ಟ್ರೋಲ್ ಮಾಡುತ್ತಿರುವ ಜನರಿಗೆ ಖಾರವಾಗಿ ಪ್ರತಿಕ್ರಿಯಿಸಿದ ಪ್ರಾಚಿ ನಿಗಮ್
ನವದೆಹಲಿ, 28 ಏಪ್ರಿಲ್ (ಹಿ.ಸ): ಆ್ಯಂಕರ್:ಜನರು ಚಾಣಕ್ಯ ನನ್ನೇ ಬಿಟ್ಟಿಲ್ಲ ಇನ್ನು ನಾನು ಯತಾವ ಲೆಕ್ಕ, ಯಾವುದಕ್ಕೂ
ಟ್ರೋಲ್ ಮಾಡುತ್ತಿರುವ ಜನರಿಗೆ ಖಾರವಾಗಿ ಪ್ರತಿಕ್ರಿಯಿಸಿದ ಪ್ರಾಚಿ ನಿಗಮ್


ನವದೆಹಲಿ, 28 ಏಪ್ರಿಲ್ (ಹಿ.ಸ): ಆ್ಯಂಕರ್:ಜನರು ಚಾಣಕ್ಯ ನನ್ನೇ ಬಿಟ್ಟಿಲ್ಲ ಇನ್ನು ನಾನು ಯತಾವ ಲೆಕ್ಕ, ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ ಎಂದು ಪ್ರಾಚಿ ನಿಗಮ್ಹೇ ಳಿದ್ದಾರೆ. ಈ ವರ್ಷ 10 ನೇ ತರಗತಿ ಯುಪಿ ಬೋರ್ಡ್ ಪರೀಕ್ಷೆಯಲ್ಲಿ 98.5 ಶೇಕಡಾ ಅಂಕಗಳನ್ನು ಗಳಿಸುವ ಮೂಲಕ ಅಗ್ರಸ್ಥಾನದಲ್ಲಿರುವ ಪ್ರಾಚಿ ನಿಗಮ್, ತನ್ನ ಮುಖದ ಕೂದಲಿನ ಬಗ್ಗೆ ಟ್ರೋಲ್ ಮಾಡುತ್ತಿರುವ ಜನರಿಗೆ ಪ್ರತಿಕ್ರಿಯಿಸಿದ್ದಾರೆ. ಪ್ರಾಚಿ ಅಂತಿಮವಾಗಿ ಮುಖ್ಯವಾದುದು ಅವಳ ಗುರುತುಗಳು ಮತ್ತು ಅವಳ ನೋಟವಲ್ಲ ಎಂದು ಹೇಳಿದರು.

ತನ್ನನ್ನು ಬೆಂಬಲಿಸಿದ ಜನರಿಗೆ ಪ್ರಾಚಿ ಧನ್ಯವಾದವನ್ನೂ ತಿಳಿಸಿದ್ದಾರೆ. “ಯುಪಿ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ ಎಂದು ನನ್ನ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗ, ಕೆಲವರು ನನ್ನನ್ನು ಟ್ರೋಲ್ ಮಾಡಿದರು. ಅದೇ ಸಮಯದಲ್ಲಿ, ನನ್ನನ್ನು ಬೆಂಬಲಿಸಿದವರೂ ಇದ್ದರು. ನಾನು ಅವರೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಅವರು ಹೇಳಿದರು. ನನ್ನ ಮುಖದ ಕೂದಲಿನ ಬಗ್ಗೆ ವಿಚಿತ್ರವೆನಿಸುವವರು ಟ್ರೋಲ್ ಮಾಡುವುದನ್ನು ಮುಂದುವರಿಸಬಹುದು, ಇದು ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಪ್ರಾಚಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯದಷ್ಟೇ ಅಲ್ಲ ಕೆಟ್ಟದ್ದೂ ಕೂಡ ಇದೆ. ಇದು ಕೆಲವರಿಗೆ ಉದ್ಯೋಗ ಇನ್ನೂ ಕೆಲವರಿಗೆ ಮನರಂಜನೆ ನೀಡುತ್ತದೆ. ಸೀತಾಪುರ ಮೂಲದ ಪ್ರಾಚಿ ನಿಗಮ್ 600 ಅಂಕಗಳಿಗೆ 591 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಈ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಮುಖದಲ್ಲಿ ಬೇಡದ ಕೂದಲು ಇದ್ದಿದ್ದರಿಂದ ಆಕೆಯ ಫೋಟೊವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಕೆಲವರು ವಿಕೃತಿ ಮೆರೆದಿದ್ದಾರೆ. ಅದೇ ಸಮಯದಲ್ಲಿ ಪ್ರಾಚಿಗೆ ಅಪಾರ ಬೆಂಬಲವೂ ಸಿಕ್ಕಿದೆ. ಇದೀಗ ಪ್ರಾಚಿ ಟ್ರೋಲ್ಗಳಿಗೆ ಖಡಕ್ ಉತ್ತರ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande