ಮೇ 5ಕ್ಕೆ ನೀಟ್ ಪರೀಕ್ಷೆ : 23 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೊಂದಣಿ
ನವದೆಹಲಿ, 2 ಮೇ (ಹಿ.ಸ):ಆ್ಯಂಕರ್:ವೈದ್ಯಕೀಯ ಕೋರ್ಸ್ಗಳ ಸೀಟಿಗಾಗಿ ನಡೆಯಲಿರುವ ನೀಟ್ ಪರೀಕ್ಷೆಗೆ ಈಗಾಗಲೇ ಎಲ್ಲ
neet-ug-2024-admit-card-released/


ನವದೆಹಲಿ, 2 ಮೇ (ಹಿ.ಸ):ಆ್ಯಂಕರ್:ವೈದ್ಯಕೀಯ ಕೋರ್ಸ್ಗಳ ಸೀಟಿಗಾಗಿ ನಡೆಯಲಿರುವ ನೀಟ್ ಪರೀಕ್ಷೆಗೆ ಈಗಾಗಲೇ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಪಡೆಯಲು ಇಂದು ಅಂತರ್ಜಾಲದಲ್ಲಿ ಅವಕಾಶ ನೀಡಿದ್ದು, ಮೇ 5ರಂದು ಮಧ್ಯಾಹ್ನ 2 ಗಂಟೆಯಿಂದ 5 ಗಂಟೆವರೆಗೆ ಒಂದೇ ಹಂತದಲ್ಲಿ ದೇಶಾದ್ಯಂತ ಪರೀಕ್ಷೆ ನಡೆಯಲಿದೆ.

ಪ್ರಸ್ತುತ ಅಂದಾಜಿನ ಪ್ರಕಾರ, ಸುಮಾರು 23,81,833 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ಭಾರತದಾದ್ಯಂತ 571 ನಗರಗಳಲ್ಲಿ ಮತ್ತು ದೇಶದ ಹೊರಗಿನ 14 ನಗರಗಳಲ್ಲಿ ಪರೀಕ್ಷೆ ನಡೆಯಲಿದೆ. ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬಂಗಾಳಿ, ಒಡಿಯಾ, ಕನ್ನಡ, ಪಂಜಾಬಿ, ಉರ್ದು, ಮಲಯಾಳಂ, ತೆಲುಗು, ತಮಿಳು ಭಾಷೆ ಸೇರಿದಂತೆ ವಿವಿಧ ಭಾಷೆಗಳಲ್ಲಿ ಪ್ರಶ್ನೆಪತ್ರಿಕೆ ಇರಲಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande