ಮತದಾನ ಮುಗಿದ ಬೆನ್ನಲ್ಲೇ ಜರ್ಮನಿಗೆ ಹಾರಿದ ಪ್ರಜ್ವಲ್ ರೇವಣ್ಣ
ಬೆಂಗಳೂರು, 28 ಏಪ್ರಿಲ್ (ಹಿ.ಸ): ಆ್ಯಂಕರ್:ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮತದಾನ ಮುಗಿದ
ಮತದಾನ ಮುಗಿದ ಬೆನ್ನಲ್ಲೇ ಜರ್ಮನಿಗೆ ಹಾರಿದ ಪ್ರಜ್ವಲ್ ರೇವಣ್ಣ


ಬೆಂಗಳೂರು, 28 ಏಪ್ರಿಲ್ (ಹಿ.ಸ): ಆ್ಯಂಕರ್:ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮತದಾನ ಮುಗಿದ ಬಳಿಕ ಜರ್ಮನಿಗೆ ತೆರಳಿದ್ದಾರೆ.

ಲೋಕಸಭಾ ಚುನಾವಣಾ ಸಮಯದಲ್ಲಿ ಅಶ್ಲೀಲ ವಿಡಿಯೋ ಪ್ರಕರಣ ದೊಡ್ಡ ಸದ್ದು ಮಾಡುತ್ತಿರುವ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಶನಿವಾರ ಬೆಳಗ್ಗೆ 3:15ಕ್ಕೆ ಬೆಂಗಳೂರಿನಿಂದ ಜರ್ಮನಿಯ ಫ್ರಂಕ್ ಫರ್ಟ್ ಗೆ ತೆರಳಿದ ಮಾಹಿತಿ ಲಭ್ಯವಾಗಿದೆ.

ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನಿಸಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande