ರೇವಣ್ಣ ವಿರುದ್ಧ ದೂರು ಕೊಡಿಸಿದ್ದು ಕೆ.ಆರ್.ನಗರ ಶಾಸಕ : ಲಿಂಗೇಶ್ ಗಂಭೀರ ಆರೋಪ
ಹಾಸನ, 6 ಮೇ (ಹಿ.ಸ):ಆ್ಯಂಕರ್: ಆ್ಯಂಕರ್:ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ವಿರುದ್ಧ ಮಹಿಳೆ ಅಪಹರಣದ ದೂರನ್ನು
ರೇವಣ್ಣ ವಿರುದ್ಧ ದೂರು ಕೊಡಿಸಿದ್ದು ಕೆ.ಆರ್.ನಗರ ಶಾಸಕ : ಲಿಂಗೇಶ್ ಗಂಭೀರ ಆರೋಪ


ಹಾಸನ, 6 ಮೇ (ಹಿ.ಸ):ಆ್ಯಂಕರ್: ಆ್ಯಂಕರ್:ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ವಿರುದ್ಧ ಮಹಿಳೆ ಅಪಹರಣದ ದೂರನ್ನು ಕೆ.ಆರ್.ನಗರ ಶಾಸಕರು ಕೊಡಿಸಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಗಂಭೀರ ಆರೋಪ ಮಾಡಿದ್ದಾರೆ.

ಕೆ.ಆರ್.ನಗರದ ಮಹಿಳೆ ಅಪಹರಣಕ್ಕೆ ಸಂಬಂಧಿಸಿದಂತೆ ರೇವಣ್ಣ ಅವರ ವಿರುದ್ಧ ದೂರು ದಾಖಲಾಗುವುದರ ಹಿಂದೆ ಅಲ್ಲಿನ ಶಾಸಕರ ಪಾತ್ರವಿದೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನದಲ್ಲಿನ ಅಶ್ಲೀಲ ಪೆನ್ಡ್ರೈವ್ ವಿಚಾರದ ಬಗ್ಗೆ ಎಸ್ಐಟಿ ತನಿಖೆ ನಡೆಸುತ್ತಿರುವುದನ್ನು ನಾವು ಸ್ವಾಗತಿಸುತ್ತೇವೆ.

ಆದರೆ ಎಸ್ಐಟಿ ಪೆನ್ಡ್ರೈವ್ ಹಂಚಿದವರ ಬಗ್ಗೆ ತನಿಖೆ ಮಾಡದೇ ದಿಕ್ಕು ತಪ್ಪಿರುವಂತೆ ಕಾಣುತ್ತಿದೆ ಎಂದು ಆಪಾದಿಸಿದರು. ರೇವಣ್ಣ ಹಣಿಯಲು ಎಸ್ಐಟಿ ಅನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ ಅವರು, ರೇವಣ್ಣ ಅವರ ಮೇಲೆ ಮೊದಲು ಮಹಿಳೆಯೊಬ್ಬರಿಂದ ದೂರು ದಾಖಲಾಯಿತು. ಆ ಮಹಿಳೆಯಿಂದ ದೂರು ಕೊಡಿಸಿದವರು ಯಾರು? ಬಳಿಕ ಅಪಹರಣದ ಪ್ರಕರಣ ದಾಖಲಾಗಿದೆ ಎಂದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮನೆಯಲ್ಲಿ ರೇವಣ್ಣ ಅವರು ಅವಿತುಕೊಂಡಿರಲಿಲ್ಲ. ರೇವಣ್ಣ ಅವರಿಗೆ ತಂದೆ ತಾಯಿ ಎಂದರೆ ದೇವರಷ್ಟೇ ಗೌರವ. ಹಾಗಾಗಿ ದೇವೇಗೌಡರ ಆರೋಗ್ಯ ವಿಚಾರಿಸಲು ಹೋಗಿದ್ದರು. ಅವರನ್ನು ಬಂಧಿಸದೇ ವಿಚಾರಣೆ ಮಾಡಬಹುದಿತ್ತು, ತನಿಖೆಗೆ ಅವರು ಸಹಕಾರ ಕೊಡುತ್ತಿದ್ದರು, ರಾಜಕೀಯ ದುರುದ್ದೇಶದಿಂದ, ಹತಾಶ ಮನೋಭಾವದಿಂದ ಈ ರೀತಿ ಮಾಡಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಹಿಂದೂಸ್ತಾನ್ ಸಮಾಚಾರ್


 rajesh pande