ಕೋವಿಡ್ ಲಸಿಕೆ ಪ್ರಮಾಣಪತ್ರದಿಂದ ಮೋದಿ ಫೋಟೊ ಕೈಬಿಟ್ಟ ಆರೋಗ್ಯ ಇಲಾಖೆ
ನವದೆಹಲಿ, 2 ಮೇ (ಹಿ.ಸ):ಆ್ಯಂಕರ್:ಕೋವಿಡ್ ಲಸಿಕೆ ಪ್ರಮಾಣ ಪತ್ರದಿಂದ ಪ್ರಧಾನಿ ನರೇಂದ್ರ ಮೋದಿ ಯವರ ಫೋಟೊವನ್ನು
41


ನವದೆಹಲಿ, 2 ಮೇ (ಹಿ.ಸ):ಆ್ಯಂಕರ್:ಕೋವಿಡ್ ಲಸಿಕೆ ಪ್ರಮಾಣ ಪತ್ರದಿಂದ ಪ್ರಧಾನಿ ನರೇಂದ್ರ ಮೋದಿ ಯವರ ಫೋಟೊವನ್ನು ತೆಗೆದುಹಾಕಲಾಗಿದ್ದು, ಹಲವು ಅನುಮಾನಗಳು ಮೂಡಿವೆ. ಈ ಹಿಂದೆ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿಯವರ ಫೋಟೊವನ್ನು ಹಾಕಲಾಗಿತ್ತು. ಭಾರತವು ಕೊರೊನಾ ಸೋಂಕನ್ನು ಹಿಮ್ಮೆಟ್ಟಿಸುತ್ತದೆ ಎಂದು ಬರೆಯಲಾಗಿತ್ತು. ಆದರೆ ಈಗ ಪ್ರಧಾನಿ ಮೋದಿ ಹೆಸರನ್ನು ಕೈಬಿಡಲಾಗಿದೆ .

ಇದೀಗ ಕೊರೊನಾ ಲಸಿಕೆ ತಯಾರಕ ಬ್ರಿಟಿಷ್ ಕಂಪನಿ ಅಸ್ಟ್ರಾಜೆನೆಕಾ ವಿರುದ್ಧ ಕೆಲವು ಅನುಮಾಣಗಳು ಹುಟ್ಟಿಕೊಂಡಿವೆ, ಈ ಲಸಿಕೆಯು ರಕ್ತಹೆಪ್ಪುಗಟ್ಟುವಿಕೆಯಂತಹ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಹೇಳಲಾಗಿದ್ದು, ಕೆಲವೊಂದು ವಿಚಾರಗಳನ್ನು ಸಂಸ್ಥೆ ಕೂಡ ಒಪ್ಪಿಕೊಂಡಿದೆ. ಆದರೆ ಲಕ್ಷದಲ್ಲಿ ಒಂದು ಅಥವಾ ಎರಡು ಮಂದಿಗೆ ಮಾತ್ರ ಈ ಬಗೆಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಸಂಸ್ಥೆ ಹೇಳಿದೆ.

ಅಸ್ಟ್ರಾಜೆನೆಕಾ ಸಂಸ್ಥೆ ವಿರುದ್ಧ ಹಲವು ಮಂದಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿನ ಕೆಲವು ಬಳಕೆದಾರರು ಗಮನಾರ್ಹ ಬದಲಾವಣೆಯನ್ನು ಗಮನಿಸಿದ್ದಾರೆ: ಭಾರತದಲ್ಲಿ ನೀಡಲಾದ ಕೋವಿಡ್ -19 ಲಸಿಕೆ ಪ್ರಮಾಣಪತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಇಲ್ಲದಿರುವುದು ತಿಳಿದುಬಂದಿದೆ. ಜತೆಗೆ ಫೋಟೊ ಬದಲಿಗೆ ಕ್ಯೂ ಆರ್ ಕೋಡ್ ಮಾತ್ರವೇ ಇದೆ.

ಹಿಂದೂಸ್ತಾನ್ ಸಮಾಚಾರ್


 rajesh pande