ನಾಳೆ ಸೇಡಂಗೆ ಪ್ರಿಯಾಂಕಾ ವಾದ್ರಾ
ಕಲಬುರಗಿ, 28 ಏಪ್ರಿಲ್ (ಹಿ.ಸ): ಆ್ಯಂಕರ್: ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣಕ್ಕೆ ಕಾಂಗ್ರೆಸ್ ಪಕ್ಷದ ರಾಷ್ತ್ರೀಯ ನಾಯ
ನಾಳೆ ಸೇಡಂಗೆ ಪ್ರಿಯಾಂಕಾ ವಾದ್ರಾ


ಕಲಬುರಗಿ, 28 ಏಪ್ರಿಲ್ (ಹಿ.ಸ): ಆ್ಯಂಕರ್:

ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣಕ್ಕೆ ಕಾಂಗ್ರೆಸ್ ಪಕ್ಷದ ರಾಷ್ತ್ರೀಯ ನಾಯಕಿ ಶ್ರೀಮತಿ ಪ್ರಿಯಾಂಕಾ ಗಾಂಧಿ ಅವರು ಆಗಮಿಸುವರು ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಹೇಳಿದರು.ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸೋಮವಾರ ಮಧ್ಯಾಹ್ನ ೨_೩೦ ಗಂಟೆಗೆ ಸೇಡಂ ಪಟ್ಟಣದ ಕ್ರೀಡಾಂಗಣದಲ್ಲಿ ಪ್ರಿಯಾಂಕಾ ಗಾಂಧಿ ಅವರು ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುವರು. ಸುಮಾರು ಮೂವತ್ತು ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದರು.ಸೋಮವಾರ ಮಧ್ಯಾಹ್ನ ೧೨ ಗಂಟೆಗೆ ಗುರುಮಿಠಕಲ್ ಪಟ್ಟಣದಲ್ಲಿ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಸೇಡಂ ಬಹಿರಂಗ ಸಭೆಯಲ್ಲೂ ಪಾಲ್ಗೊಳ್ಳುವರು ಎಂದು ಅವರು ಹೇಳಿದರು.ಲೋಕಸಭಾ ಚುನಾವಣೆ ಈಗ ನಿರ್ಣಾಯಕ ಹಂತಕ್ಕೆ ಬಂದಿದೆ.ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರ ಸೂಚನೆಗಳಿವೆ. ಗ್ಯಾರಂಟಿ ಯೋಜನೆಗಳು ಪರಿಣಾಮ ಬೀರಿವೆ. ಕಾರ್ಡ್ ಹಂಚಲು ಹೋದಾಗ ಮಹಿಳೆಯರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಸುಶಿಕ್ಷಿತರು ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಅವರ ಕೊಡುಗೆ ಶೂನ್ಯ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ.ಸಂಸತ್ತಿನಲ್ಲಿ ಕ್ಷೇತ್ರದ ಅಭಿವೃದ್ಧಿ ಕುರಿತು ಮಾತನಾಡಿಲ್ಲ. ಖರ್ಗೆ ಅವರ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಿಲ್ಲ. ಕೇವಲ ಜಾಧವ್ ಚಿಂಚೋಳಿ ಸಂಸದರಾಗಿದ್ದಾರೆ.

ಕಳೆದ ಬಾರಿ ಖರ್ಗೆ ಅವರ ಸೋಲಿನ ಕುರಿತು ಮತದಾರರಲ್ಲಿ ಪಶ್ಚಾತಾಪ ಇದೆ. ರಾಧಾಕೃಷ್ಣ ಅವರ ಕುರಿತು ಒಳ್ಳೆಯ ಅಭಿಪ್ರಾಯ ಇದೆ.ಆದರೂ ಕೂಡ ಕಾರ್ಯಕರ್ತರು ಬಹಳ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.ಸಂಸದ ಪ್ರಜ್ವಲ ರೇವಣ್ಣ ಅವರ ಪೆನ್ ಡ್ರೈವ್ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಜನ ಪ್ರಬುದ್ದರಿದ್ದಾರೆ. ನಾಯಕರು ಒಳ್ಳೆಯ ನಡತೆಯನ್ನು ಹೊಂದಬೇಕು. ಈ ರೀತಿ ನಡವಳಿಕೆ ಸರಿಯಲ್ಲ.ಮಹಿಳಾ ಆಯೋಗದವರು ಪತ್ರ ಬರೆದರೆ ಕ್ರಮ ಕೈಗೊಳ್ಳುತ್ತಾರೆ.ನಾವು ಅಧಿಕಾರದಲ್ಲಿ ಇರುವವರು ಕಾನೂನು ಪರಿಪಾಲನೆ ಮಾಡಬೇಕು ಎಂದು ಅವರು ತಿಳಿಸಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ೧೩೬ ಸ್ಥಾನಗಳು ಬಂದಿವೆ. ಇದು ಲೋಕಸಭಾ ಚುನಾವಣೆಯಲ್ಲಿಯೂ ಮುಂದುವರೆಯಲಿದೆ. ಎಲ್ಲ ಅಭಿಪ್ರಾಯ ಒಳ್ಳೆಯದು ಇದೆ.ಬಿಜೆಪಿಯವರು ಯಾವಾಗಲೂ ಸತ್ಯ ಹೇಳಲ್ಲ. ೪ ಲಕ್ಷ ಕೋಟಿ ತೆರಿಗೆ. ಕೊಡುತ್ತಿದ್ದು ಶೇಕಡಾ ೧೩ರಷ್ಟು ಮಾತ್ರ ತೆರಿಗೆ ಹಣ ಕೇಂದ್ರದಿಂದ ಬರುತಾ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಕೇಂದ್ರವು ನಮ್ಮ ಜನರ ಕುರಿತು ಸೇಡು ಇದೆ. ೧೮೦೦೦ ಕೋಟಿ ಬರ ಪರಿಹಾರ ಕೇಳಿದೆವು. ನಿಯೋಗ ಹೋಗಲಾಗಿದೆ. ಅವರು ದುರುದ್ದೇಶದಿಂದ ಕೊಡಲಿಲ್ಲ. ನಾವು ಮುಂಚೆಯೇ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸುಪ್ರೀಂ ಕೋರ್ಟ್ ಕಪಾಳ ಮೋಕ್ಷ ಮಾಡಿದೆ. ಶೇಕಡಾ ೨೦ ರಷ್ಟು ಮಾತ್ರ ಕೊಡುತ್ತಾ ಇದೆ. ನಮಗೆ ಪಾಲು ಬರುವಲ್ಲಿ ಬಹಳ ಅನ್ಯಾಯವಾಗಿದೆ. ನಂಬರ್ ಕೊಟ್ಟರೆ ಆಗದು. ಜಿಡಿಪಿಗೆ ಕಡಿಮೆ ಆಗಿದೆ.೪ ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ ಆಗಿದೆ. ಕೇವಲ ೩ರಷ್ಟು ಆಗಿದೆ.ಐವತ್ತು ಪ್ರತಿಶತ ಕೊಡಬೇಕು. ಅವರೇ ಹೇಳಿದ್ದಾರೆ. ಲೂಟಿ ಮಾಡುತ್ತೀರಿ ಅದಕ್ಕಾಗಿ ಕೊಟ್ಟಿಲ್ಲ ಎಂಬ ಕೇಂದ್ರ ಬಿಜೆಪಿ ನಾಯಕರ ಆರೋಪಕ್ಕೆ ಉತ್ತರಿಸಿದ ಅವರು. ಕೊಟ್ಟಿಲ್ಲ ಅಂದರೆ ಬಿಜೆಪಿ ಸರ್ಕಾರ ಇದ್ದಾಗ ಯಾಕೆ ಕೊಡಲಿಲ್ಲ. ಯಡಿಯೂರಪ್ಪ, ಬೊಮ್ಮಾಯಿ ಬಿಜೆಪಿಯ ನಾಲ್ಕು ವರ್ಷಗಳ ಅವಧಿಯಲ್ಲೂ ಕೊಟ್ಟಿಲ್ಲ ಎಂದು ಟೀಕಿಸಿದರು.

ಹಿಂದೂಸ್ತಾನ್ ಸಮಾಚಾರ್


 rajesh pande