ಇಸ್ಕಾನ್ ದೇಗುಲದಲ್ಲಿ ವಿಜೃಂಭಣೆಯ ಬ್ರಹ್ಮೋತ್ಸವ
ಬೆಂಗಳೂರು, 2 ಮೇ (ಹಿ.ಸ):ಆ್ಯಂಕರ್: ಬೆಂಗಳೂರಿನ ಇಸ್ಕಾನ್ ದೇಗುಲದಲ್ಲಿ ನಿನ್ನೆ ರಾತ್ರಿ ಬ್ರಹ್ಮರಥೋತ್ಸವ ರಂಗು
ಇಸ್ಕಾನ್ ದೇಗುಲದಲ್ಲಿ


ಬೆಂಗಳೂರು, 2 ಮೇ (ಹಿ.ಸ):ಆ್ಯಂಕರ್: ಬೆಂಗಳೂರಿನ ಇಸ್ಕಾನ್ ದೇಗುಲದಲ್ಲಿ ನಿನ್ನೆ ರಾತ್ರಿ ಬ್ರಹ್ಮರಥೋತ್ಸವ ರಂಗು ಕಳೆಗಟ್ಟಿತ್ತು. ಬ್ರಹ್ಮರಥದಲ್ಲಿ ವಿರಾಜಾಮಾನರಾಗಿದ್ದ ರಾಧ-ಕೃಷ್ಣ, ಬಲರಾಮ ಉತ್ಸವ ಮೂರ್ತಿ ಕಂಡು ಸಹಾಸ್ರರು ಭಕ್ತರು ಪುನೀತರಾದ್ರು.

ಎಲ್ಲೆಲ್ಲೂ ಹರೇ ಕೃಷ್ಣ.. ಹರೇ ರಾಮ ನಾಮ ಸ್ಮರಣೆ ಮೊಳಗಿತು. ಭಗವಂತನನ್ನ ಸ್ಮರಿಸುತ್ತ ಭಕ್ತರ ನೃತ್ಯ ಮಾಡಿದ್ರೆ ಮತ್ತೊಂದು ಕಡೆ ಬ್ರಹ್ಮರಥದಲ್ಲಿ ರಾಧ-ಕೃಷ್ಣ, ಬಲರಾಮ ವಿಗ್ರಹ ವಿರಾಜಾಮಾನರಾಗಿದ್ದವು. ರಥ ಸಾಗುವ ದಾರಿಯುದ್ದಕ್ಕೂ ಚಂಡೆಯ ನಿನಾದವು ಇತ್ತು. ಸಂಭ್ರಮ ಸಡಗರದಲ್ಲಿ ಮಿಂದೇಳುತ್ತಿರೋ ಭಕ್ತ ವೃಂದ. ಬೆಂಗಳೂರಿನ ಇಸ್ಕಾನ್ ದೇಗುಲದ ಹರೆಕೃಷ್ಣ ಗಿರಿಯಲ್ಲಿ ಬ್ರಹ್ಮರಥೋತ್ಸವವು ಸಂಭ್ರಮದಿಂದ ನಡೆಯಿತು.

ಹಿಂದೂಸ್ತಾನ್ ಸಮಾಚಾರ್


 rajesh pande