5 ತಿಂಗಳಿಂದ ವೇತನ ನೀಡದ ಗ್ಯಾರಂಟಿ ಸರ್ಕಾರ : 108 ಆಂಬ್ಯುಲೆನ್ಸ್ ನೌಕರರ ಮುಷ್ಕರ
ಬೆಂಗಳೂರು, 6 ಮೇ (ಹಿ.ಸ):ಆ್ಯಂಕರ್: ಕಳೆದ ಐದು ತಿಂಗಳಿಂದ ವೇತನ ಸಿಗದ ಮತ್ತು ಸಂಬಳ ಕಡಿತದಂತಹ ಸಮಸ್ಯೆಗಳನ್ನು
5 ತಿಂಗಳಿಂದ ವೇತನ ನೀಡದ ಗ್ಯಾರಂಟಿ ಸರ್ಕಾರ : 108 ಆಂಬ್ಯುಲೆನ್ಸ್ ನೌಕರರ ಮುಷ್ಕರ


ಬೆಂಗಳೂರು, 6 ಮೇ (ಹಿ.ಸ):ಆ್ಯಂಕರ್:

ಕಳೆದ ಐದು ತಿಂಗಳಿಂದ ವೇತನ ಸಿಗದ ಮತ್ತು ಸಂಬಳ ಕಡಿತದಂತಹ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ 108 ಆಂಬ್ಯುಲೆನ್ಸ್ ನೌಕರರು ರಾಜ್ಯಾದ್ಯಂತ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಇಂದು ರಾತ್ರಿ 8 ಗಂಟೆಯಿಂದ ಮುಷ್ಕರ ಆರಂಭವಾಗಲಿದೆ. ಇದರಿಂದಾಗಿ ರಾಜ್ಯಾದ್ಯಂತ ಆಂಬ್ಯುಲೆನ್ಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಕರ್ನಾಟಕದಾದ್ಯಂತ ಸುಮಾರು 715 ಆಂಬ್ಯುಲೆನ್ಸ್ ಗಳು ಮತ್ತು ಸರಿಸುಮಾರು 3,500 ಉದ್ಯೋಗಿಗಳು 108 ಆಂಬ್ಯುಲೆನ್್ಸ ಅಸೋಸಿಯೇಷನ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿಯೇ ತುರ್ತು ಆರೋಗ್ಯ ಸೇವೆಗಳ ಮೇಲೆ ಮುಷ್ಕರ ಪರಿಣಾಮ ಬೀರುವ ಸಾಧ್ಯತೆ ಇದೆ.

ಆಂಬ್ಯುಲೆನ್್ಸ ಸೇವೆಯನ್ನು ನಿರ್ವಹಿಸುವ ಜಿವಿಕೆ ಸಂಸ್ಥೆ ಮತ್ತು ರಾಜ್ಯ ಸರ್ಕಾರದ ನಡುವಿನ ಅಸಮಾಧಾನದಿಂದ ಈ ಮುಷ್ಕರ ನಡೆಯುತ್ತಿದ್ದು, ಚಾಲಕರು ಮತ್ತು ವೈದ್ಯಕೀಯ ತಂತ್ರಜ್ಞರು ಸೇರಿದಂತೆ ನೌಕರರಿಗೆ ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಮೂರು ತಿಂಗಳ ಸಂಬಳವನ್ನು ಪಾವತಿಸಿಲ್ಲ ಎಂದು 108 ಆಂಬ್ಯುಲೆನ್ಸ್ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಹೆಚ್ಚುವರಿಯಾಗಿ ಜನವರಿಯಲ್ಲಿ ಸಂಬಳ ಕಡಿತವಾಗಿದೆ. 30,000 ರೂ. ಪಡೆಯುವವರು ಕೇವಲ 12,000 ರೂ.ಸಂಬಳ ಪಡೆದಿದ್ದಾರೆ. ಕಳೆದ ಐದು ತಿಂಗಳಿನಿಂದ ಎರಡು ತಿಂಗಳ ವೇತನಕ್ಕೆ ಸಮನಾದ ವೇತನವನ್ನು ಮಾತ್ರ ಪಡೆದಿದ್ದೇವೆ ಎಂದು ಸಂಘದ ನೌಕರರು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande