ಸಂದೇಶ್ ಮೇಲೆ ರೌಡಿ ಶೀಟ್ ತೆರೆದ ಪೊಲೀಸರು
ಕೋಲಾರ, ೨೯ ಏಪ್ರಿಲ್(ಹಿ.ಸ) : ಆ್ಯಂಕರ್ : ಅಂಬೇಡ್ಕರ್ ರವರ ಆಶಯವಾದ ಸಂವಿಧಾನ ಶಕ್ತಿ ತೋರಲು ದಿ ರೂಲರ್ಸ್ ಚಿತ್
ಸಂದೇಶ್


ಕೋಲಾರ, ೨೯ ಏಪ್ರಿಲ್(ಹಿ.ಸ) :

ಆ್ಯಂಕರ್ : ಅಂಬೇಡ್ಕರ್ ರವರ ಆಶಯವಾದ ಸಂವಿಧಾನ ಶಕ್ತಿ ತೋರಲು ದಿ ರೂಲರ್ಸ್ ಚಿತ್ರ ನಿರ್ಮಾಣ ಮಾಡಿದ ಹಿನ್ನಲೆಯಲ್ಲಿ ನನ್ನ ಮೇಲೆ ರೌಡಿ ಶೀಟರ್ ಪಟ್ಟ ಕಟ್ಟಿ ನನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆಂದು ಸಮಾಜ ಸೇವಕ ಹಾಗೂ ಚಲನಚಿತ್ರ ನಟ ಸಂದೇಶ್ ತಮ್ಮ ನೋವನ್ನು ತೋಡಿಕೊಂಡರು.

ನನಗೆ ಯಾವುದೇ ಮಾಹಿತಿ ನೀಡದೆ ಪೋಲಿಸ್ ಇಲಾಖೆ ಯಾರದೋ ಒತ್ತಡಕ್ಕೆ ಮಣಿದು ಯಾವುದೇ ರೀತಿಯ ಕಾನೂನು ತಪ್ಪು ಮಾಡದ ನನ್ನನ್ನು ರೌಡಿ ಶೀಟರ್ ಮಾಡಿರುವ ಉದ್ದೇಶ ಏನು ಎಂದ ಅವರು ನಾನು ಮೌನಕ್ಕೆ ಶರಣಾಗಿದ್ದು, ನನ್ನ ಪರ ನನ್ನ ಜನರೇ ಧ್ವನಿಯಾಗಿ ನ್ಯಾಯ ಪಡೆಯಲಿದ್ದಾರೆಂಬ ಭರವಸೆ ಇದೆಯೆಂದರು.

ನನ್ನ ಮೇಲೆ ಹೋರಾಟಗಳ ಕೇಸುಗಳು ಇದ್ದು, ಕೆಲವು ಪ್ರಕರಣಗಳು ನ್ಯಾಯಲಯದಲ್ಲಿ ಖುಲಾಸೆ ಆಗಿವೆ. ಕೇವಲ ಅಂಬೇಡ್ಕರ್ ಬಗ್ಗೆ ಹಾಗೂ ಮಹಿಳೆಯ ಹಕ್ಕುಗಳ ಬಗ್ಗೆ ಚಲನಚಿತ್ರ ಮಾಡಿದನ್ನು ಸಹಿಸದ ಮನುವಾದಿಗಳು ನನ್ನ ಏಳಿಗೆ ಸಹಿಸದೆ ಕಾನೂನನ್ನು ದುರುಪಯೋಗ ಪಡಿಸಿಕೊಂಡು ರೌಡಿ ಶೀಟರ್ ಮಾಡಿರುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದ್ದಾರೆ.

ನಮ್ಮ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಸಿಕ್ಕ ಜನ ಬೆಂಬಲ ಸಹಿಸದ ಕೆಲವು ಉದ್ಯಮಿಗಳು ವಿನಾಕಾರಣ ನನ್ನನ್ನು ರೌಡಿ ಶೀಟರ್ ಆಗಿ ಮಾಡಲು ಯಶಸ್ಸು ಕಂಡಿದ್ದು, ಇದರ ಬಗ್ಗೆ ನನ್ನ ಹಿತೈಷಿಗಳು ಕಾನೂನು ಹೋರಾಟ ಮಾಡಲು ಮುಂದಾಗಿದ್ದು ನನಗೆ ನ್ಯಾಯ ಸಿಗುವ ವಿಶ್ವಾಸ ಇದೆಯೆಂದು ತಿಳಿಸಿದರು.

ಯಾರು ಎಷ್ಟೇ ತೊಂದರೆ ನೀಡಿದರೂ, ಎಷ್ಟೇ ಕಷ್ಟ ಕೊಟ್ಟರೂ ನಮ್ಮ ದಿ ರೂಲರ್ಸ್ ಚಲನಚಿತ್ರ ಬಿಡುಗಡೆ ಆಗುತ್ತದೆ ಹಾಗೂ ಯಶಸ್ಸು ಕಾಣುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರ : ಸಂದೇಶ್


 rajesh pande