ಬಿಹಾರದಿಂದ ಕಳ್ಳಸಾಗಾಣಿಕೆಯಾಗುತ್ತಿದ್ದ 95 ಮಕ್ಕಳ ರಕ್ಷಣೆ
ಲಕ್ನೋ, 27 ಏಪ್ರಿಲ್ (ಹಿ.ಸ):ಆ್ಯಂಕರ್: ಬಿಹಾರದಿಂದ ಉತ್ತರ ಪ್ರದೇಶಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 95 ಮಕ್ಕಳನ್ನು
children-illegally-being-taken-to-bihar-from-up-r


ಲಕ್ನೋ, 27 ಏಪ್ರಿಲ್ (ಹಿ.ಸ):ಆ್ಯಂಕರ್: ಬಿಹಾರದಿಂದ ಉತ್ತರ ಪ್ರದೇಶಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 95 ಮಕ್ಕಳನ್ನು ಅಯೋಧ್ಯೆಯಲ್ಲಿ ಮಕ್ಕಳ ಆಯೋಗದ ಅಧಿಕಾರಿಗಳು ರಕ್ಷಿಸಿದ್ದಾರೆ. ಈ ಪ್ರಕರಣ ಮಕ್ಕಳ ಕಳ್ಳಸಾಗಣೆಯ ಬಗ್ಗೆ ಆತಂಕವನ್ನು ಹೆಚ್ಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಅಯೋಧ್ಯೆಯ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸರ್ವೇಶ್ ಅವಸ್ತಿ, ಯುಪಿ ಮಕ್ಕಳ ಆಯೋಗದ ಸದಸ್ಯೆ ಸುಚಿತ್ರಾ ಚತುರ್ವೇದಿ ಅವರಿಂದ ಮಾಹಿತಿ ಪಡೆದ ಸಿಡಬ್ಲ್ಯೂಸಿ ಸದಸ್ಯರು ಮಕ್ಕಳನ್ನು ರಕ್ಷಿಸಿದ್ದಾರೆ. ಸುಚಿತ್ರಾ ಚತುರ್ವೇದಿಯವರು ಕರೆ ಮಾಡಿ, ಬಿಹಾರದಿಂದ ಅಪ್ರಾಪ್ತ ಮಕ್ಕಳನ್ನು ಅಕ್ರಮವಾಗಿ ಸಹರಾನ್ಪುರಕ್ಕೆ ಸಾಗಿಸಲಾಗುತ್ತಿದೆ. ಅವರು ಗೋರಖ್ ಪುರದಲ್ಲಿದ್ದಾರೆ ಮತ್ತು ಅಯೋಧ್ಯೆಯ ಮೂಲಕ ಹೋಗುತ್ತಾರೆ ಎಂದು ಮಾಹಿತಿ ನೀಡಿದರು. ಮಾಹಿತಿ ಬಂದ ತಕ್ಷಣ ಮಕ್ಕಳನ್ನು ರಕ್ಷಿಸಿದ್ದೇವೆ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande