ಮೇ 7ರಂದು ಮತದಾನ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ಎಂ.ಎಸ್.ದಿವಾಕರ
ಹೊಸಪೇಟೆ, 05 ಮೇ (ಹಿ.ಸ): ಆ್ಯಂಕರ್ : ಮೇ 7ರಂದು ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನಕ್ಕೆ ಜಿಲ್ಲಾಡಳಿತ
ಮೇ 7ರಂದು ಮತದಾನ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ಎಂ.ಎಸ್.ದಿವಾಕರ


ಹೊಸಪೇಟೆ, 05 ಮೇ (ಹಿ.ಸ):

ಆ್ಯಂಕರ್ : ಮೇ 7ರಂದು ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನಕ್ಕೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ತಿಳಿಸಿದ್ದಾರೆ.

9 ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದಂತೆ ಹಡಗಲಿ ಕ್ಷೇತ್ರದಲ್ಲಿ 218, ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ 254, ವಿಜಯನಗರ ಕ್ಷೇತ್ರದಲ್ಲಿ 259, ಕೂಡ್ಲಿಗಿ ಕ್ಷೇತ್ರದಲ್ಲಿ 250 ಮತ್ತು 13 ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹರಪನಹಳ್ಳಿ ಕ್ಷೇತ್ರದಲ್ಲಿ 253 ಸೇರಿ ಒಟ್ಟು 1234 ಮತಗಟ್ಟೆಗಳಲ್ಲಿ ಮೇ 7ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ.

9 ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 88 ಹಡಗಲಿ ಕ್ಷೇತ್ರದಲ್ಲಿ ಪುರುಷರು 99,144 ಹಾಗೂ ಮಹಿಳೆಯರು 97,701 ಹಾಗೂ ಇತರೆ 13 ಸೇರಿ ಒಟ್ಟು 1,96,858 ಮತದಾರರು ಇದ್ದಾರೆ. ಅದೇ ರೀತಿ 89 ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಪುರುಷರು 1,17,929 ಹಾಗೂ ಮಹಿಳೆಯರು 1,19,860 ಹಾಗೂ ಇತರೆ 22 ಸೇರಿ ಒಟ್ಟು 2,37,811 ಮತದಾರರು ಇದ್ದಾರೆ.

ಅದೇ ರೀತಿ 90 ವಿಜಯನಗರ ಕ್ಷೇತ್ರದಲ್ಲಿ ಪುರುಷರು 1,26,090 ಹಾಗೂ ಮಹಿಳೆಯರು 1,34,030 ಹಾಗೂ ಇತರೆ 77 ಸೇರಿ ಒಟ್ಟು 2,60,197 ಮತದಾರರು ಇದ್ದಾರೆ. ಅದೇ ರೀತಿ 96 ಕೂಡ್ಲಿಗಿ ಕ್ಷೇತ್ರದಲ್ಲಿ ಪುರುಷರು 1,06,034 ಹಾಗೂ ಮಹಿಳೆಯರು 1,03,951 ಹಾಗೂ ಇತರೆ 11 ಸೇರಿ ಒಟ್ಟು 2,09,996 ಮತದಾರರು ಇದ್ದಾರೆ. ಅದೇ ರೀತಿ 13 ದಾವಣಗೆರೆ ಲೋಕಸಭಾ ವ್ಯಾಪ್ತಿಯ 104 ಹರಪನಹಳ್ಳಿ ಕ್ಷೇತ್ರದಲ್ಲಿ ಪುರುಷರು 1,12,969 ಹಾಗೂ ಮಹಿಳೆಯರು 1,10,985 ಹಾಗೂ ಇತರೆ 19 ಸೇರಿ ಒಟ್ಟು 2,23,973 ಮತದಾರರು ಸೇರಿ ಒಟ್ಟು 11,28,835 ಮತದಾರರು ಮೇ 7ರಂದು ತಮ್ಮ ಮತ ಹಕ್ಕನ್ನು ಚಲಾಯಿಸಲು ಅರ್ಹರಿದ್ದಾರೆ.

ಹಡಗಲಿ, ಹೆಚ್ಬಿಹಳ್ಳಿ, ವಿಜಯನಗರ ಹಾಗೂ ಕೂಡ್ಲಿಗಿ ಮತ್ತು ಹರಪನಹಳ್ಳಿ ಕ್ಷೇತ್ರದಲ್ಲಿ 18,256 ಪುರುಷರು ಮತ್ತು 15,352 ಮಹಿಳೆಯರು ಇತರೆ 2 ಸೇರಿ ಒಟ್ಟು 33,610 ಯುವ ಮತದಾರರು ಮತದಾರ ನೋಂದಣಿ ಮಾಡಿಸಿರುತ್ತಾರೆ. ಅದೇ ರೀತಿ 8,763 ಪುರುಷರು ಹಾಗೂ 7,292 ಮಹಿಳೆಯರು ಸೇರಿ ಒಟ್ಟು 16,060 ವಿಕಲಚೇತನ ಮತದಾರರು ಮತದಾರ ನೋಂದಣಿ ಮಾಡಿಸಿರುತ್ತಾರೆ.

ಮೇ 7ರಂದು ಸುಗಮ ರೀತಿಯಲ್ಲಿ ಮತದಾನ ನಡೆಯಲು ಎಲ್ಲಾ ಅಗತ್ಯ ಕ್ರಮ ವಹಿಸಲಾಗಿದೆ. ಹಡಗಲಿ, ಹೆಚ್ಬಿಹಳ್ಳಿ, ವಿಜಯನಗರ ಹಾಗೂ ಕೂಡ್ಲಿಗಿ ಮತ್ತು ಹರಪನಹಳ್ಳಿ ಕ್ಷೇತ್ರ ಸೇರಿದಂತೆ ಒಟ್ಟು 1234 ಮತಗಟ್ಟೆಗಳಲ್ಲಿ ಒಟ್ಟು 1234 ಬಿಎಲ್ಓಗಳನ್ನು ನೇಮಕ ಮಾಡಲಾಗಿದೆ. 111 ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 20 ಎಫ್ಎಸ್ಟಿ, 18 ಎಸ್ಎಸ್ಟಿ, 23 ವಿಎಸ್ಟಿ ಹಾಗೂ 5 ವಿವಿಟಿ ಮತ್ತು 10 ಎಂಸಿಸಿ ತಂಡಗಳಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ.

ಹಿರಿಯ ಮತದಾರರ ಮತದಾನ ಪ್ರಕ್ರಿಯೆ ಅಚ್ಚುಕಟ್ಟಾಗಿ ನಡೆದಿದೆ. 9-ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಹಡಗಲಿ ಕ್ಷೇತ್ರದಲ್ಲಿ ಒಟ್ಟು 177 ರಲ್ಲಿ 172 ಜನರು, ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಒಟ್ಟು 169 ರಲ್ಲಿ 164 ಜನರು, ವಿಜಯನಗರ ಕ್ಷೇತ್ರದಲ್ಲಿ 108 ರಲ್ಲಿ 100 ಜನರು ಮತ್ತು ಕೂಡ್ಲಿಗಿ ಕ್ಷೇತ್ರದಲ್ಲಿ 104ರಲ್ಲಿ 98 ಜನರು ಮತದಾನ ಮಾಡಿರುತ್ತಾರೆ. 13-ದಾವಣಗೇರೆ ಲೋಕಸಭಾ ಕ್ಷೇತ್ರದ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 163 ರಲ್ಲಿ 152 ಜನರು ಮತದಾನ ಮಾಡಿದ್ದು ಶೇ 95.15 ರಷ್ಟು ಹಿರಿಯ ಮತದಾರರು ಮನೆಯಿಂದಲೇ ಮತ ಚಲಾವಣೆ ಮಾಡಿರುತ್ತಾರೆ.

ಅದೇ ರೀತಿ 9-ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಡಗಲಿ ಕ್ಷೇತ್ರದಲ್ಲಿ 153ರಲ್ಲಿ 151, ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ 94ರಲ್ಲಿ 93, ವಿಜಯನಗರ ಕ್ಷೇತ್ರದಲ್ಲಿ 63ರಲ್ಲಿ 60, ಕೂಡ್ಲಿಗಿ ಕ್ಷೇತ್ರದಲ್ಲಿ 102ರಲ್ಲಿ 102 ಜನರು. ಅದೇ ರೀತಿ 13-ದಾವಣಗೆರೆ ಲೋಕಸಭಾ ಕ್ಷೇತ್ರದ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 75 ರಲ್ಲಿ 73 ಮತ ಚಲಾವಣೆಯಾಗಿದ್ದು ಜಿಲ್ಲೆಯಲ್ಲಿ ಶೇ 98.36ರಷ್ಟು ವಿಕಲಚೇತನ ಮತದಾರರು ಮನೆಯಿಂದಲೇ ಮತ ಚಲಾವಣೆ ಮಾಡಿರುತ್ತಾರೆ.

ಹಡಗಲಿ ಕ್ಷೇತ್ರದಲ್ಲಿ 38, ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ 47, ವಿಜಯನಗರ ಕ್ಷೇತ್ರದಲ್ಲಿ 40 ಹಾಗೂ ಕೂಡ್ಲಿಗಿ ಕ್ಷೇತ್ರದಲ್ಲಿ 49 ಸೇರಿ 178 ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮತ್ತು ಹರಪನಹಳ್ಳಿ ಕ್ಷೇತ್ರದಲ್ಲಿ 70 ಸೇರಿ ಒಟ್ಟು 244 ಮತಗಟ್ಟೆ ಕೇಂದ್ರಗಳಲ್ಲಿ ವೆಬ್ಕ್ಯಾಸ್ಟಿಂಗ್ ಮತ್ತು 267 ಮೈಕ್ರೋ ವೀಕ್ಷಕರನ್ನು ನೇಮಕ ಮಾಡಲಾಗಿದೆ.

ವಿಜಯನಗರ ಜಿಲ್ಲೆಯ 9-ಬಳ್ಳಾರಿ ಲೊಕಸಭಾ ಕ್ಷೇತ್ರ ವ್ಯಾಪ್ತಿಯ ಹಡಗಲಿ ಕ್ಷೇತ್ರದಲ್ಲಿ 1044, ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ 1200, ವಿಜಯನಗರ ಕ್ಷೇತ್ರದಲ್ಲಿ 1216, ಕೂಡ್ಲಿಗಿ ಕ್ಷೇತ್ರದಲ್ಲಿ 1200 ಮತ್ತು ಹರಪನಹಳ್ಳಿ ಕ್ಷೇತ್ರದಲ್ಲಿ 1212 ಸೇರಿ ಒಟ್ಟು 5872 ಸಿಬ್ಬಂದಿಯನ್ನು ಚುನಾವಣೆ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.


 rajesh pande