ಮತಗಟ್ಟೆ ಅಧಿಕಾರ, ಸಿಬ್ಬಂದಿ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ
ರಾಯಚೂರು,, 5 ಮೇ (ಹಿ.ಸ): ಆ್ಯಂಕರ್: ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ನಿಮಿತ್ಯ ಮೇ.7ರಂದು ಮತದಾನದ ಹಿನ
ಮತಗಟ್ಟೆ ಅಧಿಕಾರ, ಸಿಬ್ಬಂದಿ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ


ರಾಯಚೂರು,, 5 ಮೇ (ಹಿ.ಸ):

ಆ್ಯಂಕರ್: ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ನಿಮಿತ್ಯ ಮೇ.7ರಂದು ಮತದಾನದ ಹಿನ್ನಲೆ ಮೇ.6ರಂದು ಬೆಳಿಗ್ಗೆ 6.00 ರಿಂದ 7.00 ಗಂಟೆಯವರೆಗೆ ಮತಗಟ್ಟೆ ಅಧಿಕಾರಿ/ಸಿಬ್ಬಂದಿಗಳು ಮತಗಟ್ಟೆಗಳಿಗೆ ಪುಯಾಣಿಸಲು ಹಾಗೂ ಮೇ.7-5-2024 ರಂದು ಡಿ-ಮಸ್ಟರಿಂಗ್ ನಂತರ ಸಿಬ್ಬಂದಿಯವರನ್ನು ವಾಪಸ್ಸು ಕರೆತರಲು, ಆಯಾ ತಾಲೂಕುಗಳಿಂದ ಬಸ್ಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ತಿಳಿಸಿದ್ದಾರೆ.

53-ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ-07 ಬಸ್ಗಳನ್ನು ಮತ್ತು 54-ರಾಯಚೂರು ನಗರ ವಿಧಾನಸಭಾ ಕ್ಷೇತ್ರದಿಂದ-16 ಬಸ್ಗಳನ್ನು ಮಹಾತ್ಮಾಗಾಂಧಿ ಸ್ಟೇಡಿಯಮ್ ರಾಯಚೂರುನಿಂದ, 55-ಮಾನವಿ ವಿಧಾನಸಭಾ ಕ್ಷೇತ್ರದಿಂದ-12 ಬಸ್ಗಳನ್ನು ಟಿ.ಎ.ಪಿ.ಎಂ.ಸಿ. ಆವರಣ ಮಾನವಿನಿಂದ, 56-ದೇವದುರ್ಗ ವಿಧಾನಸಭಾ ಕ್ಷೇತ್ರದಿಂದ-12 ಬಸ್ಗಳನ್ನು ಎ.ಪಿ.ಎಂ.ಸಿ., ಆವರಣ ದೇವದುರ್ಗನಿಂದ, 57-ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಿಂದ-16 ಬಸ್ಗಳನ್ನು ಬಸವೇಶ್ವರ ಕಾಲೇಜು, ಲಿಂಗಸೂಗೂರುನಿಂದ, 58-ಸಿಂಧನೂರು ವಿಧಾನಸಭಾ ಕ್ಷೇತ್ರದಿಂದ-18 ಬಸ್ ಗಳನ್ನು ತಹಸೀಲ್ದಾರರ ಕಛೇರಿ ಆವರಣ, ಸಿಂಧನೂರುನಿಂದ ಹಾಗೂ 59-ಮಸ್ಕಿ ವಿಧಾನಸಭಾ ಕ್ಷೇತ್ರದಿಂದ-10 ಬಸ್ಗಳನ್ನು ಶ್ರೀ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜು, ಮಸ್ಕಿಯಿಂದ ಒಟ್ಟು 91 ಬಸ್ಗಳನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಮಸ್ಟರಿಂಗ್ ಕೇಂದ್ರಗಳಿಗೆ ತಲುಪಲು ಬಸ್ಗಳ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ ಎಂದವರು ತಿಳಿಸಿದ್ದಾರೆ.


 rajesh pande