ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಕಾಂಗ್ರೆಸ್ಗೆ ಕೈಕೊಟ್ಟ ಅಭ್ಯರ್ಥಿ
ಭುವನೇಶ್ವರ, 4 ಮೇ (ಹಿ.ಸ):ಆ್ಯಂಕರ್ : ಪುರಿ ಲೋಕಸಭಾ ಕ್ಷೇತ್ರಕ್ಕೆ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾ
aced-after-puri-candidate-drops-out-cit


ಭುವನೇಶ್ವರ, 4 ಮೇ (ಹಿ.ಸ):ಆ್ಯಂಕರ್ : ಪುರಿ ಲೋಕಸಭಾ ಕ್ಷೇತ್ರಕ್ಕೆ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಕಾಂಗ್ರೆಸ್ ಅಭ್ಯರ್ಥಿ ಪಕ್ಷಕ್ಕೆ ಕೈಕೊಟ್ಟಿದ್ದಾರೆ.

ಚುನಾವಣೆಗೆ ಖರ್ಚು ಮಾಡಲು ಹಣದ ಕೊರತೆ ಇದೆ. ಹೀಗಾಗಿ ನಾನು ಕ್ಷೇತ್ರದ ಟಿಕೆಟ್ ಅನ್ನು ಹಿಂದಿರುಗಿಸುತ್ತಿದ್ದೇನೆ ಎಂದು ಪುರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸುಚರಿತ ಮೊಹಂತಿ ತಿಳಿಸಿದ್ದಾರೆ.

ಪಕ್ಷದ ನಿಧಿಯಿಲ್ಲದೆ ಪುರಿಯಲ್ಲಿ ಪ್ರಚಾರ ನಡೆಸಲು ಸಾಧ್ಯವಿಲ್ಲ ಎಂದು ನಾನು ವಿಷಾದಿಸುತ್ತೇನೆ. ಹಾಗಾಗಿ, ಪುರಿ ಸಂಸದೀಯ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅನ್ನು ನಾನು ಈ ಮೂಲಕ ಹಿಂದಿರುಗಿಸುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ.

ಒಡಿಶಾ ಕಾಂಗ್ರೆಸ್ ಉಸ್ತುವಾರಿ ಅಜೋಯ್ ಕುಮಾರ್ ತನ್ನ ಸ್ವಂತ ಹಣವನ್ನು ಬಳಸಿ ಹೋರಾಡುವಂತೆ ಹೇಳಿದರು. ಪುರಿಯಲ್ಲಿ ಪ್ರಚಾರಕ್ಕೆ ನನ್ನ ಬಳಿಯಿದ್ದೆಲ್ಲವನ್ನೂ ನೀಡಿದ್ದೇನೆ. ಪ್ರಗತಿಪರ ರಾಜಕೀಯಕ್ಕಾಗಿ ನನ್ನ ಅಭಿಯಾನವನ್ನು ಬೆಂಬಲಿಸಲು ಸಾರ್ವಜನಿಕರಿಂದ ದೇಣಿಗೆ ಬಯಸಿದೆ. ಇದುವರೆಗೆ ಅದು ಕೂಡ ಹೆಚ್ಚು ಯಶಸ್ವಿಯಾಗಲಿಲ್ಲ. ಯೋಜಿತ ಪ್ರಚಾರದ ವೆಚ್ಚವನ್ನು ಕನಿಷ್ಠಕ್ಕೆ ಕಡಿತಗೊಳಿಸಲು ನಾನು ಪ್ರಯತ್ನಿಸಿದೆ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande