ಈ ಲೋಕಸಭಾ ಚುನಾವಣೆ ಸಂವಿಧಾನ ರಕ್ಷಣೆಗಾಗಿ ನಡೆಯುತ್ತಿದೆ - ರಾಹುಲ್ ಗಾಂಧಿ
ಶಿವಮೊಗ್ಗ, 2 ಮೇ (ಹಿ.ಸ):ಆ್ಯಂಕರ್: ಈ ಲೋಕಸಭಾ ಚುನಾವಣೆ ಸಂವಿಧಾನ ರಕ್ಷಣೆಗಾಗಿ ನಡೆಯುತ್ತಿದೆ. ಈ ಬಾರಿ ಬಿಜೆಪ
ವಈ ಲೋಕಸಭಾ ಚುನಾವಣೆ ಸಂವಿಧಾನ ರಕ್ಷಣೆಗಾಗಿ ನಡೆಯುತ್ತಿದೆ


ಶಿವಮೊಗ್ಗ, 2 ಮೇ (ಹಿ.ಸ):ಆ್ಯಂಕರ್:

ಈ ಲೋಕಸಭಾ ಚುನಾವಣೆ ಸಂವಿಧಾನ ರಕ್ಷಣೆಗಾಗಿ ನಡೆಯುತ್ತಿದೆ. ಈ ಬಾರಿ ಬಿಜೆಪಿಗೆ ಅಧಿಕಾರ ಕೊಟ್ಟರೆ ಸಂವಿಧಾನ ಬದಲಾವಣೆ ತರಲಿದ್ದಾರೆ ಎಂದು ರಾಹುಲ್ ಪ್ರಧಾನಿ ಮೋದಿ ವಿರುದ್ಧ ಆರೋಪ ಮಾಡಿದ್ದಾರೆ.

ಅವರು ಇಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನಡೆದ ಬೃಹತ್ ಪ್ತಜಾಧ್ವನಿ ಜನ ಸಮಾವೇಶವದಲ್ಲಿ ಮಾತನಾಡಿ,

ಬಿಜೆಪಿ ಅದಾನಿ ಸೇರಿ ಕೆಲವೇ ಕೆಲ ಆಯ್ದ ಜನತೆಗೆ ದೇಶದ ಸಂಪತ್ತು ನೀಡುತ್ತಿದೆ. ಅವರು ಸಿರಿವಂತರಿಗೆ ಹಣ ಕೊಟ್ಟರೆ, ನಾವು ಬಡವರಿಗೆ ಹಣ ಕೊಡುತ್ತೇವೆ. ರಾಜ್ಯ ಸರ್ಕಾರ ಗ್ಯಾರಂಟಿಗಳ ಮೂಲಕ ದೇಶದ ಜನತೆಗೆ ದಾರಿ ತೋರಿಸಿದೆ. ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿಯೋಜನೆ, ಯುವನಿಧಿ, ಗೃಹಜ್ಯೋತಿ ಮೂಲಕ ರಾಜ್ಯದ ಜನತೆಗೆ ನೀಡುತ್ತಿದೆ. ಈವರೆಗೂ ಯಾವುದೇ ಸರ್ಕಾರ ಈ ಯೋಜನೆಗಳನ್ನು ನೀಡಿಲ್ಲ ಎಂದರು.

ದೇಶದ ಜನತೆಗೆ ಸಂವಿಧಾನ ರಕ್ಷಣೆಯಾಗಿದೆ. ಸಂವಿಧಾನ ಬರುವ ಮುಂಚೆ ದಲಿತ, ದುರ್ಬಲರಿಗೆ ಯಾವುದೇ ಅಧಿಕಾರ ಇದ್ದಿಲ್ಲ. ರಾಜ - ಮಹಾರಾಜರು ತಮಗೆ ಬೇಕಾದ ಅಧಿಕಾರ ಮಾಡುತ್ತಿದ್ದರು. ಆ ದಿನ ಜನಸಮಾನ್ಯರೊಂದಿಗೆ ಸೇರಿ ಕಾಂಗ್ರೆಸ್ ಹೋರಾಟ ನಡೆಸಿ ಸ್ವಾತಂತ್ರ್ಯ, ಸಂವಿಧಾನ ತಂದಿದೆ. ಆದರೆ, ಈಗ ಬಿಜೆಪಿಯವರು ಸಂವಿಧಾನ ತೆಗೆದುಹಾಕಲು ಆಲೋಚಿಸುತ್ತಿದ್ದಾರೆ. ದೇಶದಲ್ಲಿ ಸಂವಿಧಾನವನ್ನು ದುರ್ಬಲಗೊಳಿಸುವ ಶಕ್ತಿ ಇನ್ನೂ ಹುಟ್ಟಿಲ್ಲ. ಹೀಗಾಗಿ, ಕಾಂಗ್ರೆಸ್, ಇಂಡಿಯಾ ಒಕ್ಕೂಟ ಸಂವಿಧಾನ ಉಳಿಸುವ ಕೆಲಸ ಮಾಡುತ್ತಿದೆ ಎಂದರು.

ಹಿಂದೂಸ್ತಾನ್ ಸಮಾಚಾರ್


 rajesh pande