ತೇರಹಳ್ಳಿ ಬೆಟ್ಟದಲ್ಲಿನ ಅರ್ಚಕರ ಬದಲಾವಣೆಗೆ ಗ್ರಾಮಸ್ಥರ ಒತ್ತಾಯ
ಕೋಲಾರ, ೨೩ ಏಪ್ರಿಲ್ (ಹಿ.ಸ) : ಆ್ಯಂಕರ್ : ನಗರ ಹೊರವಲಯದ ಶತಶೃಂಗ ಪರ್ವತದಲ್ಲಿರುವ ತೇರಹಳ್ಳಿಯ ಶ್ರೀ ಗೌರಿ ಗಂಗಾಧೇಶ್ವ
ಮಂಗಳವಾರ ತೇರಹಳ್ಳಿ ಗ್ರಾಮಸ್ಥರು ಪತ್ರಿಕಾಗೋಷ್ಠಿ ನಡೆಸಿದರು.


ಕೋಲಾರ, ೨೩ ಏಪ್ರಿಲ್ (ಹಿ.ಸ) :

ಆ್ಯಂಕರ್ : ನಗರ ಹೊರವಲಯದ ಶತಶೃಂಗ ಪರ್ವತದಲ್ಲಿರುವ ತೇರಹಳ್ಳಿಯ ಶ್ರೀ ಗೌರಿ ಗಂಗಾಧೇಶ್ವರ ದೇವಸ್ಥಾನದ ಅರ್ಚಕ ಕೆ.ಎಸ್.ಮಂಜುನಾಥ್ ದೀಕ್ಷಿತರನ್ನು ಬದಲಾಯಿಸಿ ಚಂದ್ರಶೇಖರ್ ದೀಕ್ಷಿತ್ ರವರನ್ನೇ ಮುಂದುವರೆಸಬೇಕು ಇಲ್ಲದೇ ಹೋದರೆ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ತೇರಹಳ್ಳಿ ಗ್ರಾಮಸ್ಥರು ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಗ್ರಾಮದ ಸತೀಶ್ ಮಾತನಾಡಿ ನಮ್ಮೂರ ಗ್ರಾಮ ದೇವಸ್ಥಾನಕ್ಕೆ ಇತಿಹಾಸ ಪ್ರಸಿದ್ಧವಾಗಿದೆ ಆದರೆ ಆರ್.ಐ ರಾಜೇಂದ್ರ ಪ್ರಸಾದ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ಗೌತಮ್ ರವರ ಕುಮ್ಮಕ್ಕಿನಿಂದ ಅರ್ಚಕ ಮಂಜುನಾಥ್ ದೀಕ್ಷಿತ್ ದೇವಾಲಯದಲ್ಲಿ ಸಮರ್ಪಕವಾಗಿ ಪೂಜೆ ಸಲ್ಲಿಸದೆ ವಿನಾಕಾರಣ ಪ್ರತಿ ದೇವತಾ ಕಾರ್ಯಗಳಿಗೂ ಕ್ಯಾತೆ ತೆಗೆಯುವುದಲ್ಲದೆ ಉತ್ಸವ ಮೂರ್ತಿಗಳನ್ನು ಬದಲಿಸಿರುವ ಅನುಮಾನ ಮೂಡುತ್ತಾ ಇದೆ ಪ್ರತಿ ವರ್ಷದಂತೆ ನಡೆಯಬೇಕಾಗಿದ್ದ ದೇವರ ಜಾತ್ರೆ ಮತ್ತು ಬ್ರಹ್ಮ ರಥೋತ್ಸವಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ದೇವರ ಕೆಲಸಕ್ಕೆ ಅಡ್ಡಿ ಪಡಿಸಿರುವುದರಿಂದ ಗ್ರಾಮದಲ್ಲಿ ಶಾಂತಿ ನೆಮ್ಮದಿ ಇಲ್ಲವಾಗಿದ್ದು,ತಕ್ಷಣ ಅವರನ್ನು ಬದಲಿಸಿ ಅರ್ಚಕ ಚಂದ್ರಶೇಖರ್ ರವರನ್ನು ಮುಂದುವರೆಸುವ0ತೆ ಒತ್ತಾಯಿಸಿದರು.

ಗ್ರಾಮದ ಶಿವಕುಮಾರ್ ಮಾತನಾಡಿ ಬೆಟ್ಟದ ಶಿವಗಂಗೆ ಗ್ರಾಮದ ವೆಂಕಟರಾಮಪ್ಪ, ಬಿನ್ ಮುನಿಶಾಮಪ್ಪ ಅವರು ಸ್ಮಶಾನ ಮತ್ತು ಸರ್ಕಾರಿ ಖರಾಬು ಜಾಗವನ್ನು ಜೆಸಿಬಿಗಳಿಂದ ಜಾಗವನ್ನು ನಿವೇಶನಗಳಾಗಿ ವಿಂಗಡಿಸಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದು ಇದನ್ನು ತಡೆಯಬೇಕು ಹಾಗೂ ಸ್ಮಶಾನ ಜಾಗ ಮತ್ತು ಸರ್ಕಾರಿ ಜಾಗವನ್ನು ಉಳಿಸಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತೇರಹಳ್ಳಿ ಗ್ರಾಮಸ್ಥರಾದ ಚೌಡಪ್ಪ, ಬೈರಪ್ಪ, ಕೃಷ್ಣಪ್ಪ, ಸೀನಪ್ಪ, ಮುನಿಯಪ್ಪ, ನಾರಾಯಣಸ್ವಾಮಿ, ಕರ್ನಾಟಕ ಮಾನವ ಹಕ್ಕುಗಳ ರಕ್ಷಣ ಸಮಿತಿ ರಾಜ್ಯಾಧ್ಯಕ್ಷ ಗಲ್ ಪೇಟೆ ಸಂತೋಷ್, ಜಿಲ್ಲಾಧ್ಯಕ್ಷ ಶ್ರೀನಾಥ್ ಮುಂತಾದವರು ಇದ್ದರು.

ಚಿತ್ರ : ಮಂಗಳವಾರ ತೇರಹಳ್ಳಿ ಗ್ರಾಮಸ್ಥರು ಪತ್ರಿಕಾಗೋಷ್ಠಿ ನಡೆಸಿದರು.


 rajesh pande