಯ ಏಳನೇ ಹಾಗೂ ಕೊನೆಯ ಹಂತಕ್ಕಾಗಿ ಇಂದು ಅಧಿಸೂಚನೆ ಹೊರಬೀಳಲಿದೆ. ಈ ಹಂತದಲ್ಲಿ ಏಳು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿನ ೫೭ ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಉತ್ತರ ಪ್ರದೇಶ ಮತ್ತು ಪಂಜಾಬ್ ನಲ್ಲಿ ತಲಾ ೧೩ ಸ್ಥಾನಗಳು, ಪಶ್ಚಿಮ ಬಂಗಾಳದ ೯ ಸ್ಥಾನಗಳು, ಬಿಹಾರದಲ್ಲಿ ಎಂಟು ಸ್ಥಾನಗಳು, ಒಡಿಶಾದ ಆರು ಸ್ಥಾನಗಳು, ಹಿಮಾಚಲ ಪ್ರದೇಶದಲ್ಲಿ ನಾಲ್ಕು ಸ್ಥಾನಗಳು, ಜಾರ್ಖಂಡ್ ನಲ್ಲಿ ಮೂರು ಸ್ಥಾನಗಳು ಮತ್ತು ಚಂಡೀಗಢ ಕೇಂದ್ರಾಡಳಿತ ಪ್ರದೇಶಲ್ಲಿ ಒಂದು ಸ್ಥಾನಕ್ಕೆ ಈ ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ತಿಂಗಳ ೧೪ ರವರೆಗೆ ನಾಮಪತ್ರಗಳನ್ನು ಸಲ್ಲಿಸಬಹುದಾಗಿದ್ದು, ಜೂನ್ ೧ ರಂದು ಮತದಾನ ನಡೆಯಲಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande