ಅಯೋಧ್ಯೆಗೆ ಬರುವ ಪ್ರಧಾನಿಗೆ ಹೂವಿನ ಸ್ವಾಗತ: ಅಭಿಮಾನ ತೋರಿದ ಇಕ್ಬಾಲ್ ಅನ್ಸಾರಿ
ಅಯೋಧ್ಯೆ , 5 ಮೇ (ಹಿ.ಸ):ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಇಂದು ಭಾನುವಾರ ಉತ್ತರಪ್ರದೇಶದ ಅಯೋಧ್ಯೆ ನಗರದಲ್ಲಿರುವ ರಾಮ
 Ayodhya Set To Welcome Narendra Modi Wit


ಅಯೋಧ್ಯೆ , 5 ಮೇ (ಹಿ.ಸ):ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಇಂದು ಭಾನುವಾರ ಉತ್ತರಪ್ರದೇಶದ ಅಯೋಧ್ಯೆ ನಗರದಲ್ಲಿರುವ ರಾಮ ಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ. ಲೋಕಸಭೆ ಚುನಾವಣೆ ನಡುವೆ ಅವರು ಮೊದಲ ಬಾರಿಗೆ ಅಯೋಧ್ಯೆಗೆ ಹೋಗುತ್ತಿರುವುದು. ಪ್ರಧಾನಿ ಭೇಟಿಗಾಗಿ ಅಯೋಧ್ಯೆಯಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ರಾಮಮಂದಿರವನ್ನು ಸುಂದರವಾಗಿ ಅಲಂಕರಿಸಲಾಗಿದೆ. ಅವರ ಭೇಟಿಯ ಬಗ್ಗೆ ಜನರಲ್ಲಿ ಅಪಾರ ಉತ್ಸಾಹವಿದೆ. ಸಂಜೆ 7 ಗಂಟೆ ಸುಮಾರಿಗೆ ರಾಮಮಂದಿರದಲ್ಲಿರುವ ರಾಮಲಲ್ಲಾದ ದರ್ಶನ ಮಾಡಲಿದ್ದಾರೆ. ಇದಾದ ಬಳಿಕ ನರೇಂದ್ರ ಮೋದಿ ಅವರಿಂದ ರೋಡ್ ಶೋ ನಡೆಯಲಿದೆ.

ಇದೇ ವೇಳೆ, ಬಾಬ್ರಿ ಮಸೀದಿ ರಾಮ ಜನ್ಮಭೂಮಿ ವಿವಾದದ ಕೋರ್ಟ್ ಕೇಸ್ನಲ್ಲಿ ಮಸೀದಿ ಪರವಾಗಿ ಕಕ್ಷಿದಾರರಾಗಿದ್ದ ಇಕ್ಬಾಲ್ ಅನ್ಸಾರಿ ಪ್ರಧಾನಿ ಬಗ್ಗೆ ಶ್ಲಾಘನೆಯ ಮಾತುಗಳನ್ನಾಡಿದ್ದಾರೆ. ಅಯೋಧ್ಯೆಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ತಮಗೆ ಖುಷಿ ಕೊಟ್ಟಿದೆ ಎಂದ ಅವರು, ಕಳೆದ 10 ವರ್ಷದ ಮೋದಿ ಸರ್ಕಾರದ ಸಾಧನೆಯನ್ನು ಪ್ರಶಂಸಿಸಿದ್ದು, ಮತ್ತೊಮ್ಮೆ ಅವರೇ ಪ್ರಧಾನಿ ಆಗಲಿ ಎಂದು ಹಾರೈಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಯೋಧ್ಯೆ ಮಂಗಳಕರವಾಗಿದೆ. ಅವರ ರ್ಯಾಲಿ ಯಶಸ್ವಿಯಾಗಲಿ ಎಂದು ಹೇಳಿರುವ ಇಕ್ಬಾಲ್ ಅನ್ಸಾರಿ, ಅಯೋಧ್ಯೆಗೆ ಬರುವ ಪ್ರಧಾನಿ ಅವರನ್ನು ಹೂವಿನ ಅರ್ಚೆ ಮೂಲಕ ಸ್ವಾತಿಸಲು ಸಿದ್ಧರಿರುವುದಾಗಿ ಹೇಳಿಕೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande