ಇಂದು ದೇಶಾದ್ಯಂತ ನೀಟ್ ಪರೀಕ್ಷೆ
ನವದೆಹಲಿ, 5 ಮೇ (ಹಿ.ಸ):ಆ್ಯಂಕರ್:ಪದವಿಪೂರ್ವ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ
NEET Exam 2023 Conducted Across The


ನವದೆಹಲಿ, 5 ಮೇ (ಹಿ.ಸ):ಆ್ಯಂಕರ್:ಪದವಿಪೂರ್ವ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ - ನೀಟ್ ಇಂದು ದೇಶಾದ್ಯಂತ ನಡೆಯಲಿದೆ. ದೇಶದ ೫೫೭ ನಗರಗಳು ಮತ್ತು ವಿದೇಶದ ೧೪ ನಗರಗಳಲ್ಲಿ ೨೪ ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಈ ವರ್ಷ ಪರೀಕ್ಷೆಗೆ ಹಾಜರಾಗಲಿದ್ದಾರೆ. ಭಾರತೀಯ ಕಾಲಮಾನ ಮಧ್ಯಾಹ್ನ ೨ ರಿಂದ ಸಂಜೆ ೫.೨೦ ರವರೆಗೆ ಪರೀಕ್ಷೆ ನಡೆಯಲಿದೆ. ಫೋಟೋ, ಸಹಿ ಮತ್ತು ರೋಲ್ ನಂಬರ್ ಬಾರ್ ಕೋಡ್ ಇರುವ ಡೌನ್ಲೋಡ್ ಮಾಡಿದ ಪ್ರವೇಶ ಪತ್ರಗಳನ್ನು ಸಾದರಪಡಿಸುವಂತೆ ಎನ್ಟಿಎ ಅಭ್ಯರ್ಥಿಗಳಿಗೆ ನಿರ್ದೇಶನ ನೀಡಿದೆ. ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯೊಳಗೆ ಡಿಜಿಟಲ್ ಸಾಧನೆ ಕೈಗಡಿಯಾರ, ಬ್ಲೂಟೂತ್ ತರುವುದನ್ನು ನಿಷೇಧಿಸಿದೆ. ನಿಗದಿತ ಸಮಯಕ್ಕಿಂತ ೩೦ ನಿಮಿಷ ಮೊದಲು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ತಲುಪಬೇಕು.

ಹಿಂದೂಸ್ತಾನ್ ಸಮಾಚಾರ್


 rajesh pande